ದುಬೈ, ಜ. 17 ಆಸ್ಟ್ರೇಲಿಯಾದಿಂದ ಗಡೀಪಾರದ ನಂತರ ನಂ. 1 ಶ್ರೇಯಾಂಕಿತ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರು ಮುಂಜಾನೆ ದುಬೈಗೆ ಆಗಮಿಸಿದರು. ಅವರು ಮುಂದೆ ಎಲ್ಲಿಗೆ ಪ್ರಯಾಣಿಸಲು ಯೋಜಿಸಿದ್ದಾರೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರ್ಲೆ ಜೊಕೊವಿಕ್ ದುಬೈ ಫ್ರೀ ಟೆನಿಸ್ ಪಂದ್ಯಾವಳಿ ಯಲ್ಲಿ ಭಾಗವಹಿಸುವ ಸಾಧ್ಯತೆ ಇದ್ದು ಅದು ಫೆಬ್ರವರಿ 14 ನಂತರ ಪ್ರಾರಂಭವಾಗಲಿದೆ.
ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ ಟ್ರೋಫಿಗಳನ್ನು ಗೆದ್ದಿದ್ದಿರುವ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಈ ಭಾರಿ ಕಳೆದುಕೊಂಡಿದ್ದಾರೆ.ಪುರುಷರ ಟೆನಿಸ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರತಿಸ್ರ್ಪಧಿಗಳಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಅವರೊಂದಿಗೆ ಸಮಬಲ ಸಾಧಿಸಿದರು.
ಆದರೆ ಫೆಡರರ್ ಆಡುತ್ತಿಲ್ಲ ಒಟ್ಟಾರೆ ಇಂದು ಆರಂಭವಾದ ಪಂದ್ಯಾವಳಿಯಲ್ಲಿ ನಡಾಲ್ ಮಾತ್ರ ಮಾಜಿ ಆಸ್ಟ್ರೇಲಿಯನ್ ಓಪನ್ ಪುರುಷರ ಚಾಂಪಿಯನ್ ಆಗಿದ್ದಾರೆ.
