ಇಂದು ಓಲಾ, ಉಬರ್ ದರ ನಿಗದಿ.. ?

Social Share

ಬೆಂಗಳೂರು,ನ.14- ಇಂದು ಸಂಜೆ ವೇಳೆಗೆ ಓಲಾ, ಉಬರ್ ದರ ನಿಗದಿಯಾಗುವ ಸಾಧ್ಯತೆಗಳಿವೆ.
ಓಲಾ, ಉಬರ್ ದರ ನಿಧಿಗ ಕುರಿತಂತೆ ಇಂದು ಸಂಜೆ ಸಾರಿಗೆ ಇಲಾಖೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ದರ ನಿಗಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಶಾಂತಿನಗರದಲ್ಲಿರುವ ಸಾರಿಗೆ ಇಲಾಖೆ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಸಾರ್ವಜನಿಕರು, ಆಟೋ ಚಾಲಕರು ಹಾಗೂ ಓಲಾ, ಉಬರ್ ಕಂಪನಿಗಳ ಪ್ರತಿನಿಗಳು ಪಾಲ್ಗೊಳ್ಳುತ್ತಿದ್ದಾರೆ. ಓಲಾ, ಉಬರ್ ಸಂಸ್ಥೆಯವರು ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದಾರೆ ಎಂಬ ದೂರಿನ ಆಧಾರದ ಮೇರೆಗೆ ಹೈಕೋರ್ಟ್ ಸೂಚನೆಯಂತೆ ದರ ನಿಗಪಡಿಸುವ ಉದ್ದೇಶದಿಂದ ಈ ಸಭೆ ನಡೆಸಲಾಗುತ್ತಿದೆ.

ಟರ್ಕಿ ರಾಜಧಾನಿ ಇಸ್ತಾನ್‍ಬುಲ್‍ನಲ್ಲಿ ಬಾಂಬ್ ಸ್ಪೋಟ, 6 ಮಂದಿ ಸಾವು

ಈಗಾಗಲೆ ಎರಡು ಬಾರಿ ಸಭೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನಲೆಯಲ್ಲಿ ಇಂದು ಮಹತ್ವದ ಸಭೆ ಕರೆಯಲಾಗಿದ್ದು ಸಭೆಯಲ್ಲಿ ದರ ನಿಗಧಿಯಾಗುವ ಸಾಧ್ಯತೆಗಳಿವೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಎರಡು ಕಿ.ಮೀ. ಮಿನಿಮಮ್ 100 ರೂ. ದರ ನಿಗದಿ ಮಾಡುವಂತೆ ಓಲಾ ಮತ್ತು ಉಬರ್ ಸಂಸ್ಥೆಗಳು ಪಟ್ಟು ಹಿಡಿದಿವೆ. ಹೀಗಾಗಿ ಹೊಸ ದರ ನಿಗಧಿಗೆ ಇಂದು ಸಭೆ ನಡೆಸಿ ಅಂತೀಮ ತೀರ್ಮಾನ ಕೈಗೊಳ್ಳಲಾಗುತ್ತಿದೆ.

ಕಳೆದ ಸಭೆಯಲ್ಲಿ ಎರಡು ಕಿ.ಮೀ.ಗೆ ಸಾರಿಗೆ ಇಲಾಖೆ 30 ರೂ.ನಿಗಧಿ ಮಾಡಿತ್ತು. ಆದರೆ, ಅದಕ್ಕೆ ಸಂಸ್ಥೆಗಳ ಪ್ರತಿನಿಧಿಗಳು ಒಪ್ಪಿರಲಿಲ್ಲ. ಇಂದಿನ ಸಭೆಯಲ್ಲಿ ಮಿನಿಮಮ್ ದರವನ್ನು 40 ರೂ.ಗಳಿಂದ 50 ರೂ.ಗಳಿಗೆ ಏರಿಕೆ ಮಾಡುವ ಸಾಧ್ಯತೆಗಳಿವೆ.

ಕಡಲೆಕಾಯಿ ಪರಿಷೆಯಲ್ಲಿ ಬಡವರ ಬಾದಾಮಿ ಸವಿದ ಬೆಂಗಳೂರಿಗರು

ಆದರೆ, ಸಾರಿಗೆ ಇಲಾಖೆ ನಿಗದಿಪಡಿಸುವ ದರವನ್ನು ಓಲಾ, ಉಬರ್ ಸಂಸ್ಥೆಗಳು ಒಪ್ಪಿಕೊಳ್ಳದಿದ್ದರೆ ಗೊಂದಲ ಮತ್ತೆ ಮುಂದುವರೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

Articles You Might Like

Share This Article