ಸಿದ್ದು ಪಟಾಲಂನಿಂದ 400 ಕೋಟಿ ರೂ. ಆಸ್ತಿ ಲೂಟಿ : N.R.ರಮೇಶ್

Social Share

ಬೆಂಗಳೂರು,ನ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಣಾಕ್ಷತನದಿಂದ ಡಿ-ನೋಟಿಫಿಕೇಷನ್ ಹೆಸರು ಬಳಸದೆ 400ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸ್ವತ್ತು ಪರರ ಪಾಲಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಇಡಿ ಪ್ರಕರಣವನ್ನು ಸೂಕ್ತ ತನಿಖೆಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಅದೇ ರೀತಿ ಸಿದ್ದರಾಮಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿದಿದ್ದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಮಹೇಂದ್ರ ಕುಮಾರ್ ಜೈನ್ , ಅೀಧಿನ ಕಾರ್ಯದರ್ಶಿ ನರಸಿಂಹಮೂರ್ತಿ, ನಗರಾಭಿವೃದ್ಧಿ ಇಲಾಖೆ ಕಾನೂನು ಕೋಶದ ಅಧಿಕಾರಿಗಳಾಗಿದ್ದ ಎರ್ಮಲ್ ಕಲ್ಪನಾ, ಬಿಡಿಎ ಆಯುಕ್ತರಾಗಿದ್ದ ಶಾಂಭಟ್ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧವೂ ರಮೇಶ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ಭೂಪಸಂದ್ರ ಗ್ರಾಮದ ಸರ್ವೆ ನಂ. 20 ರಲ್ಲಿನ 03 ಎಕರೆ 34 ಗುಂಟೆ ಮತ್ತು ಸರ್ವೆ ನಂ. 21 ರಲ್ಲಿ 02 ಎಕರೆ 32 ಗುಂಟೆ ಸೇರಿದಂತೆ ಒಟ್ಟು 06 ಎಕರೆ 26 ಗುಂಟೆ ವಿಸ್ತೀರ್ಣದ ಸುಮಾರು 400 ಕೋಟಿ ರೂ. ಗಳಿಗೂ. ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತನ್ನು ಸಿದ್ದರಾಮಯ್ಯ ಅಂಡ್ ಪಟಾಲಂ ಲಪಾಟಯಿಸಿದೆ ಎಂದು ರಮೇಶ್ ಆರೋಪಿಸಿದ್ದಾರೆ.

ಜೈಲಿನಿಂದ ಹೊರಬಂದು ಗೆಳತಿಗೆ ಗುಂಡಿಟ್ಟು ಹತ್ಯೆ

1984 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಕಾರವು ಆರ್ಎಂವಿ 2ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಭೂಪಸಂದ್ರದ ಕೆಲ ಭೂಮಿಯನ್ನು ಭೂ ಸ್ವಾಧಿನ ಮಾಡಿಕೊಂಡು ಭೂ ಮಾಲೀಕರಿಗೆ ನೀಡಬೇಕಾಗಿದ್ದ ಪರಿಹಾರ ಮೊತ್ತವನ್ನು ಸಿವಿಲ್ ನ್ಯಾಯಾಲಯದಲಲ್ಲಿ ಠೇವಣಿ ಇಟ್ಟಿರುತ್ತದೆ.

ಕಾನೂನು ರೀತ್ಯಾ ಭೂ ಸ್ವಾೀಧಿನಪಡಿಸಿಕೊಂಡ ಸ್ವತ್ತುಗಳನ್ನು ಬಿಡಿಎ ತನ್ನ ಎಂಜಿನಿಯರಿಂಗ್ ಇಲಾಖೆಯ ಮೂಲಕ ಕೋಟ್ಯಾಂತರ ರೂಪಾಯಿ ವೆಚ್ಛ ಮಾಡಿ ಬಡಾವಣೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ಕಾನೂನು ರೀತ್ಯಾ 42 ಮಂದಿ ಅರ್ಜಿದಾರರಿಗೆ ಹಂಚಿಕೆಯನ್ನು ಮಾಡಿ ಸ್ವಾೀನ ಪತ್ರವನ್ನು ನೀಡಲಾಗಿತ್ತು.

ಆದರೆ, ಭೂ ಮಾಲೀಕರು ಪರಿಹಾರ ಧನದ ಬಗ್ಗೆ ತಕರಾರು ಎತ್ತಿ ಪ್ರಕರಣವನ್ನು ಉಚ್ಛ ನ್ಯಾಯಲಯ ಹಾಗೂ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿರುತ್ತಾರೆ. ವಾದ ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ಕಳೆದ 2015ರಲ್ಲಿ ಸದರಿ ಸ್ವತ್ತು ಬಿಡಿಎ ಮಾಲೀಕತ್ವಕ್ಕೆ ಸೇರಿದ್ದು ಎಂದು ತೀರ್ಪು ನೀಡಿರುತ್ತದೆ.

