ನವದೆಹಲಿ, ಜ.31- ಓಮಿಕ್ರಾನ್ ಗಿಂತಲೂ ಓ ಮಿತ್ರೋ ಹೆಚ್ಚು ಅಪಾಕಾರಿ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರು ಆರೋಪಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಓಮಿಕ್ರಾನ್ ಗಿಂತ ಓ ಮಿತ್ರೋ ತುಂಬಾ ಅಪಾಯಕಾರಿ. ಈ ವೈರಸ್ ಯಾವುದೇ ಸೌಮ್ಯ ರೂಪಾಂತರ ಹೊಂದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಹೆಚ್ಚಿದ ಮತ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ. ಸಂವಿಧಾನದ ಮೇಲಿನ ಕಪಟ ದಾಳಿಗಳು ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರಲ್ಲಿ ನಾವು ಪ್ರತಿದಿನದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ಭಾರಿ ಭಾಷಣ ಆರಂಭಿಸುವಾಗಲೂ ಮಿತ್ರೋ ಎಂದೇ ಮಾತು ಆರಂಭಿಸುತ್ತಾರೆ. ಅದರ ಉಲ್ಲೇಖ ಮಾಡಿ ಪರೋಕ್ಷವಾಗಿ ಪ್ರಧಾನಿ ಅವರನ್ನು ಶಶಿ ತರೂರು ಟೀಕಿಸಿದ್ದಾರೆ.
