HSRP ನಂಬರ್ ಪ್ಲೇಟ್ ಅಳವಡಿಕೆಗೆ ನ.30 ಕೊನೇ ದಿನ

ಬೆಂಗಳೂರು, ನ.15– ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ನಿಗದಿಪಡಿಸಿರುವ ಕಾಲಮಿತಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಕಳೆದ 2019ರ ಏಪ್ರಿಲ್ ಒಂದಕ್ಕಿಂತ ಪೂರ್ವದಲ್ಲಿ ನೋಂದಣಿಯಾಗಿರುವ ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಬೇಕಾಗಿದೆ. ಈಗಾಗಲೇ ಈ ನೋಂದಣಿ ಫಲಕ ಅಳವಡಿಕೆಗೆ ನಿಗದಿಪಡಿಸಿದ್ದ ಅಂತಿಮ ಗಡುವನ್ನು ಸಾರಿಗೆ ಇಲಾಖೆ ಸುಮಾರು ನಾಲ್ಕು ಬಾರಿ ವಿಸ್ತರಣೆ ಮಾಡಿದೆ.