10.50 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳಿಗೆ ಒಡಿಶಾ ಸರ್ಕಾರ ಸಹಿ

Social Share

ಭುವನೇಶ್ವರ್,ಡಿ.4- ಒಡಿಶಾ ಸರ್ಕಾರ ಇತ್ತೀಚೆಗೆ ನಡೆಸಿದ ಹೂಡಿಕೆದಾರರ ಸಮಾವೇಶದಲ್ಲಿ 10.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಸಹಿ ಹಾಕಲಾಗಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.

ಕೋವಿಡೋತ್ತರದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೆಂಗಿಂತಲೂ ಹೆಚ್ಚಿನ ಸಕಾರಾತ್ಮಕ ಪ್ರತಿಕ್ರಿಯೆಗಳ ಮೂಲಕ ಬಂಡವಾಲ ಹೂಡಿಕೆಯ ಪ್ರಸ್ತಾವನೆಗಳು ಚರ್ಚೆಯಾಗಿವೆ ಎಂದು ಅವರು ತಿಳಿಸಿದರು.

ಹೂಡಿಕೆದಾರರ ಸಮಾವೇಶದ ಪಾಲುದಾರಿಕೆ ದೇಶಗಳಾಗಿದ್ದ ಜರ್ಮನಿ, ಜಪಾನ್, ನಾರ್ವೆಗೆ ಕೃತಜ್ಞತೆ ಸಲ್ಲಿಸಿದ ಅವರು, ಬಾಧ್ಯಸ್ಥ ಕಂಪನಿಗಳು ಶೀಘ್ರವಾಗಿಯೇ ಉದ್ಯಮಗಳನ್ನು ಆರಂಭಿಸುವ ಮೂಲಕ ಒಡಿಶಾ ಹೆಚ್ಚುವರಿ ದೂರ ಕ್ರಮಿಸಲು ನೆರವಾಗಬೇಕು. ಚರ್ಚೆಗಳ ಜೊತೆಯಲ್ಲೇ ಮುನ್ನಡೆಯಬೇಕು ಎಂದು ಹೇಳಿದ್ದಾರೆ.

“ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ”

ಗೆಲುವು ಮತ್ತು ಯಶಸ್ಸಿನತ್ತ ನಾವು ಮುನ್ನಂದಡಿ ಇಡುತ್ತಿದ್ದೇವೆ. ಈ ಸಮಾವೇಶದ ಮೂಲಕ ಪ್ರತ್ಯೇಕ ಮತ್ತು ಪರೋಕ್ಷವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ರಾಜ್ಯ ಸರ್ಕಾರ ಉದ್ಯಮಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತಿದೆ ಎಂದು ಹೇಳಿದರು.

ಈ ಹಿಂದೆ 2016ರಲ್ಲಿ ನಡೆದ ಸಮಾವೇಶಕ್ಕಿಂತಲೂ 5 ಪಟ್ಟು ಹೆಚ್ಚು ಬಂಡವಾಳ ಹರಿದುಬಂದಿದೆ. 2ನೇ ಸಮಾವೇಶದಲ್ಲಿ 4.23 ಲಕ್ಷ ಕೋಟಿ ರೂ. ಹೂಡಿಕೆಯ ಪ್ರಸ್ತಾವನೆಗಳಿದ್ದವು. ಪ್ರಸಕ್ತ 21 ಕ್ಷೇತ್ರದಲ್ಲಿ 10.50 ಲಕ್ಷ ಕೋಟಿ ರೂ ಹೂಡಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಚಿರತೆ ಸೆರೆ ಹಿಡಿಯಲು ಅಖಾಡಕ್ಕಿಳಿದ ಅರಣ್ಯಾಧಿಕಾರಿಗಳು

ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9.52 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದಗಳಾಗಿದ್ದವು. ಇದು ದೇಶದಲ್ಲೇ ದಾಖಲೆ ಎಂದು ಹೇಳಲಾಗಿದೆ.

Odisha, receives, ₹10.5 lakh cr, investment, proposals, during, MIO, Conclave,

Articles You Might Like

Share This Article