ನವದೆಹಲಿ,ಮಾ.15- ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಹಂತ ಹಂತವಾಗಿ ಅನುದಾನ ಕಡಿತ ಮಾಡಿ, ಅನಗತ್ಯವಾದ ಗೊಂದಲಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಭಾಗದ ಉದ್ಯೋಗ ಖಾತ್ರಿಗೆ ಮಹತ್ವದ ಕೊಡುಗೆ ನೀಡಿರುವ ಮನ್ರೇಗಾ ಯೋಜನೆಯನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಸಿದೆ ಎಂದು ಹಲವು ನಾಗರಿಕ ಸಮಾಜ ಸಂಘಗಳು ಮತ್ತು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.
ಮಾರ್ಚ್ 14 ರಂದು ನವದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್‍ನ ಡೆಪ್ಯುಟಿ ಸ್ಪೀಕರ್‍ಗಳ ಸಭಾಂಗಣದಲ್ಲಿ ಸಂಸತ್ತಿನ ಸದಸ್ಯರಿಗಾಗಿ ನಡೆದ ಬ್ರೀಫಿಂಗ್‍ನಲ್ಲಿ, ನಾಗರಿಕ ಸಮಾಜದ ಸದಸ್ಯರು 2021ರ ಡಿಸೆಂಬರ್ 2021ನಿಂದಲೂ ಕಾರ್ಮಿಕರಿಗೆ ವೇತನ ಪಾವತಿ ಮಾಡದೆ ಕೋಟಿಗಟ್ಟಲೆ ಕಾರ್ಮಿಕರು ಸಮಸ್ಯೆಗೆ ಸಿಲುಕುವಂತೆ ಮಾಡಲಾಗಿದೆ ಎಂದು ವಿವರಿಸಿದರು.
ಅಸಮರ್ಪಕ ಅನುದಾನ, ಹಾಜರಾತಿ ವ್ಯವಸ್ಥೆಯಲ್ಲಿ ಅನಾನುಕೂಲಕರ ಬದಲಾವಣೆ, ವೇತನ ಪಾವತಿ ವಿಧಾನದಲ್ಲಿನ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು.
ತಿಂಗಳುಗಟ್ಟಲೆ ತಾಯಿಯ ಶವ ಬಚ್ಚಿಟ್ಟಿದ್ದ ಮಗಳು
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಎಂಜಿಎನ್‍ಆರ್‍ಇಜಿಎ) ಅಡಿಯಲ್ಲಿ ಕೆಲಸ ಮಾಡುವ ಜನರ ಹಕ್ಕನ್ನು ರಕ್ಷಿಸುವಂತೆ ಸಂಸದರಿಗೆ ಸಂಘ ಸಂಸ್ಥೆಗಳು ಮನವಿ ಮಾಡಿದವು.
ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷಗಳ ಸಂಸದರಾದ ಸಂಜಯ್ ಸಿಂಗ್ (ಆಮ್ ಆದ್ಮಿ ಪಕ್ಷ), ದಿಗ್ವಿಜಯ ಸಿಂಗ್, ಉತ್ತಮ್ ಕುಮಾರ್ ರೆಡ್ಡಿ ಮತ್ತು ಕುಮಾರ್ ಕೇತ್ಕರ್ (ಕಾಂಗ್ರೆಸ್ ಪಕ್ಷ), ಎಸ್. ಸೆಂಥಿಲ್ ಕುಮಾರ್ (ದ್ರಾವಿಡ ಮುನ್ನೇತ್ರ ಕಳಗಂ), ಜವಾಹರ್ ಸಿರ್ಕಾರ್ (ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷ) ಇತರರೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಲಾಗಿದೆ.
ಬಜೆಟ್ ಹಂಚಿಕೆಯನ್ನು ಕಡಿಮೆಗೊಳಿಸುವ ಮೂಲಕ ಗ್ರಾಮೀಣ ಭಾಗದ ಉದ್ಯೋಗ ಖಾತ್ರಿಯನ್ನು ಕಡೆಗಣಿಸಲಾಗಿದೆ ಎಂದು ರಾಂಚಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರೊಫೆಸರ್ ಜೀನ್ ಡ್ರೆಜ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ) ಸರ್ಕಾರವು ಎಂಜಿಎನ್‍ಆರ್‍ಇಜಿಎ ಮೇಲೆ ಮೂರು ಹಂತದಲ್ಲಿ ದಾಳಿ ನಡೆಸಿದೆ. ಮೊದಲ ಹಂತದಲ್ಲಿ ಅಸಮರ್ಪಕ ನಿ ಹಂಚಿಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಮತ್ತು ಮೂರನೇ ಹಂತದಲ್ಲಿ ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಾಫ್ಟ್‍ವೇರ್ (ಎನ್‍ಎಂಎಂಸ್) ಅಪ್ಲಿಕೇಶನ್ ಮೂಲಕ ಸಮಸ್ಯೆ ಸೃಷ್ಟಿಸಲಾಗಿದೆ ಎಂದು ವಿವರಿಸಿದ್ದಾರೆ.
