ಈ ವಿಷಯದಲ್ಲಿ ಚೀನಾ ನಗರಗಳನ್ನೇ ಹಿಂದಿಕ್ಕಿದ ಬೆಂಗಳೂರು..!

Social Share

ನವದೆಹಲಿ,ಡಿ.20- ಏಷ್ಯಾ ಫೆಷಿಫಿಕ್ ವಲಯದ 11 ಪ್ರಮುಖ ನಗರಗಳಲ್ಲಿ ಚೀನಾದ ಶಾಂಗೈ ಅನ್ನು ಹಿಂದಿಕ್ಕಿ ಬೆಂಗಳೂರು, ಸೂಕ್ತ ಕಚೇರಿ ಸ್ಥಳಾವಕಾಶ ಹೊಂದಿರುವುದರಲ್ಲಿ ಮೊದಲ ಸ್ಥಾನದಲ್ಲಿದೆ.

2022ರ ಸೆಪ್ಟಂಬರ್‍ವರೆಗೆ ನಡೆಸಲಾದ ಸಮೀಕ್ಷೆಯ ಪ್ರಕಾರ ಬೆಂಗಳೂರು 10.6 ಮಿಲಿಯನ್ ಚದುರ ಅಡಿ ಗ್ರೇಡ್ ಎ ದರ್ಜೆಯ ಕಚೇರಿ ವಿಸ್ತೀರ್ಣವನ್ನು ಹೊಂದಿದೆ. ಏಷ್ಯಾ ವಲಯದ ನಗರಗಳಲ್ಲೇ ಇದು ಅತಿ ಹೆಚ್ಚು ದೊಡ್ಡ ಪ್ರಮಾಣದ ಜಾಗ ಎಂದು ಹೇಳಲಾಗಿದೆ.

ಭಾರತದ ನಗರಗಳ ಪೈಕಿ ದೆಹಲಿಯ ಎನ್‍ಸಿಆರ್ 6.6 ಮಿಲಿಯನ್ ಚ.ಅ ಸ್ಥಳಾವಕಾಶ ಹೊಂದುವ ಮೂಲಕ ಐದನೇ ರ್ಯಾಂಕ್ ಪಡೆದಿದೆ. ತೆಲಂಗಾಣದ ಹೈದರಾಬಾದ್ 5.7 ಮಿ.ಚ.ಅ ಜಾಗ ಹೊಂದಿದ್ದು, ಏಳನೇ ಸ್ಥಾನ ಪಡೆದಿದೆ. ಬೆಂಗಳೂರು, ದೆಹಲಿ, ಹೈದರಾಬಾದ್ ನಗರಗಳು ಏಷ್ಯಾ ಒಟ್ಟು ನಗರ ಪ್ರದೇಶಗಳ ಕಚೇರಿ ಸ್ಥಳಾವಕಾಶದಲ್ಲಿ ಶೇ.35ರಷ್ಟನ್ನು ಹೊಂದಿದೆ. ಅದರಲ್ಲೂ ಬೆಂಗಳೂರು ಅತ್ಯಧಿಕ ಸ್ಥಳಾವಕಾಶ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ.

ರೈಲ್ವೆದಲ್ಲಿ ಉದ್ಯೋಗದ ಕೊಡಿಸುವುದಾಗಿ 28 ಮಂದಿಗೆ 2.67 ಕೋಟಿ ಪಂಗನಾಮ

ಚೀನಾದ ಶಾಂಗೈ 10 ಮಿ.ಚ.ಅ, ಬೀಜಿಂಗ್ 7.6 ಮಿ.ಚ.ಡಿ ಸ್ಥಳಾವಕಾಶಗಳನ್ನು ಹೊಂದಿವೆ. ಬೆಂಗಳೂರು ಜನಪಾನ್‍ನ ಟೋಕಿಯೋ, ಸಿಂಗಾಪುರ್, ಸಿಯೋಲ್ ಸೇರಿದಂತೆ ಎಲ್ಲಾ ನಗರಗಳನ್ನು ಹಿಂದಿಕ್ಕಿದೆ. ಜಾಗತಿಕವಾಗಿ ಬೆಂಗಳೂರಿನ ಪ್ರೊಫೈಲ್ ಅನ್ನು ಮರು ವಿನ್ಯಾಸಗೊಳಿಸಬೇಕಿದೆ. ಹೈಬ್ರಿಡ್ ಮಾದರಿಯಲ್ಲಿ ಕೆಲಸ ನಿರ್ವಹಿಸಲು ಬೆಂಗಳೂರಿನ ಜಾಗ ಪ್ರಶಸ್ತವಾಗಿದೆ ಎಂದು ವರದಿ ಹೇಳಿದೆ.

Office Rent, Bengaluru, Asia-Pacific,

Articles You Might Like

Share This Article