ಕಾಡಾನೆ ತಿವಿದು ಅರಣ್ಯ ರಕ್ಷಕ ಸಾವು

ಚಿಕ್ಕಮಗಳೂರು, ಮೇ 8: ಕಾಡಾನೆ ತಿವಿದು ಅರಣ್ಯ ರಕ್ಷಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಡಾನೆಯನ್ನು ಅಟ್ಟಲು ತೆರಳಿದಾಗ ಕಾಡಾನೆ ತಿವಿದು ಅರಣ್ಯ ರಕ್ಷಕ ನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಆಲ್ದೂರು ಸಮೀಪದ ಮಡೆನೆರಳು ಬಳಿ ನಡೆದಿದೆ.

ಮೃತಪಟ್ಟ ಅರಣ್ಯ ರಕ್ಷಕ ಪುಟ್ಟರಾಜು ಎಂದು ಗುರುತಿಸಲಾಗಿದ್ದು, ಆನೆ ತಿಳಿದ ತೀವ್ರತೆಗೆ ಗಾಯಗೊಂಡಿದ್ದ ಪುಟ್ಟರಾಜು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಈ ವಿಷಯ ತಿಳಿಸಿ ಆನೆಯನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿ ತಂಡ ತೆರಳಿದ್ದು ಪುಟ್ಟರಾಜ ಕೂಡ ಇದ್ದರು. ಕಾರ್ಯಚರಣೆ ವೇಳೆ ಆನೆ ಅವರ ಮೇಲೆ ದಾಳಿ ಮಾಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದರು.