ಐಟಿ ಕಂಪನಿಗಳಿಂದ ಒತ್ತುವರಿಯಾಗಿಲ್ಲ : ಅರವಿಂದ ಲಿಂಬಾವಳಿ

Social Share

ಬೆಂಗಳೂರು,ಸೆ.13- ಐಟಿ ಕಂಪನಿಗಳು ಜಾಗ ಒತ್ತುವರಿ ಮಾಡಿಲ್ಲ. ಬಿಲ್ಡರ್‍ಗಳು ಒತ್ತುವರಿ ಮಾಡಿದ್ದಾರೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಐಟಿ ಕಂಪನಿಗಳು ಜಾಗ ಒತ್ತುವರಿ ಮಾಡಿವೆ ಎಂಬ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಅದು ತಪ್ಪು ಮಾಹಿತಿ. ಬಿಲ್ಡರುಗಳು ಐಟಿ ಕಂಪನಿಗಳಿಗೆ ಕಟ್ಟಡ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಹಾಗಾಗಿ ಬಿಲ್ಡರ್‍ಗಳು ಒತ್ತುವರಿ ಮಾಡಿದ್ದಾರೆ. ಈ ಕುರಿತು ಸರ್ವೆ ಕಾರ್ಯ ಈಗಾಗಲೇ ಮುಗಿದಿದೆ ಎಂದು ಹೇಳಿದರು.

ಇದನ್ನೂ ಓದಿ : ಅತಿವೃಷ್ಟಿ, ಪ್ರವಾಹ ಕುರಿತ ಚರ್ಚೆಗೆ 3 ದಿನ ಅವಕಾಶ : ಸಭಾಧ್ಯಕ್ಷ ಕಾಗೇರಿ

ಮಾರ್ಕ್ ಮಾಡಿದ ಜಾಗ ಬಿಟ್ಟು ಕೊಡಿ, ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಹೆಚ್ಚು ಮಳೆ ಬಂದ ಕಾರಣ ನನ್ನ ಕ್ಷೇತ್ರದಲ್ಲಿ ಪ್ರವಾಹ ಆಗಿದೆ. ಇದಕ್ಕೆ ಮುಖ್ಯ ಕಾರಣ ಒತ್ತುವರಿ ಆಗಿರುವುದು. ಹಾಗಾಗಿ ಸರ್ಕಾರ ಒತ್ತುವರಿ ಕಾರ್ಯ ಈಗಾಗಲೇ ಶುರು ಮಾಡಿದೆ. ದೊಡ್ಡ ದೊಡ್ಡ ಬಿಲ್ಡರ್ಸ್, ಸೇರಿದಂತೆ ಯಾರೇ ಒತ್ತುವರಿ ಮಾಡಿದ್ದರು ತೆರವು ಮಾಡುತ್ತಿದ್ದೇವೆ. ನಾವು ಅವರಿಗೂ ತೆರವು ಮಾಡಿ ಎಂದು ಮನವಿ ಮಾಡಿದ್ದೇವೆ ಎಂದರು.

ಕಾನೂನು ಬಾಹಿರ ಪರವಾನಗಿ ಕೊಟ್ಟಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪದ ಸರಿ ಇದೆ. ಇಂದು ಈ ಬಗ್ಗೆ ಸಿಎಂ ಜೊತೆ ಚರ್ಚೆ ಆಗಿದೆ. ಯಾವ ಕಾಲದಲ್ಲಿ ಯಾವ ಅಧಿಕಾರಿಗಳು ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂಬ ಚರ್ಚೆ ಮಾಡಿದ್ದೇನೆ. ನಿರ್ದಾಕ್ಷಿಣ್ಯವಾಗಿ ಕ್ರಮ ತೆಗದುಕೊಳ್ಳುತ್ತೇವೆ ಎಂದು ಹೇಳಿದರು.

ಬಾಗಮನೆ ಕಂಪನಿ ತೆರವು ವಿಚಾರದಲ್ಲಿ ಲೋಕಾಯುಕ್ತಕ್ಕೆ ಹೋಗಿದ್ದಾರೆ. ಸರ್ವೆ ವರದಿ ಕೊಟ್ಟಿರುವುದಕ್ಕಾಗಿ, ಮೂರು ದಿನ ಕಾಲಾವಕಾಶ ಕೇಳಿದ್ದಾರೆ. ಆದ್ದರಿಂದ ಮೂರು ದಿನ ಬಳಿಕ ನಮ್ಮ ಅಧಿಕಾರಿಗಳು ತೆರವುಗೊಳಿಸುತ್ತಾರೆ ಎಂದು ಮಾಹಿತಿ ನೀಡಿದರು.

Articles You Might Like

Share This Article