ಮಹಿಳೆಯರ ರಕ್ಷಣೆಗೆ ‘ಓಬವ್ವ ಆತ್ಮರಕ್ಷಣಾ ಯೋಜನೆ’

Social Share

ಬೆಂಗಳೂರು, ಫೆ.5- ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ನೀಡುವ ಓಬವ್ವ ಆತ್ಮರಕ್ಷಣಾ ಕಲೆಯನ್ನು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳದಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಓಬವ್ವ ಆತ್ಮರಕ್ಷಣಾ ಕಲೆ ಯೋಜನೆ ರೂಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕರ್ನಾಟಕ ವಸತಿ ಶಿಕ್ಷಣದ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಗಳು ಅಕೃತ ಚಾಲನೆ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಯೋಜನೆ ಲಾಂಛನ ಅನಾವರಣ ಮಾಡಲಾಗುವುದು. ತರಬೇತಿ ಪಡೆದ ವಿದ್ಯಾರ್ಥಿನಿಯರು ಕರಾಟೆ ಪ್ರದರ್ಶನ ನೀಡಲಿದ್ದಾರೆ. ಕರ್ನಾಟಕದ ೀರ ಮಹಿಳೆ ಓಬವ್ವ ಹೆಸರನ್ನು ಆತ್ಮರಕ್ಷಣೆ ಕಲೆಗೆ ಇಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ನಂತರದ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ನೀಡಲಾಗುತ್ತದೆ ಎಂದರು.
ಪ್ರಾರಂಭದಲ್ಲಿ ಮೂರು ವರ್ಷ ತರಬೇತಿ ನೀಡಲಾಗುತ್ತದೆ. ಈಗಾಗಲೇ ರಾಜ್ಯದ 100 ಹಾಸ್ಟೆಲ್ ವಸತಿ ಶಾಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ನುರಿತ ಮಹಿಳಾ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಇಲಾಖೆಯಿಂದ ಸಮವಸ್ತ್ರ ನೀಡಲಾಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 629 ಮೆಟ್ರಿಕ್ ನಂತರದ ಹಾಸ್ಟೆಲ್‍ಗಳ 50 ಸಾವಿರ ವಿದ್ಯಾರ್ಥಿನಿಯರು, ಸಮಾಜ ಕಲ್ಯಾಣ ಇಲಾಖೆಯ 257 ಮೆಟ್ರಿಕ್ ನಂತರದ ಹಾಸ್ಟೆಲ್‍ನ 30 ಸಾವಿರ ವಿದ್ಯಾರ್ಥಿನಿಯರು, 818 ವಸತಿ ಶಾಲೆಗಳ 1.02 ಲಕ್ಷ ವಿದ್ಯಾರ್ಥಿನಿಯರು ಸೇರಿ ಒಟ್ಟು 1704 ಸಂಸ್ಥೆಗಳ 1.82 ಲಕ್ಷ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುವ ಗುರಿ ಇದೆ.
ತರಬೇತಿ ನೀಡಲು ಕರಾಟೆಯಲ್ಲಿ ಬ್ಲಾಕ್‍ಬೆಲ್ಟ್ ಮತ್ತು ಸಮಾನ ಅರ್ಹತೆ ಹೊಂದಿರುವ ಸಾವಿರಕ್ಕೂ ಅಕ ಮಹಿಳಾ ತರಬೇತುದಾರರಿಂದ ಗೌರವ ಧನದ ಆಧಾರದಲ್ಲಿ ಸೇವೆ ಪಡೆಯಲಾಗುವುದು ಎಂದು ಹೇಳಿದರು. ಸದ್ಯಕ್ಕೆ ಹಾಸ್ಟೆಲ್ ಮತ್ತು ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಈ ಪ್ರಯೋಜನ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿನಿಯರಿಗೆ ವಿಸ್ತರಿಸುವ ಗುರಿ ಇದೆ.
ನಾಳೆ ಉದ್ಘಾಟನೆಗೊಳ್ಳಲಿರುವ ಓಬವ್ವ ಆತ್ಮರಕ್ಷಣಾ ಕಲೆ ಯೋಜನೆ ಫೆ.7ರಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

Articles You Might Like

Share This Article