ಬೆಂಗಳೂರು, ಫೆ.27- ಓಬಿಸಿ ಸಮುದಾಯಕ್ಕೆ ಈ ಬಾರಿ ಬಿಜೆಪಿ ಪಕ್ಷದಿಂದ 70 ವಿಧಾನಸಭಾ ಟಿಕೆಟ್ಗಳನ್ನು ನೀಡಬೇಕೆಂದು ಓಬಿಸಿ ಮುಖಂಡರುಗಳಾದ ಶ್ಯಾಮ್‌ಸುಂದರ್ ಗಾಯಕ್‌ವಾಡ್, ಕುರುಬ’ ಸಮಾಜದ ಮುಖಂಡ ರವೀಂದ್ರ, ವಿಶ್ವಕರ್ಮಸಮಾಜದ ಮುಖಂಡ ವೆಂಕಟೇಶ್ ಮುಂತಾದವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರುಗಳು ನಮ್ಮೊಂದಿಗೆ ಇದ್ದಾರೆ. ಅವರುಗಳನ್ನು ಒಳಗೊಂಡಂತೆ ನಮಗೆ ಸೂಕ್ತ ಸ್ಥಾನಮಾನ ನೀಡಿ ಸಹಕರಿಸಬೇಕು, ನಾವು ಆಶಾವಾದಿಗಳಾಗಿದ್ದೇವೆ. ಟೀಕೇಟ್ ನೀಡುತ್ತಾರೆ ಎಂಬ ವಿಶ್ವಾಸ ನಮಗೆ ಇದೆ ಎಂದರು.
ಕರ್ನಾಟಕದ ಅಭಿವೃದ್ಧಿಯಗೆ ಡಬಲ್ ಇಂಜಿನ್ ಸರ್ಕಾರ ಅನಿವಾರ್ಯ: PM ಮೋದಿ
ಒಗ್ಗಟ್ಟಾಗಿ 75 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಅವುಗಳಲ್ಲಿ ಯಾರಿಗಾದರೂ ಕೊಟ್ಟರು ಸರಿ ನಾವು ಹೋರಾಟ ಮಾಡಿ ಗೆಲ್ಲುಸುತ್ತೇವೆ. 70 ಜನರಿಗೆ ಟಿಕೇಟ್ ನೀಡಬೇಕೆಂದು ನಾವು ಕೇಳಿದ್ದೇವೆ ಕೊಡುವುದು, ಬಿಡುವುದು ಅವರಿಗೆ ಸೇರಿದ್ದು. ನರೇಂದ್ರ ಮೋದಿಯವರು ಸಂದೇಶವನ್ನು ಹೊತ್ತು ಎಲ್ಲೆಡೆ ಪ್ರಚಾರ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಸರ್ಕಾರ ರಚನೆಯಾಗುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ರಾಜ್ಯ ಜನಸಂಖ್ಯೆಯಲ್ಲಿ ಶೇ 30ಕ್ಕಿಂತಲೂ ಹೆಚ್ಚು ಒಬಿಸಿ ಸಮುದಾಯವೆಂದು ಬಿಜೆಪಿ ಪಕ್ಷಕ್ಕೆ ಮೊದಲಿನಿಂದಲೂ ಸಹಕಾರ ನೀಡುತ್ತ ಬಂದಿದ್ದೇವೆ. ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯಲಿ ನಮಗೆ ಮತ್ತಷ್ಟು ಬಲ ಬೇಕಾಗಿದೆ. ಇದನ್ನು ಅರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚು ಅನುವು ಮಾಡಿಕೊಡಬೇಕು. ಒಂದು ವೇಳೆ ನಮ್ಮ ಬೇಡಿಕೆ ಈಡೇರಿದಿದ್ದರೂ ಕೂಡ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದರು.
OBC, community, demands, 70 assembly, BJP tickets,