ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಬದ್ಧನಾಗಿರುವ ನನ್ನ ವಿರುದ್ಧ ಅಪಪ್ರಚಾರ: ಅರಗ ಕಿಡಿ

Social Share

ಬೆಂಗಳೂರು, ಡಿ.31- ಸದಾ ಅಡಕೆ ಬೆಳೆ ಗಾರರ ಹಿತಾಸಕ್ತಿ ಕಾಳಜಿ ಇರುವ, ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡ ಲಾಗುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನನ್ನ ಬಗ್ಗೆ ಆರೋಪ ಮಾಡಲು ಬೇರೆ ಏನೂ ಇಲ್ಲದ ಕಾರಣ ಮಲೆನಾಡು ಹಾಗೂ ಕರಾವಳಿ ಪ್ರದೇಶದ ಅಡಕೆ ಬೆಳೆಗಾರರ ಪರವಾಗಿ, ರೈತರ ಹಿತ ರಕ್ಷಣೆ ಬಗ್ಗೆ ಸದನದಲ್ಲಿ ಮಾತನಾಡಿದ್ದನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಸದನದಲ್ಲಿ,ನಾನು ಮಾತನಾಡಿದ ಒಟ್ಟು ಭಾಷಣದ ಅರ್ಥವನ್ನು ಗ್ರಹಿಸದೆ, ನನ್ನ ಹೇಳಿಕೆಯನ್ನೇ ತಪ್ಪಾಗಿ ಬಿಂಬಿಸಿ ರಾಜಕೀಯ ವಿರೋಧಿಗಳು ಅಪಪ್ರಚಾರ ಹಾಗೂ ಸುಳ್ಳನ್ನು ಬಿತ್ತುವ ಹತಾಶ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

BREAKING : 42 ಐಎಎಸ್ ಅಧಿಕಾರಿಗಳ ವರ್ಗಾವಣೆ

ಸುಪ್ರೀಂಕೋರ್ಟ್‍ನಲ್ಲಿ ಅಡಕೆ ಕ್ಯಾನ್ಸರ್ ಕಾರಕ ಎಂದು ಅಫಿಡವಿಟ್ ಸಲ್ಲಿಸಿದ್ದನ್ನು ಯಾರೂ ಮರೆತಿಲ್ಲ. ಇದನ್ನು ವಿರೋಧಿಸಿ ಅಡಕೆ ಕ್ಯಾನ್ಸರ್‍ಕಾರಕ ಅಲ್ಲ ಅದೊಂದು ಆರೋಗ್ಯ ವರ್ಧಕ ಎಂದು ಯಶಸ್ವಿಯಾಗಿ ವಾದ ಮಂಡಿಸಿ, ರೈತರ ಮೇಲಿದ್ದ ತೂಗು ಕತ್ತಿಯನ್ನು ನಿವಾರಣಾ ಮಾಡುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದನ್ನು ಇಲ್ಲಿ ಸ್ಮರಿಸ ಬಯಸುತ್ತೇನೆ ಎಂದರು.

ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುತ್ತಿರುವ ಪ್ರದೇಶದಲ್ಲಿ ಮಾತ್ರ ಬಂದಿರುವ ಹಾಗೂ ರೈತರಿಗೆ ಮಾರಕವಾಗಿರುವ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಔಷಧ ಸಿಂಪರಣೆಗೆ ಸರಕಾರದಿಂದ ಅನುದಾನ ಬಿಡುಗಡೆ ಗೊಳಿಸಿದ್ದೇನೆ ಎಂದು ಹೇಳಿದರು.

ಎಲೆ ಚುಕ್ಕೆ ರೋಗಕ್ಕೆ ಕಾರಣವಾದ ಅಂಶಗಳ ಮೇಲೆ ಸಂಶೋಧನೆ ನಡೆಸಲು, ಕೇಂದ್ರ ಸರಕಾರದ ಮೇಲೆ ಒತ್ತಡ ತಂದ ಪರಿಣಾಮ ಕೇಂದ್ರ ಸಂಶೋಧಕರು ಹಾಗೂ ವಿಜ್ಞಾನಿಗಳ ತಂಡ ಬಂದಿದೆ.

ಪ್ರಧಾನಿಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ದೇವೇಗೌಡರು

ಮಾರುಕಟ್ಟೆಯಲ್ಲಿ ಅಡಕೆ ಬೆಳೆ ಧಾರಣೆಗೆ ಸ್ಥಿರತೆ ಒದಗಿಸಲು ಅನು ಕೂಲವಾಗುವಂತೆ, ಕೇಂದ್ರ ಸರಕಾರದ ಮೇಲೆ ಒತ್ತಡ ತಂದಿದ್ದರಿಂದ ಅಡಕೆ ಬೆಳೆಯ ಕನಿಷ್ಠ ಉತ್ಪಾದನಾ ವೆಚ್ಚದರ ಹೆಚ್ಚಳಕ್ಕೆ ಸರಕಾರ ಒಪ್ಪಿಕೊಂಡಿದೆ. ಇಷ್ಟರಲ್ಲಿಯೇ ಈ ಸಂಬಂಧ ಆದೇಶ ಹೊರ ಬರಲಿದೆ ಎಂದು ತಿಳಿಸಿದರು.

ಅಡಕೆ ಬೆಳೆಗಾರರ ಭವಿಷ್ಯವನ್ನೇ ಹೊಸಕಿ ಹಾಕುವ ಪ್ರಯತ್ನದಲ್ಲಿ ಇವರು ಅಡಕೆ ಬೆಳೆಗಾರರ ಹಿತ ಕಾಪಾಡಲು, ಕಟಿಬದ್ದವಾಗಿರುವ ನನ್ನ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಒಂದು ಕಾಲದಲ್ಲಿ, ಅಡಕೆ ಧಾರಣೆ ಕ್ವಿಂಟಾಲ್‍ಗೆ ಎಂಬತ್ತು ಸಾವಿರ ರೂ.ವರೆಗೂ ಹೋಗಿತ್ತು.

ಅದರ ಪರಿಣಾಮ ಅಡಕೆ ಬೆಳೆ, ಅಸಂಪ್ರದಾಯಿಕ ಪ್ರದೇಶ ಗಳಲ್ಲಿಯೂ ವ್ಯಾಪಕವಾಗಿ ವಿಸ್ತಾರ ಗೊಂಡ ಪರಿಣಾಮ, ನಂತರದ ದಿನಗಳಲ್ಲಿ 25ರಿಂದ 30 ಸಾವಿರಕ್ಕೂ ಬಂದಿದ್ದನ್ನು ಮರೆಯಬಾರದು. ಈ ಕಾರಣದಿಂದಲೇ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳನ್ನು ಬಿಟ್ಟು, ಬೇರೆ ಪ್ರದೇಶದಲ್ಲಿ ಅಡಕೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ಕೊಡಬಾರದು ಎಂದು ಅಭಿಪ್ರಾಯಪಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

Nut growers, home minister, araga jnanendra,

Articles You Might Like

Share This Article