ಓಲಾ,ಊಬರ್ ದರ ಶೇ.10 ರಷ್ಟು ಹೆಚ್ಚಳ ಸಾಧ್ಯತೆ..!?

Social Share

ಬೆಂಗಳೂರು,ನ.25- ಆ್ಯಪ್ ಆಧಾರಿದ ಓಲಾ, ಊಬರ್ ಟ್ಯಾಕ್ಸಿ ಪ್ರಯಾಣ ದರ ಶೇ.10ರಷ್ಟು ಹೆಚ್ಚಾಗಲಿದೆ.
ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಪ್ರಯಾಣ ದರ ನಿಗದಿ ಮಾಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದ್ದು, ಓಲಾ, ಊಬರ್ ದರ ನಿಗದಿ ಸಂಬಂಧ ಸಾರಿಗೆ ಇಲಾಖೆ ನ್ಯಾಯಾಲಯಕ್ಕೆ ಲಿಖಿತ ರೂಪದಲ್ಲಿ ವರದಿ ಸಲ್ಲಿಸಿದ್ದವು.

ಓಲಾ, ಊಬರ್ ಕಂಪೆನಿಗಳು ಪ್ರತಿ ಎರಡು ಕಿ.ಮೀ.ಗೆ ನೂರು ರೂ. ನಿಗದಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದವು. ಇವರ ಮನವಿಗೆ ಆಟೋ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ನಿಧನ

ಇಂದು ಸಾರಿಗೆ ಇಲಾಖೆಯಿಂದ ದರದ ಮೇಲೆ ಶೇ.10ರಷ್ಟು ಜಿಎಸ್ಟಿ ವಿಧಿಸುವ ಸಾಧ್ಯತೆ ಇದೆ. ಸೋಮವಾರ ದರ ನಿಗದಿ ಕುರಿತಂತೆ ನ್ಯಾಯಾಲಯದಿಂದ ಆದೇಶ ಪ್ರಕಟಸಾಧ್ಯವಿದೆ ಎಂದು ತಿಳಿದು ಬಂದಿದೆ.

ಕೇಜ್ರಿವಾಲ್ ಹತ್ಯೆಗೆ ಸಂಚು ಆರೋಪ, ತನಿಖೆಗೆ ಬಿಜೆಪಿ ಆಗ್ರಹ

ಅಗ್ರಿಗ್ರೇಟರ್ ನಿಯಮದಡಿ ನಮ್ಮ ಬೇಡಿಕೆ ಸರಿಯಾಗಿದೆ ಎಂದು ಓಲಾ, ಊಬರ್ ಸಂಸ್ಥೆಗಳು ವಾದ ಮಂಡಿಸಿವೆ. ದರ ನಿಗದಿ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರ ಬೀಳಲಿದೆ.

Ola, Uber, Cab, Services, increase,

Articles You Might Like

Share This Article