ಬ್ರಿಸ್ಬೇನ್, ಜ 6 – ಕೋವಿಡ್ ನಿಯಮ ಪಾಲಿಸದ ಹಿನ್ನಲೆಯಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೊವಾಕ್ ಜೊಕೊವಿಕ್ ಅವರಿಗೆ ಆಸ್ಟ್ರೇಲಿಯನ್ ಓಪನ್ ಪಂದ್ಯವಳಿಯನ್ನಾಡಲು ಅವಕಾಶ ನಿರಾಕರಿಸಲಾಗಿದೆ. ಮುಂದಿನ ಜನವರಿ 17 ರಿಂದ ಪ್ರಾರಂಭವಾಗುವ ಪ್ರಮುಖ ಟೆನಿಸ್ ಪಂದ್ಯಾವಳಿಗಾಗಿ ಸಿದ್ದತೆ ನಡೆಯುತ್ತಿದ್ದು ಆಸ್ಟ್ರೇಲಿಯಾದಲ್ಲಿ ವ್ಯಾಕ್ಸಿನೇಷನ್ ಕಡಾಯ ಮತ್ತು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ವಿಕ್ಟೋರಿಯಾ ರಾಜ್ಯ ಸರ್ಕಾರದಿಂದ ವೈದ್ಯಕೀಯ ವಿನಾಯಿತಿ ಪಡೆದ ನಂತರ ಜೊಕೊವಿಕ್ ಕಳೆದ ರಾತ್ರಿ ಆಸ್ಟ್ರೇಲಿಯಾಕ್ಕೆ ಬಂದಿಳಿದರು.ಆದರೆ ವೈದ್ಯಕೀಯ ಪ್ರಮಾಣ ಪತ್ರ ಸಲಿಸದಿರುವುದು ಹಾಗು ಲಸಿಕೆ ಪಡೆಯದಿರುವುದನ್ನು ಖಚಿತಪಡಿಸಿಕೊಂಡು ಆಸ್ಟ್ರೇಲಿಯಾ ಸರ್ಕಾರ ಅವರ ವೀಸಾವನ್ನು ರದ್ದುಗೊಳಿಸಿ ದೇಶ ಪ್ರವೇಶ ನಿರಾಕರಿಸಿದೆ.
ಅವಶ್ಯಕತೆಗಳನ್ನು ಪೂರೈಸಲು ಜೊಕೊವಿಕ್ ವಿಫಲರಾಗಿದ್ದಾರೆ, ಅವರ ವೈದ್ಯಕೀಯ ವಿನಾಯಿತಿಯನ್ನು ಪರಿಶೀಲಿಸಿದ ನಂತರ ವೀಸಾ ರದ್ದತಿಯಾಗಿದೆ ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ಅವರು ಹೇಳಿದರು.ಜೊಕೊವಿಕ್ ತಂಡವು ತಪ್ಪು ರೀತಿಯ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಇಂದು ಬೆಳಿಗ್ಗೆ ಇದೇ ವಿಷಯ ಆಸ್ಟ್ರೇಲಿಯದ್ಯಂತ ಚರ್ಚೆಯಾಗುತ್ತಿದೆ.
