ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿ ಯುದ್ಧಕ್ಕೆ ಸನ್ನದ್ಧ ಎಂಬ ಸಂದೇಶ ನೀಡಿದ ಕಿಮ್

Social Share

ಸಿಯೋಲ್, ಅ. 13 – ದೀರ್ಘ ಶ್ರೇಣಿಯ ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳನ್ನು ನಾಯಕ ಕಿಮ್ ಜಾಂಗ್ ಉನ್ ಅವರು ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಇದು ಅವರ ಮಿಲಿಟರಿಯ ವಿಸ್ತರಿಸುತ್ತಿರುವ ಪರಮಾಣು ದಾಳಿ ಸಾಮಥ್ರ್ಯಗಳ ಯಶಸ್ವಿ ಪ್ರದರ್ಶನ ಮತ್ತು ನಿಜವಾದ ಯುದ್ಧಕ್ಕೆ ಸನ್ನದ್ಧವಾಗಿದೇವೆ ಎಂದು ಎಚ್ಚರಿಕೆ ನೀಡಿದೆ.

ಉತ್ತರ ಕೊರಿಯಾದಿಂದ ಈ ವರ್ಷ ದಾಖಲೆ ಸಂಖ್ಯೆಯ ಕ್ಷಿಪಣಿ ಪರೀಕ್ಷೆಗಳು, ಶಸ್ತ್ರಾಸ್ತ್ರ ಪ್ರದರ್ಶನಗಳನ್ನು ನಡೆಸಿದೆ ,ನಮ್ಮನ್ನು ಬೆದರಿಸಿದರೆ ಒಳಪಡಿಸಿದರೆ ಪರಮಾಣು ಶಸ್ತ್ರ ಪ್ರಯೋಗ ಮಾಡುವುದಾಗಿ ದಕ್ಷಿಣ ಕೊರಿಯಾ ಮತ್ತು ಅಮೆರಿಕಾಗೆ ನೇರವಾಗಿ ತಿಳಿಸಲಾಗಿದೆ.

ಕಿಮ್ ಅವರು ಉಕ್ರೇನ್‍ನ ಮೇಲೆ ರಷ್ಯಾದ ಯುದ್ಧದಿಂದ ಸೃಷ್ಟಿಸಲ್ಪಟ್ಟ ವ್ಯಾಕುಲತೆಯನ್ನು ಬಳಸಿಕೊಳ್ಳುತ್ತಿದ್ದಾರೆ, ಪೂರ್ಣ ಪ್ರಮಾಣದ ಪರಮಾಣು ಶಸ್ತ್ರಾಗಾರವನ್ನು ತುಂಬಿಸಿಕೊಳ್ಳುವ, ಶಸ್ತ್ರಾಸ್ತ್ರ ಅಭಿವೃದ್ಧಿಯನ್ನು ವೇಗಗೊಳಿಸಲು ಮಾರ್ಗ ಕಂಡುಕೊಂಡಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಮುಂದಿನ ವಾರಗಳು ಅಥವಾ ತಿಂಗಳುಗಳಲ್ಲಿ ಕಿಮ್ ಪರಮಾಣು ಪರೀಕ್ಷೆಯನ್ನು ನಡೆಸಬಹುದು ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ಹೇಳುತ್ತಾರೆ, ಈಗ ಅಮೆರಿಕ ನಡೆ ಕುತೂಹಲವಾಗಿದೆ. ಎರಡು ಕ್ಷಿಪಣಿಗಳು ಸುಮಾರು ಮೂರು ಗಂಟೆಗಳ ಕಾಲ ಹಾರಿದವು, ಅವು 2,000 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಹೊಡೆಯಬಹುದು ಎಂದು ತೋರಿಸಿದೆ ಉತ್ತರ ಕೊರಿಯಾದ ಅಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿಯು ತಿಳಿಸಿದೆ.

ಯುದ್ಧತಂತ್ರ ,ಯುದ್ಧಭೂಮಿ, ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ಸೇನಾ ಘಟಕಗಳಲ್ಲಿ ಈಗಾಗಲೇ ನಿಯೋಜಿಸಲಾದ ಶಸ್ತ್ರಾಸ್ತ್ರ ವ್ಯವಸ್ಥೆಯ ನಿಖರತೆ ಮತ್ತು ಯುದ್ಧ-ಹೋರಾಟದ ದಕ್ಷತೆಯ ಪರೀಕ್ಷೆಗಳು ನಡೆಸಲಾಗಿದೆ ಎಂದು ಹೇಳಿದೆ.

Articles You Might Like

Share This Article