ತಲೆಯ ಮೇಲೆ ನೀರಿನ ಬಾಟಲ್‌ ಬಿದ್ದ ನೋವಿನಲ್ಲಿ ಪಂದ್ಯ ಸೋತ ಜೋಕೋವಿಕ್‌

ರೋಮ್‌,ಮೇ 13- 24 ಬಾರಿಯ ಗ್ರಾನ್‌ಸ್ಲಾಮ್‌ ಚಾಂಪಿಯನ್‌ ನೊವಾಕ್‌ ಜೋಕೋವಿಕ್‌ ಅವರು ಇಟಾಲಿಯನ್‌ ಓಪನ್‌ ಟೆನ್ನಿಸ್‌ ಪಂದ್ಯಾವಳಿಯ ಮೂರನೇ ಸುತ್ತಿನ ಪಂದ್ಯದಲ್ಲಿ 29ನೇ ಶ್ರೇಯಾಂಕದ ಅಲೆಜಾಂಡ್ರೋ ಟ್ಯಾಬಿಲೋ ಅವರ ಎದುರು ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ. ತಮ್ಮ ನೆಚ್ಚಿನ ಪಂದ್ಯಾವಳಿಗಳಲ್ಲಿ ಒಂದಾದ ಈ ಟೂರ್ನಿಯಲ್ಲಿ ಇದು ತಮ್ಮ ಅತ್ಯಂತ ಕಳಪೆ ಪ್ರದರ್ಶನಗಳಲ್ಲಿ ಒಂದೆಂದು ನೊವಾಕ್‌ ಒಪ್ಪಿಕೊಂಡಿದ್ದಾರೆ. ಶುಕ್ರವಾರ ಮೊದಲ ಪಂದ್ಯವನ್ನು ಗೆದ್ದ ಬಳಿಕ ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಬಾಟಲ್‌ ತಲೆಯ ಮೇಲೆ ಬಿದ್ದು ನೋವಿನಿಂದ ನರಳಿದ್ದಾರೆ. … Continue reading ತಲೆಯ ಮೇಲೆ ನೀರಿನ ಬಾಟಲ್‌ ಬಿದ್ದ ನೋವಿನಲ್ಲಿ ಪಂದ್ಯ ಸೋತ ಜೋಕೋವಿಕ್‌