ನಾಲ್ವರು ಕುಖ್ಯಾತ ಕನ್ನಗಳ್ಳರ ಬಂಧನ, 1.25 ಕೋಟಿ ಚಿನ್ನಾಭರಣ ವಶ

ಬೆಂಗಳೂರು, ಅ.21- ನಾಲ್ವರು ಕುಖ್ಯಾತ ಕನ್ನಗಳ್ಳರನ್ನು ಬಂಸಿಧಿರುವ ಬಾಣಸವಾಡಿ ಉಪ ವಿಭಾಗದ ಪೊಲೀಸರು ಸುಮಾರು 1.25 ಕೋಟಿ ರೂ. ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ 30 ಕನ್ನಗಳ ಕಳವು ಪ್ರಕರಣಗಳು ಪತ್ತೆಯಾಗಿವೆ.

ಪಿಸ್ತೂಲ್ ತೋರಿಸಿ ಸುಲಿಗೆ: ಕಾರಿ ನಲ್ಲಿ ಬಂದು ಪಿಸ್ತೂಲ್ ತೋರಿಸಿ ಸುಲಿಗೆ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸಲು ಬಂಸಿ 5 ಜೀವಂತ ಗುಂಡುಗಳ ಸಮೇತ ಪಿಸ್ತೂಲ್‍ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ ಸುಮಾರು 65 ಲಕ್ಷ ರೂ. ಬೆಲೆ ಬಾಳುವ 1 ಕೆ.ಜಿ 200 ಗ್ರಾಂ ತೂಕದ ಚಿನ್ನದ ಒಡವೆಗಳು , 5 ಕೆ.ಜಿ ಬೆಳ್ಳಿಯ ಒಡವೆಗಳು, ಒಂದು ಕಾರು , 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಬಾಣಸವಾಡಿ ಪೊಲೀಸ್ ಠಾಣೆಯ 11 ಪ್ರಕರಣಗಳು, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ 1 ಪ್ರಕರಣ, ಜೆ.ಸಿ.ನಗರ ಪೊಲೀಸ್ ಠಾಣೆ, ಪುಟ್ಟೇನಹಳ್ಳಿಪೊಲೀಸ್ ಠಾಣೆ, ಹೆಣ್ಣೂರು, ಕೋಲಾರ ನಗರ ಠಾಣೆ, ಅರಸೀಕೆರೆ ಟೌನ್ ಪೊಲೀಸ್ ಠಾಣೆ ಹಾಗೂ ಬೆಳಗಾವಿ ಜಿಲ್ಲೇಯ ಬೈಲಹೊಂಗಲ ಪೊಲೀಸ್ ಠಾಣೆಯ ತಲಾ 1 ಪ್ರಕರಣಗಳು ಸೇರಿದಂತೆ ಒಟ್ಟು 18 ಕನ್ನ ಕಳವು , ಕಾರು ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.

ಆರೋಪಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕೊಲೆ , ಸುಲಿಗೆ , ದರೋಡೆ , ಕನ್ನ ಕಳವು, ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಮೊದಲನೆ ಆರೋಪಿಯು ಬೆಂಗಳೂರು ನಗರದಲ್ಲಿಯೇ ಹುಟ್ಟಿ ಬೆಂಗಳೂರು ನಗರ ಪೊಲೀಸರು ಹುಡುಕಾಟದಲ್ಲಿರುವ ಕುಖ್ಯಾತ ಕನ್ನಕಳವು ಆರೋಪಿ ಅಜ್ಜತ್  ಹಾಗೂ ನ್ಯಾಯಾಂಗ ಬಂಧನದಲ್ಲಿರುವ ನಟೋರಿಯಸ್ ಆರೋಪಿಯಾದ ಖಲೀಂವುಲ್ಲೇÁ ಅಲಿಯಾಸ್ ಬಾಂಬೆ ಸಲೀಂ ಸ್ವಂತ ಸಹೋದರರ ಜೊತೆಯಲ್ಲಿಯೇ ಬೆಳೆದು ಅವರಂತೆಯೇ ನಟೋರಿಯಸ್ ಆರೋಪಿಯಾಗಿರುತ್ತಾನೆ.

ಈ ಇಬ್ಬರು ಜೊತೆಗೂಡಿ ಕಂಡ ಕಂಡಲ್ಲಿ ಹೆದ್ದಾರಿ ದರೋಡೆ, ಮನೆಗಳಿಗೆ ಹಾಕಿರುವ ಬೀಗಗಳನ್ನು ಹೊಡೆದು ಕನ್ನ ಕಳವು ಮಾಡುತ್ತಿದ್ದರಲ್ಲದೇ ಮನೆಯಲ್ಲಿ ಮಾಲೀಕರಿದ್ದರೆ ಪಿಸ್ತೂಲ್ ತೋರಿಸಿ ಬೆದರಿಸಿ ಮನೆಯಲ್ಲಿರುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದರು.
ಈ ಆರೋಪಿಗಳು ಸುಮಾರು ಒಂದೂವರೆ ವರ್ಷಗಳಿಂದ ಪೊಲೀಸರ ಕೈಗೂ ಸಿಗದೆ ಪಿಸ್ತೂಲ್ ತೋರಿಸಿ ದರೋಡೆ ಮಾಡುತ್ತಿದ್ದರು.

ರಾಮಮೂರ್ತಿನಗರದ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಸಿ 5 ಕನ್ನಗಳವು ಪ್ರಕರಣ ಹಾಗೂ ಬಾಣಸವಾಡಿ ಠಾಣೆಯ 1 ಕನ್ನಗಳವು ಪ್ರಕರಣ ಸೇರಿ ಒಟ್ಟು ಆರು ಪ್ರಕರಣಗಳಲ್ಲಿ ಸುಮಾರು 40 ಲಕ್ಷ ರೂ. ಬೆಲೆ ಬಾಳವು 676 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದೇ ಠಾಣೆಯ ಮತ್ತೊಂದು ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದು , ವಿಚಾರಣೆ ವೇಳೆ ನೀಡಿದ ಹೇಳಿಕೆ ಮೇರೆಗೆ 5 ಕನ್ನಗಳವು ಪ್ರಕರಣ ಹಾಗೂ 1 ಕಳ್ಳತನ ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳಿಗೆ ಸಂಬಂಸಿದಂತೆ 20 ಲಕ್ಷ ರೂ. ಬೆಲೆ ಬಾಳುವ 384.27 ಗ್ರಾಂ ತೂಕದ ಚಿನ್ನದಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆ ನಡೆಸಿದ ತಂಡವನ್ನು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್ ಅವರು ಶ್ಲಾಘಿಸಿದ್ದು , ನಗದು ಬಹುಮಾನ ಘೋಷಿಸಿದ್ದಾರೆ.