ರಿಯೊಡೆಲ್ (ಅಮೆರಿಕ), ಡಿ -21-ಮುಂಜಾನೆ ಉತ್ತರ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವೆಡೆ ಮನೆಗಳು ಕುಸಿದಿವೆ ರಸ್ತೆಗಳು ಬಿರುಕುಬಿಟ್ಟು ಹಾನಿಗೊಂಡಿದ್ದು ಸುಮಾರು 60,000 ಮನೆಗಳಿಗೆ ನೀರು- ವಿದ್ಯುತ್ಯಿಲ್ಲದೆ ಜನರು ಪರಿತಪಿಸುತ್ತಿದ್ದಾರೆ.
ಇಬ್ಬರು ಸಾವನ್ನಪ್ಪಿ ಸುಮಾರು 12 ಜನರು ಗಾಯಗೊಂಡಿದ್ದಾರೆ. ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯ ಭೂಕಂಪವು ಸುಮಾರು 2.34 ಗಂಟೆಗೆ ಸಂಭವಿಸಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ವಾಯುವ್ಯಕ್ಕೆ 210 ಮೈಲುಗಳು ಮತ್ತು ಪೆಸಿಫಿಕ್ ಕರಾವಳಿಗೆ ಸಮೀಪದ ತೀರದಲ್ಲಿ ಭೂಕಂಪದ ಕೇಂದ್ರಎಂದು ತಿಳಿದು ಬಂದಿದ್ದು, ಸುಮಾರು 16 ಕಿಲೋಮೀಟರ್ ಭೂಮಿಯ ಆಳದಲ್ಲಿ ಕೇಂದ್ರ ಬಿಂದುವಿದೆ ಎಂದು ತುರ್ತು ಸೇವೆಗಳ ನಿರ್ದೇಶಕ ಮಾರ್ಕ್ ಗಿಲಾರ್ಡುಸಿ ಸ್ಯಾಕ್ರಮೆಂಟೊದಲ್ಲಿ ತಿಳಿಸಿದ್ದಾರೆ.
ನಿಯಮ ಪಾಲಿಸಿ, ಇಲ್ಲವೆ ಯಾತ್ರೆ ನಿಲ್ಲಿಸಿ : ಕೇಂದ್ರ ಸರ್ಕಾರ ಎಚ್ಚರಿಕೆ
ಮನೆಯ ಮೇಲ್ಛಾವಣಿಯಿಂದ ಕೆಳಗಿಳಿಯುತ್ತಿರುವಂತೆ ಭಾಸವಾಯಿತು ಕೂಡಲೆ ಎಚ್ಚೆತ್ತು ಹೊರಗೆ ಓಡಿದೆವು ಎಂದು ಸ್ಥಳೀಯರು ಘಟನೆ ವಿವರಿಸಿದ್ದಾರೆ. ರಮಣೀಯ ಪರ್ವತಗಳು ಸುಂದರ ಪ್ರದೇಶದಲ್ಲಿ ಭೂಕಂಪ ಸಂಭವಿಸಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸುಮಾರು 10 ಗಂಟೆಗಳ ನಂತರವೂ ನೆಲ ಮತ್ತು ಗೋಡೆಗಳು ಅಲುಗಾಡುತಿತ್ತುಅನೇಕ ಕಟ್ಟಡಗಳು ಮತ್ತು ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎರಡು ಹಂಬೋಲ್ಟ ಕೌಂಟಿ ಆಸ್ಪತ್ರೆಗಳಲ್ಲಿ ಜನರೇಟರ್ನಿಂದ ವಿದ್ಯುತ್ ಪಡೆದು ಕಾರ್ಯನಿರ್ವಹಿಸುತ್ತಿವೆ, ಆದರೆ ಭೂಕಂಪದ ಶಕ್ತಿಗೆ ಹೋಲಿಸಿದರೆ ಹಾನಿಯ ಪ್ರಮಾಣವು ಕಡಿಮೆ ಎಂದು ಕಂಡುಬಂದಿದೆ ಎಂದು ಕ್ಯಾಲಿಫೋರ್ನಿಯಾ ಗವರ್ನರ್ ವಕ್ತಾರ ಬ್ರಿಯಾನ್ ಫರ್ಗುಸನ್ ಹೇಳಿದ್ದಾರೆ.
ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿರ್ಬಂಧ, ಅಮೆರಿಕ ಖಂಡನೆ
ಕಳೆದ 1911 ರಲ್ಲಿ ನಿರ್ಮಿಸಲಾದ ಈಲ್ ನದಿಯ ಮೇಲಿನ ಸೇತುವೆಯು ಹಾನಿಗೊಂಡಿದ್ದು ಮತ್ತು ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಿಕ್ಟೋರಿಯನ್ ಪಟ್ಟಣವನ್ನು ತಲುಪಲು ಪರ್ವತಗಳ ಮೂಲಕ ದೀರ್ಘವಾದ ಮಾರ್ಗ ಇದಾಗಿದ್ದು,ಅಲ್ಲಿ ಎಲ್ಲಾ ಮುಖ್ಯ ರಸ್ತೆ ಐತಿಹಾಸಿಕ ಸ್ಥಳವೆಂದು ರಾಷ್ಟ್ರೀಯ ನೋಂದಣಿಯಲ್ಲಿದೆ.
#NorthernCalifornia, #earthquake, strikes,