ಆದರೆ, ಆರು ಎಕರೆ ಭೂಮಿ ತಮಗೆ ಸೇರಿದ್ದು ಎಂದು ಮೂರನೇ ವ್ಯಕ್ತಿಗಳಾದ ಜಯಲಕ್ಷ್ಮಮ್ಮ, ವಿಜಯಲಕ್ಷ್ಮಿ ಹಾಗೂ ಪ್ರಭಾಕರ್ ಎಂಬುವರು ಹೈಕೋರ್ಟ್ ಮೆಟ್ಟೆಲೇರುತ್ತಾರೆ. ನ್ಯಾಯಲಯದಲ್ಲಿ ತೀರ್ಪು ಅವರ ಪರವೇ ಬರುತ್ತದೆ.

ಈ ತೀರ್ಪಿನ ವಿರುದ್ಧ ಬಿಡಿಎ ಮೇಲ್ಮನವಿ ಸಲ್ಲಿಸುತ್ತದೆ. ಆದರೆ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಉಚ್ಛ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಯಾವುದೇ ಮೇಲ್ಮನವಿಯನ್ನು ಸಲ್ಲಿಸಿರುವುದಿಲ್ಲ.
ಸುಮಾರು 400 ಕೋಟಿ ರೂ. ಬೆಲೆ ಬಾಳುವ ಆರು ಎಕರೆ ಭೂಮಿ ಮೂರನೇ ವ್ಯಕ್ತಿಗಳ ಪಾಲಾಗಲು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಸಹಕಾರ ನೀಡಿದ್ದಾರೆ. ಅವರಿಗೆ ಕೆಲ ಸರ್ಕಾರಿ ಅಧಿಕಾರಿಗಳು ಸಹಕರಿಸಿದ್ದಾರೆ ಎನ್ನುವುದು ರಮೇಶ್ ಅವರ ಆರೋಪವಾಗಿದೆ.

ತುಂಡು ತುಂಡಾಗಿ ಕತ್ತರಿಸುವುದಾಗಿ 2020ರಲ್ಲೇ ಬೆದರಿಕೆ ಹಾಕಿದ್ದ ಅಫ್ತಾಬ್‍

ಮುಂದಿನ ದಿನಗಳಲ್ಲಿ ತಾವು ಮಾಡಿದ ಕಾನೂನು ಬಾಹಿರ ಕಾರ್ಯ ಒಂದು ವೇಳೆ ಹೊರಬಂದರೂ ಸಹ ತಾವು ಇದರಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಅತ್ಯಂತ ನಾಜೂಕಾಗಿ ನಗರಾಭಿವೃದ್ಧಿ ಇಲಾಖೆಯ ಕಾನೂನು ಕೋಶದ ಅಧಿಕಾರಿಯ ಅಭಿಪ್ರಾಯವನ್ನು ಸಿದ್ಧರಾಮಯ್ಯನವರು ಪಡೆದುಕೊಂಡು ಚಾಣಾಕ್ಷತನ ಮೆರೆದಿದ್ದಾರೆ.

ಕಾನೂನು ಕೋಶದ ಮುಖ್ಯಸ್ಥರೆ ಅಕ್ರಮಕ್ಕೆ ಸಹಕರಿಸಿದ ಪರಿಣಾಮ ಬಿಡಿಎ ನ್ಯಾಯಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆದ ಪರಿಣಾಮ 400 ಕೋಟಿ ಮೌಲ್ಯದ ಭೂಮಿ ಕಂಡವರ ಪಾಲಾಗಿದೆ.

ನಿಮ್ಮ ಆಧಾರ್ ಭಯೋತ್ಪಾದಕರ ಕೈಗೆ ಸಿಗದಿರಲಿ : ಜನರಿಗೆ ಅಲೋಕ್ ಕುಮಾರ್ ಕಿವಿಮಾತು

ಹೀಗಾಗಿ 400 ಕೋಟಿ ರೂ.ಮೌಲ್ಯದ ಭೂಮಿ ಕಂಡವರ ಪಾಲಾಗಲು ಕಾರಣರಾಗಿರುವ ಸಿದ್ದರಾಮಯ್ಯ ಹಾಗೂ ಅಂದಿನ ಕೆಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

NR Ramesh, siddaramaiah, lokayukta, BDA, d notification,

Articles You Might Like

Share This Article