ಈ ವರ್ಷ ಕೇವಲ 60 ಸಾವಿರ ಕೋಟಿ ರೂಪಾಯಿಗಳ ಹಂಚಿಕೆ ಮಾಡಲಾಗಿದೆ. ಯೋಜನೆ ಆರಂಭವಾದ ದಿನದಿಂದಲೂ ಇದು ಅತ್ಯಂತ ಕಡಿಮೆ ಹಂಚಿಕೆಯಾಗಿದೆ. ಕ್ರಮೇಣ ನಿಗಳು ಖಾಲಿಯಾಗುತ್ತವೆ, ಯೋಜನೆಯು ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ವೇತನ ಪಾವತಿ ವಿಳಂಬವಾಗಲಿದೆ. ಕೆಲಸ ಮಾಡಿದವರು ತಿಂಗಳುಗಟ್ಟಲೆ ಹಣಕ್ಕಾಗಿ ಕಾಯಬೇಕಾಗುತ್ತದೆ. ಡಿಜಿಟಲ್ ಹಾಜರಾತಿಯ ತಾಂತ್ರಿಕ ಮತ್ತು ನೆಟ್‍ವರ್ಕ್ ಸಮಸ್ಯೆಗಳಿಂದ ಕಾರ್ಮಿಕರು ವೇತನದಿಂದ ವಂಚಿತವಾಗುವ ಸಾಧ್ಯತೆ ಇದೆ. ಆಧಾರ್-ಆಧಾರಿತ ಪಾವತಿಯು ತುಂಬಾ ಸಂಕೀರ್ಣವಾಗಿದೆ. ಅನೇಕ ಬ್ಯಾಂಕರ್‍ಗಳು ಹೊಸ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ.
ಈ ವ್ಯವಸ್ಥೆಯ ಮೂಲಕ ಹೆಚ್ಚಿನ ಕಾರ್ಮಿಕರಿಗೆ ವೇತನವನ್ನು ನೀಡಲಾಗುವುದಿಲ್ಲ ಎಂದು ಆಕ್ಷೇಪಿಸುತ್ತಿದ್ದಾರೆ. ಕಾರ್ಮಿಕರಿಗೆ ಮಾಡಿದ ಕೆಲಸಕ್ಕೆ ವೇತನವನ್ನು ನೀಡದಿರುವುದು ಕಾನೂನುಬಾಹಿರ ಮತ್ತು ಅಪರಾಧವಾಗಿದೆ ಎಂದು ಅವರು ಅಸಮಧಾನ ವ್ಯಕ್ತಪಡಿಸಿದರು.
ರಾಜಸ್ಥಾನದ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯ ನಿಖಿಲ್ ದೆ, ಜಾರ್ಖಾಂಡ್‍ನ ನರೇಗಾ ಕಾವಲು ಸಮಿತಿಯ ಜೇಮ್ಸ್ ಹೆರೆಂಜ್, ಬಿಹಾರದ ಜನ್ ಜಾಗರಣ ಶಕ್ತಿ ಸಂಘಟನೆ ಆಶಿಶ್ ರಂಜನ್, ಉತ್ತರ ಪ್ರದೇಶದ ಸಂಗತಿನ್ ಕಿಸಾನ್ ಮಜ್ದೂರ್ ಸಂಘಟನೆಯ ರಿಚಾ ಸಿಂಗ್ ನರೇಗಾ ದುರ್ಬಲಗೊಳಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ಪಶ್ಚಿಮ ಬಂಗಲ್ ಖೇತ್ ಮಜ್ದೂರ್ ಸಮಿತಿ ಅನುರಾಧ ತಲ್ವಾರ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಆಧಾರ್-ಆಧಾರಿತ ಪಾವತಿ ಮತ್ತು ಮೊಬೈಲ್ ಮಾನಿಟರಿಂಗ್ ಸಾಫ್ಟ್‍ವೇರ್ ಅಪ್ಲಿಕೇಶನ್‍ನಿಂದಾಗಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ವಂಚನೆಗೆ ಒಳಗಾಗಿದ್ದಾರೆ ಎಂದು ಸಬೀತು ಪಡಿಸುವ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಲಯಿತು.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಹೊಸ ವ್ಯವಸ್ಥೆ ಎಬಿಪಿಎಸ್‍ಗೆ ನರೇಗಾದಲ್ಲಿ ನೋಂದಾಯಿತ ಶೇ.43 ಕಾರ್ಮಿಕರು ಮಾತ್ರ ಅರ್ಹರಾಗಿದ್ದಾರೆ. ಇದರಿಂದ 15 ಕೋಟಿ ಮಂದಿ ಉದ್ಯೋಗ ವಂಚಿತರಾಗಲಿದ್ದಾರೆ. ಇದು ಗ್ರಾಮೀಣ ಭಾಗದ ದೊಡ್ಡ ಸಮಸ್ಯೆಯಾಗಲಿದೆ ಎಂದು ವಿವರಿಸಿದರು.
