ಕಾಂಗ್ರೆಸ್ ತೊರೆದು ಅಮ್‍ಆದ್ಮಿ ಪಕ್ಷ ಸೇರಿದ ಮಾಜಿ ಸಚಿವ ಜೋಗಿಂದರ್ ಸಿಂಗ್

Social Share

ಚಂಡಿಗಡ್, ಜ.15- ಕಾಂಗ್ರೆಸ್‍ನೊಂದಿಗಿನ ಸುಮಾರು 50 ವರ್ಷಗಳ ಸಂಬಂಧವನ್ನು ಕಡಿದುಕೊಂಡ ಮಾಜಿ ಸಚಿವ ಜೋಗಿಂದರ್ ಸಿಂಗ್ ಮನ್ನ್ ಅವರು ಇಂದು ಅಮ್‍ಆದ್ಮಿ ಸೇರ್ಪಡೆಯಾಗಿದ್ದಾರೆ. 117 ಸಂಖ್ಯಾಬಲ ಇರುವ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳಲ್ಲಿ ಪಕ್ಷಾಂತರ ಪರ್ವ ತೀವ್ರವಾಗಿದೆ. ಮೂರು ಬಾರಿ ಶಾಸಕರಾಗಿದ್ದ ದಲಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಜೋಗಿಂದರ್ ಸಿಂಗ್ ಮನ್ನ್ ಅವರು ನಿನ್ನೆ ಕಾಂಗ್ರೆಸ್ ತೊರೆದಿದ್ದರು. ಕಾಂಗ್ರೆಸ್ ಆಡಳಿತದಲ್ಲಿ ಬೆನತ್ ಸಿಂಗ್, ರಾಜೀಂದ್ರಕೌರ್, ಅಮರಿಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಮನ್ನ್ ಅವರು, ಪರಿಶಿಷ್ಠ ಜಾತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಫಗ್ವಾರ ಪ್ರದೇಶಕ್ಕೆ ಜಿಲ್ಲಾ ಸ್ಥಾನ ಮಾನ ನೀಡಿಲ್ಲ ಎಂಬ ವಿಷಯದಲ್ಲಿ ಕಾಂಗ್ರೆಸ್‍ನೊಂದಿಗೆ ಮನ್ನ್ ಅಸಮದಾನ ಹೊಂದಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದರು.
ಕಾಂಗ್ರೆಸ್ ನಾಯಕನಾಗಿಯೇ ಸಾಯುತ್ತೇನೆ, ಯಾವುದೇ ಕಾರಣಕ್ಕೂ ಪಕ್ಷ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ವಿದ್ಯಾರ್ಥಿ ವೇತನ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಆರೋಪಿಗಳನ್ನು ಪೋಷಣೆ ಮಾಡಿದೆ. ಇದನ್ನು ಒಪ್ಪಿಕೊಳ್ಳಲು ತಮ್ಮ ಮನಸಾಕ್ಷಿ ಸಮ್ಮತಿಸಲಿಲ್ಲ. ಅದಕ್ಕಾಗಿ ಕಾಂಗ್ರೆಸ್ ಶಾಸಕ ಸ್ಥಾನ ಮತ್ತು ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಅಧ್ಯಕ್ಷ ಸ್ಥಾನಕ್ಕೆ ಏಕಕಾಲಕ್ಕೆ ರಾಜಿನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಮನ್ನ್ ಅವರು ಅಮ್‍ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ. ಜೋಗಿಂದರ್ ಸಿಂಗ್ ಅವರ ಸೇರ್ಪಡೆಯನ್ನು ಆಮ್‍ಆದ್ಮಿಯ ಉಸ್ತುವಾರಿ ನಾಯಕ ರಾಘವ್ ಚಡ್ ಖಚಿತ ಪಡಿಸಿದ್ದು, ಇವರ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಿದೆ ಎಂದು ಟ್ವಿಟ್ ಮಾಡಿದ್ದಾರೆ.

Articles You Might Like

Share This Article