ಬೆಂಗಳೂರು, ಸೆ.13- ಸಹಕಾರ ಕ್ಷೇತ್ರಗಳಲ್ಲಿರುವವರಿಗೆ ಚಿಕಿತ್ಸೆ ನೀಡುವ ಯಶಸ್ವಿನಿ ಯೋಜನೆಯನ್ನು ಅಕ್ಟೋಬರ್ 2ರಿಂದ ಜಾರಿ ಮಾಡಲು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಅದರಂತೆ ಅನುಷ್ಠಾನಕ್ಕೆ ಬರಲಿದೆ ಎಂದು ಸಹಕಾರ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್‍ನ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೊದಲು 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಸಹಕಾರ ಸಚಿವ ಎಚ್.ವಿಶ್ವನಾಥ್ ಯಶಸ್ವಿನಿ ಯೋಜನೆ ಜಾರಿ ಮಾಡಿದ್ದರು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಈ ಯೋಜನೆ ಒಪ್ಪಿಗೆ ಇರಲಿಲ್ಲ. ಹಾಗಾಗಿ 2018ರಲ್ಲಿ ಸ್ಥಗಿತಗೊಳಿಸಿದರು.
ಬದಲಿಗೆ ಆಯುಷ್ಮಾನ್ ಭಾರತ ಜಾರಿ ಮಾಡಲಾಗಿದೆ. ಅದರಡಿ 1650 ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಹೊರತುಪಡಿಸಿ ಯಶಸ್ವಿನಿ ಜಾರಿ ಮಾಡಲು ಆರೋಗ್ಯ ಇಲಾಖೆಯಿಂದ ಪ್ರತ್ಯೇಕಗೊಳಿಸಿ ಬಿಡುಗಡೆ ಮಾಡಿಸಲಾಗಿದೆ. ಜೊತೆ ಹಣಕಾಸು ಇಲಾಖೆಯ ಅನುಮತಿಯನ್ನು ಪಡೆಯಲಾಗಿದೆ ಎಂದರು. ಹಳೆಯ ಸಮಿತಿಯನ್ನು ವಿಸರ್ಜನೆ ಮಾಡಿ, ಹೊಸ ಸಮಿತಿ ಜಾರಿ ಮಾಡಲಾಗುವುದು. ಒಮ್ಮೆ ಜಾರಿಯಾದರೆ ಮತ್ತೆ ಯಾವುದೆ ತೊಂದರೆ ಇಲ್ಲದಂತೆ ಅನುಷ್ಠಾನಕ್ಕೆ ಜಾರಿಗೆ ತರಲಾಗುವುದು. ಯೋಜನೆ ಜಾರಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಪ್ರಕಾಶ್ ರಾಥೋಡ್ ಒತ್ತಾಯಿಸಿದರು.
ಎಚ್.ವಿಶ್ವನಾಥ್ ಅವರು, ಗ್ರಾಮೀಣ ಭಾರತದಲ್ಲಿ ಉತ್ತಮ ಚಿಕಿತ್ಸೆ ಕೊಡಿಸಲು ಯಶಸ್ವಿನಿ ಉತ್ತಮ ಯೋಜನೆಯಾಗಿತ್ತು. ಕಾಂಗ್ರೆಸ್ ಜಾರಿಗೆ ತಂದ ಯೋಜನೆಯನ್ನು ಮತ್ತೊಂದು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದ್ದು ದುರಂತ. ಮತ್ತೆ ಬಿಜೆಪಿ ಸರ್ಕಾರ ಇದನ್ನು ಪುನರ್ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಚರ್ಚೆ ನಡೆದಿದೆ. ಯೋಜನೆಯನ್ನು ಆರೋಗ್ಯ ಇಲಾಖೆಗೆ ನೀಡದೆ ಸಹಕಾರ ಇಲಾಖೆಯೇ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾರ್ವಡ್ ವಿಶ್ವವಿದ್ಯಾಲಯದ ಡಾ.ಚೌದ್ರಿ ಎಂಬುವವರು ಆಗಿನ ಕಾಲದಲ್ಲಿ ಸಂಶೋಧನೆ ನಡೆಸಿ ತಿಂಗಳಿಗೆ 10 ರೂಪಾಯಿ ಸಂಗ್ರಹ ಮಾಡಿ ಜನರಿಗೆ ಚಿಕಿತ್ಸೆ ಕೊಡಿಸುವ ಪ್ರಸ್ತಾವನೆ ರೂಪಿಸಿದ್ದರು. ನಮ್ಮ ಸರ್ಕಾರ ಅದನ್ನು ಜಾರಿಗೆ ತಂದಿತ್ತು. ಈಗ ಸಿ ಎಸ್ ರ್ಆ ನಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ಬೋಜೆಗೌಡ, ಲಕ್ಷ್ಮಣ ಸವದಿ ಅವರು, ಇದು ಮಹತ್ವದ ವಿಚಾರವಾಗಿದೆ, ಅರ್ಧ ಗಂಟೆ ಕಾಲ ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಆರಂಭದಲ್ಲಿ ಡಾ,ದೇವಿ ಶೆಟ್ಟಿ ಅವರು ನಮ್ಮ ಬಳಿ ಬಂದು ಪ್ರಾತ್ಯಕ್ಷಿಕೆ ನೀಡಿದರು. ಅದನ್ನು ಒಪ್ಪಿಕೊಂಡು ಸಚಿವರಾಗಿದ್ದ ವಿಶ್ವನಾಥ್ ಬಳಿ ಚರ್ಚಿಸಿದಾಗ ಯಶಸ್ವಿನಿ ಜಾರಿಯಾಯಿತು.
ಫಲಾನುಭವಿ, ಸಹಕಾರ ಇಲಾಖೆ ಸೇರಿ ವರ್ಷಕ್ಕೆ 120 ರೂ. ಕಂತಿನಲ್ಲಿ ಯೋಜನೆ ಜಾರಿಗೆ ತರಲಾಗಿತ್ತು. ಇಡೀ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾಗಿದೆ. ಈಗ ಮರು ಜಾರಿಯಾಗುವಾದ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು, ತಜ್ಞರ ಸಮಿತಿ ರಚಿಸಿ ಅಗತ್ಯ ಮಾರ್ಪಾಡು ಮಾಡಬೇಕು ಎಂದರು.