ಸಂಸತ್‍ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಎಂಬ ಬೇಧ ಇಲ್ಲದೆ ಎಲ್ಲಾ ಸಂಸದರು ಸಮಸ್ಯೆಯ ಮೇಲೆ ಬೆಳಕು ಚೆಲ್ಲಬೇಕು. ಕೇಂದ್ರ ಸಚಿವರು ರಾಜ್ಯ ಸರ್ಕಾರಗಳೇ ನರೇಗಾ ಯೋಜನೆಯಡಿ ವೇತನ ಪಾವತಿ ಮಾಡುವಂತೆ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಮುಖ್ಯ ಶಿಕ್ಷಕ ಬಂಧನ
ಇದು ಉದ್ಯೋಗ ಖಾತ್ರಿ ಕಾಯ್ದೆಗೆ ಸಂಪೂರ್ಣ ವಿರುದ್ಧವಾಗಿದೆ. ಸಂಸತ್‍ನಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಕೇಂದ್ರ ಸಚಿವರ ಹೇಳಿಕೆಯನ್ನು ತಿದ್ದುಪಡಿ ಮಾಡಿಸಬೇಕು ಎಂದು ಒತ್ತಾಯಿಸಲಾಗಿದೆ.
ನರೇಗಾ ಕಾರ್ಮಿಕರ ಕಷ್ಟ ನಿವಾರಣೆಗೆ ತಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಭರವಸೆ ನೀಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸದಾ ಕಾಲ ನರೇಗಾ ಯೋಜನೆಗೆ ವಿರುದ್ಧವಾಗಿತ್ತು. ಜೊತೆಗೆ ಸಮಾಜ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರದಲ್ಲಿ ಬಜೆಟ್ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಎಎಪಿ ಸಂಸದ ಸಂಜಯ್ ಸಿಂಗ್, ಎಂಜಿಎನ್‍ಆರ್‍ಇಜಿಎ ಅಡಿಯಲ್ಲಿ ರಾಜ್ಯಗಳಿಗೆ ಮೂರು ಸಾವಿರ ಕೋಟಿ ರೂಪಾಯಿಗೂ ಅಕ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವುದಾಗಿ ಕೇಂದ್ರ ಸರ್ಕಾರ ತಾವು ಕೇಳಿದ ಪ್ರಶ್ನೆಗೆ ಸಂಸತ್‍ನಲ್ಲಿ ಉತ್ತರಿಸಿದೆ.
ಕಬ್ಜ ಚಿತ್ರಕ್ಕೆ ಶುಭ ಕೋರಿದ ಡಿಕೆಶಿ ಪುತ್ರಿ
100 ದಿನಗಳ ಉದ್ಯೋಗ ಖಾತ್ರಿಯಲ್ಲಿ 34 ದಿನಗಳ ಕೆಲಸ ಮಾತ್ರ ನೀಡಲಾಗುತ್ತಿದೆ. ಇದಕ್ಕೆ ಹಣದ ಕೊರತೆಯೇ ಕಾರಣ. ಈ ಬUಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ. ಅದೇ ಸಮಯದಲ್ಲಿ ಸಮಸ್ಯೆ ಬಗ್ಗೆ ಜನಾಂದೋಲನವೂ ನಡೆಯಬೇಕು ಎಂದು ಸಲಹೆ ನೀಡಿದರು.
NREGA, budget, cut, workers, protest,