ಬೆಂಗಳೂರು ವಿವಿಯಲ್ಲಿ ಕಾಣಿಸಿಕೊಂಡಿದ್ದು ಚಿರತೆಯಲ್ಲ ಕಾಡುಬೆಕ್ಕು

Social Share

ಬೆಂಗಳೂರು,ಜ.14- ಜ್ಞಾನ ಭಾರತಿಯ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದು ಚಿರತೆಯಲ್ಲ, ಅದೇ ಆಕಾರ ಹೋಲುವ ಕಾಡುಬೆಕ್ಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆ ಕಾಣಿಸಿಕೊಂಡಿದೆ ಎಂದು ಸುದ್ದಿ ಸಾಕಷ್ಟು ಆತಂಕ ಸೃಷ್ಠಿಸಿತ್ತು,ರಾತ್ರಿ ವೇಳೆ ಒಡಾಡುವಾಗ ಎಚ್ಚರ ಎಂಬ ಸುತ್ತೋಲೆ ಹೊರಡಿಸಲಾಗಿತ್ತು ಆದರೆ ನ ಸಿಸಿಟಿವಿ ಫೂಟೇಜ್ ಗಮನಿಸಿದ ಅರಣ್ಯ ಇಲಾಖೆ ಮತ್ತು ವನ್ಯ ಜೀವಿ ಪ್ರತಿನಿಗಳು ಇದು ಕಾಡುಬೆಕ್ಕು ಎಂದು ದೃಡಪಡಿಸಿದ್ದಾರೆ.

ಅದು ಪ್ರೌಢಾವಸ್ಥೆಯಲ್ಲಿರುವ ಕಾಡುಬೆಕ್ಕು ಎಂಬ ಅಂಶ ಮನದಟ್ಟಾಯಿತು. ಆದರೆ ವಿಶ್ವವಿದ್ಯಾಲಯವು ಮಾಧ್ಯಮ ವರದಿಗಳನ್ನು ಆಧರಿಸಿ ಅಷ್ಟು ಹೊತ್ತಿಗೆ ಅಸೂಚನೆ ಹೊರಡಿಸಿತ್ತು. ಕನ್ನಳ್ಳಿ ಸಮೀಪದ ಗಂಗಾಡಿಪುರ ಗ್ರಾಮದ ಮಹಿಳೆಯೊಬ್ಬರು ಬೆಂಗಳೂರು ನಗರ ಆರ್ಎಫ್ಒ ಕಚೇರಿಯನ್ನು ಸಂಪರ್ಕಿಸಿ ತಮ್ಮ ಬಳಿ ಇದ್ದ ವಿಡಿಯೊ ತುಣುಕು ಹಂಚಿಕೊಂಡಿದ್ದರು.

ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸದಿದ್ರೆ ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ : ಹೆಚ್ಡಿಕೆ

ಕೃತಕ ಸೌಂಡ್ ಎಫೆಕ್ಟ್ ಮತ್ತು ಗರ್ಜಿಸುವ ಧ್ವನಿಗಳಿದ್ದ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ ವಿಷಯ ಏನೆಂದು ಮನದಟ್ಟಾಯಿತು. ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.

ನಂತರ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಈ ಪ್ರದೇಶದಲ್ಲಿ ಯಾರೊಬ್ಬರಿಗೂ ಚಿರತೆ ಕಾಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾಗಿ ಅವರು ಹೇಳಿದರು. ಸದ್ಯ ಯಾರು ಆತಂಕಪಡುವ ಅಗತ್ಯವಿಲ್ಲ ಂದು ಭರವಸೆ ನೀಡಿದ್ದಾರೆ.

#leopard, #wildcat, #BangaloreUniversity,

Articles You Might Like

Share This Article