ಸುಪ್ರೀಂ ನೀಡಿದ ರಫೇಲ್ ತೀರ್ಪಿಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ

Spread the love

Rafel--01

ದೆಹಲಿ,ಡಿ.14- ರಫೇಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸುಪ್ರೀಂಕೋರ್ಟ್‍ನಿಂದ ಸೂಕ್ತ ತೀರ್ಪು ಲಭಿಸುವುದಿಲ್ಲ ಎಂಬ ತನ್ನ ಸ್ಪಷ್ಟ ನಿಲುವು ಇಂದಿನ ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.  ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲ ಈ ದೊಡ್ಡ ಅವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕೆಂಬುದು ಪಕ್ಷವು ಹಿಂದಿನಿಂದಲೂ ಒತ್ತಾಯಿಸುತ್ತಿದೆ. ಅದನ್ನು ಈಗಲೂ ಮುಂದುವರೆಸಲಿದೆ ಎಂದರು.

ಜೆಪಿಸಿ ತನಿಖೆ ನಡೆದರೆ ಈ ಅವ್ಯವಹಾರದ ಸತ್ಯಾಂಶ ಬಹಿರಂಗವಾಗುತ್ತದೆ. ನಮ್ಮ ನಿರೀಕ್ಷೆಯಂತೆ ಸುಪ್ರೀಂಕೋರ್ಟ್‍ನಿಂದ ಸೂಕ್ತ ತೀರ್ಪು ಲಭಿಸಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

# ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ:
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸಿರುವಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯ, ಈ ದೊಡ್ಡ ಹಗರಣದ ಬಗ್ಗೆ ನಮಗೆ ಸೂಕ್ತ ನ್ಯಾಯ ಲಭಿಸಿಲ್ಲ. ಆದರೂ ನಾವು ಇದನ್ನು ಜನತಾ ನ್ಯಾಯಾಲಯದ ಮುಂದಿಡುತ್ತೇವೆ. ಅಲ್ಲಿ ನಮಗೆ ಸೂಕ್ತ ನ್ಯಾಯ ಲಭಿಸುತ್ತದೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook Comments

Sri Raghav

Admin