ಶೀಘ್ರದಲ್ಲೇ ಓಲಾ, ಉಬರ್ ವಾಹನಗಳಿಗೆ ಹೊಸ ದರ ಫಿಕ್ಸ್

Social Share

ಬೆಂಗಳೂರು,ಅ.27- ಒಂದೇರಡು ದಿನಗಳಲ್ಲೇ ಓಲಾ ಉಬರ್ ವಾಹನಗಳಿಗೆ ಸರ್ಕಾರ ಹೊಸ ದರ ಫಿಕ್ಸ್ ಮಾಡಲಿದೆ.
ಓಲಾ ಉಬರ್ ವಾಹನಗಳಿಗ 15 ದಿನಗಳ ಒಳಗೆ ಹೊಸ ದರ ಫಿಕ್ಸ್ ಮಾಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು.
ನ್ಯಾಯಾಲಯದ ಆದೇಶದ ಗಡುವು ಮುಗಿಯುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಒಂದೇರಡು ದಿನಗಳಲ್ಲೇ ಹೊಸ ದರ ಫಿಕ್ಸ್ ಮಾಡಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಓಲಾ- ಉಬರ್ ಸಂಸ್ಥೆಗಳು ನಾವು ಸರ್ಕಾರಕ್ಕೆ ಜಿಎಸ್‍ಟಿ ಪಾವತಿಸಲು ಸಿದ್ದ ಎಂದು ಹೇಳಿಕೆ ನೀಡಿದ್ದವು. ಹೀಗಾಗಿ ಜಿಎಸ್‍ಟಿ ಸೇರಿಸಿ ಹೊಸ ದರ ನಿಗ ಪಡಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಸದ್ಯ 2 ಕಿ.ಮೀ ಗೆ 30 ರೂ. ಸಾಮಾನ್ಯ ದರ ನಿಗಪಡಿಸಲಾಗಿದೆ. ಆದರೆ, ಓಲಾ, ಉಬರ್ ನವರು ಮಿನಿಮಮ್ ದರ 100 ರೂ. ವಸೂಲಿ ಮಾಡುತ್ತಿರುವುದು ಮಾಮೂಲಾಗಿದೆ.

ಕೋಟಿ ಕಂಠ ಗಾಯನ : 1 ಕೋಟಿ 10 ಲಕ್ಷ ಜನ ನೋಂದಣಿ

ಓಲಾ, ಉಬರ್ ಸಂಸ್ಥೆಗಳ ಈ ಆಟಾಟೋಪಕ್ಕೆ ಕಡಿವಾ ಣ ಹಾಕುವ ಉದ್ದೇಶದಿಂದ ಸರ್ಕಾರ ಹೊಸ ದರ ನಿಗಪಡಿಸಲು ತೀರ್ಮಾನಿಸಿದೆ. ಮೂಲಗಳ ಪ್ರಕಾರ ಹಾಲಿ ಚಾಲ್ತಿಯಲ್ಲಿರುವ ಮಿನಿಮಮ್ ದರವನ್ನು 30 ರಿಂದ 45 ರೂ.ಗಳಿಗೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಬಿಜೆಪಿ ಸೇರುವಂತೆ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದ ಮೂವರ ಬಂಧನ

ಹೊಸ ದರ ಫಿಕ್ಸ್ ಆದ ನಂತರ ಓಲಾ,ಉಬರ್ ವಾಹನಗಳ ಚಾಲಕರು ನಿಗಪಡಿಸಿರುವ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

Articles You Might Like

Share This Article