ಶಾಸಕರ ಸಮನ್ವಯಕ್ಕೆ ಅಡ್ಡಿಪಡಿಸುತ್ತಿರುವ ಅಧಿಕಾರಿಗಳ ಎತ್ತಂಗಡಿಗೆ ಮುಂದಾದ ಸಿಎಂ

Spread the love

ಬೆಂಗಳೂರು,ಅ.14- ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರು, ಶಾಸಕರ ಸಮನ್ವಯಕ್ಕೆ ಅಡ್ಡಿಪಡಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅಧಿಕಾರಿಗಳ ಬದಲಾವಣೆಗೆ
ಯಡಿಯೂರಪ್ಪ ನಿರ್ಧರಿಸಿದ್ದಾರೆ.

ಈಗಾಗಲೇ ವಿ.ಪಿ.ಇಕ್ಕೇರಿ ಅವರನ್ನುಕಳೆದ ವಾರವಷ್ಟೇ ವರ್ಗಾವಣೆ ಮಾಡಲಾಗಿತ್ತು. ಇದೀಗ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯದರ್ಶಿ ಶಿವಯೋಗಿ ಕಳಸದ್, ಜಂಟಿ ಕಾರ್ಯದರ್ಶಿ ಎಂ.ಕೆ.ಶ್ರೀರಂಗಯ್ಯ ಸೇರಿದಂತೆ ಮತ್ತಿತರರನ್ನು ಎತ್ತಂಗಡಿ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಸಮಸ್ಯೆ ಹೇಳಿಕೊಂಡು ಬರುವ ಬಿಎಸ್‍ವೈ ಈ ಆಪ್ತರು, ಶಾಸಕರು, ನಾಯಕರ ಅಹವಾಲುಗಳನ್ನು ಸರಿಯಾದ ರೀತಿಯಲ್ಲಿ ಸಿಎಂಗೆ ತಲುಪಿಸುತ್ತಿಲ್ಲ ಎಂಬ ಆರೋಪ ಸಿಎಂ ಕಚೇರಿ, ನಿವಾಸದಲ್ಲಿನ ಸರ್ಕಾರಿ ಸಿಬ್ಬಂದಿಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸಮಸ್ಯೆಗಳನ್ನು ಹೊತ್ತು ಸಿಎಂ ಮುಂದೆ ದೂರು ನೀಡಲು ಬರುವ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿ ಸಿಎಂಗೆ ಸಮರ್ಪಕವಾಗಿ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ.

ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆಯಲ್ಲಿದ್ದಾಗ ಪಕ್ಷದ ಶಾಸಕರು ಸಿಎಂ ಭೇಟಿ ಮಾಡಲು ಬಂದಾಗಲೂ ಸರಿಯಾಗಿ ಸಿಎಂ ಜೊತೆ ಅಧಿಕಾರಿಗಳು ಸಂವಹನ ಮಾಡುತ್ತಿಲ್ಲ. ಈ ಕುರಿತು ಸಿಎಂ ಸುತ್ತಮುತ್ತಲಿರುವ ಅಧಿಕಾರಿಗಳ ಬಗ್ಗೆ ಪಕ್ಷದ ಶಾಸಕರು ಬಿಎಸ್‍ವೈಗೆ ದೂರು ನೀಡಿದ್ದಾರೆ.

ಸಿಬ್ಬಂದಿಯ ಈ ವರ್ತನೆಗೆ ಸಿಡಿಮಿಡಿಗೊಂಡಿರುವ ಬಿಎಸ್‍ವೈ, ತಮ್ಮ ಸುತ್ತಮುತ್ತಲಿನ ಸಿಬ್ಬಂದಿಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ. ಸದ್ಯದಲ್ಲೇ ಹಾಲಿ ಸಿಬ್ಬಂದಿ ವರ್ಗಾವಣೆಗೊಳಿಸಿ ಬೇರೆ ಅಧಿಕಾರಿಗಳನ್ನು ಯಡಿಯೂರಪ್ಪ ನೇಮಿಸಿಕೊಳ್ಳಲಿದ್ದಾರೆ. ಸಿಎಂ ಕಚೇರಿ, ವಿಧಾನಸೌಧ ಹಾಗೂ ತಮ್ಮ ಅಧಿಕೃತ ನಿವಾಸದಲ್ಲಿನ ಸಿಬ್ಬಂದಿ ಬದಲಾಗಲಿದ್ದಾರೆ.

Facebook Comments

Sri Raghav

Admin