Saturday, September 23, 2023
Homeಇದೀಗ ಬಂದ ಸುದ್ದಿವಿಶ್ವಕಪ್ ಗೆಲ್ಲಲು ಕೊಹ್ಲಿಗಿಂತ ರೋಹಿತ್ ಪಾತ್ರ ಮುಖ್ಯ : ಸ್ಮಿತ್

ವಿಶ್ವಕಪ್ ಗೆಲ್ಲಲು ಕೊಹ್ಲಿಗಿಂತ ರೋಹಿತ್ ಪಾತ್ರ ಮುಖ್ಯ : ಸ್ಮಿತ್

- Advertisement -

ನವದೆಹಲಿ, ಸೆ. 11- ತವರಿನ ಅಂಗಳದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಬೇಕಾದರೆ ಪ್ರಮುಖ ಪಾತ್ರ ವಹಿಸಬೇಕಾಗಿರುವ ಆಟಗಾರನನ್ನು ಆಸ್ಟ್ರೇಲಿ ಯಾದ ಸ್ಪೋಟಕ ಆಟಗಾರ ಸ್ಟೀವನ್ ಸ್ಮಿತ್ ತಿಳಿಸಿದ್ದಾರೆ.

2015ರಲ್ಲಿ ಮೈಕಲ್ ಕ್ಲಾರ್ಕ್ ಸಾರಥ್ಯದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಸ್ಟೀವನ್ ಸ್ಮಿತ್ , 2023ರ ವಿಶ್ವಕಪ್ ಟೂರ್ನಿಯಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಲು ಹೊರಟಿದ್ದಾರೆ.

- Advertisement -

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ಟೀವನ್ ಸ್ಮಿತ್, ತವರಿನ ಅಂಗಳದಲ್ಲಿ ದಶಕದ ನಂತರ ಟೀಮ್ ಇಂಡಿಯಾ ಐಸಿಸಿ ಚಾಂಪಿಯನ್ ಪಟ್ಟ ಅಲಂಕರಿಸಬೇಕಾದರೆ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ , ವೇಗಿ ಜಸ್ಪ್ರೀತ್ ಬುಮ್ರಾ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗಿಂತ ನಾಯಕ ರೋಹಿತ್ಶ ರ್ಮಾರವರ ಪಾತ್ರ ನಿರ್ಣಾಯ ಕವಾಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‍ಗೆ ಬಿಸಿತುಪ್ಪವಾದ ಬಿ.ಕೆ.ಹರಿಪ್ರಸಾದ್

ರೋಹಿತ್ ಗೇಮ್ಚೇಂಜರ್:
ಸ್ಟಾರ್ ಸ್ಪೋರ್ಟ್ ಜೊತೆ ಮಾತನಾಡಿರುವ ಸ್ಟೀವನ್ ಸ್ಮಿತ್ ಅವರು, `ರೋಹಿತ್ ಶರ್ಮಾ ಅವರು ಐಸಿಸಿ ಆಯೋಜನೆಯ ಮಹಾಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುತ್ತಾರೆ, ಮುಂಬರುವ ವಿಶ್ವಕಪ್ ಟೂರ್ನಿಯಲ್ಲೂ ಅವರ ಬ್ಯಾಟ್ನಿಂದ ಸ್ಪೋಟಕ ಇನಿಂಗ್ ಹೊರಬಂದು ಗೇಮ್ ಚೇಂಜರ್ ಪಾತ್ರ ನಿಭಾಯಿಸಲಿದ್ದಾರೆ’ ಎಂದು ಸ್ಮಿತ್ ಹೇಳಿದ್ದಾರೆ.

2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿದ್ದ ಹಿಟ್ಮ್ಯಾನ್, 5 ಭರ್ಜರಿ ಶತಕಗಳಿಂದ 648 ರನ್ ಸಿಡಿ ಗೋಲ್ಡನ್ ಬ್ಯಾಟ್ ಪ್ರಶಸ್ತಿಗೆ ಪಾತ್ರರಾಗಿದ್ದರು.

#NotKohli, #Bumrah, #SteveSmith, #Veteran, #india, #ODIWorldCup2023,

- Advertisement -
RELATED ARTICLES
- Advertisment -

Most Popular