ವಿಭಾಗ ಮಟ್ಟದಲ್ಲಿ ವೃದ್ಧಾಶ್ರಮ ಸ್ಥಾಪನೆ : ಕೋಟಾ ಶ್ರೀನಿವಾಸ ಪೂಜಾರಿ

Social Share

ಬೆಂಗಳೂರು,ಫೆ.14- ಹಿರಿಯ ನಾಗರೀಕರಿಗಾಗಿ ವಿಭಾಗ ಮಟ್ಟದಲ್ಲಿ ವೃದ್ಧಾಶ್ರಮಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹಾಗೂ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಿಧಾನ ಪರಿಷತ್ನಲ್ಲಿ ಪ್ರತಾಪ್ಸಿಂಹ ನಾಯಕ್ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದ ಕೋಟಾ ಶ್ರೀನಿವಾಸ ಪೂಜಾರಿ, 2011ರ ಜನಗಣತಿ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 58 ಲಕ್ಷ ಹಿರಿಯ ನಾಯಕರಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ವಿವಿಧ ಹಂತದಲ್ಲಿ ಪಿಂಚಣಿ ನೀಡಲಾಗುತ್ತಿದೆ. 18 ಲಕ್ಷ ಜನ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.ಹಿರಿಯ ನಾಗರೀಕರಿಗೆ 11 ವಿಷಯಗಳಲ್ಲಿ ಸರ್ಕಾರ ಸಹಾಯ ಮಾಡುತ್ತಿದೆ. 30 ಜಿಲ್ಲೆಗಳಲ್ಲಿ ನಿರ್ಗತಿಕ ನಾಗರಿಕರಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವೃದ್ಧಾಶ್ರಮಗಳನ್ನು ನಡೆಸಲಾಗುತ್ತಿದೆ.

ಅವುಗಳಿಗೆ ನೀಡುತ್ತಿದ್ದ ಸಹಾಯ ಧನವನ್ನು ಎಂಟರಿಂದ 12 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ರಾಜ್ಯದ ಪ್ರತಿ ಕಂದಾಯ ಉಪವಿಭಾಗದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವೃದ್ಧಾಶ್ರಮಗಳನ್ನು ಪ್ರಾರಂಭಿಸಲಾಗುವುದು. ಪ್ರಸ್ತುತ 9 ಕಂದಾಯ ಉಪ ವಿಭಾಗಗಳಲ್ಲಿ ವೃದ್ಧಾಶ್ರಮಗಳನ್ನು ನಡೆಸಲಾಗುತ್ತದೆ ಎಂದರು.

ಹಿರಿಯ ನಾಗರಿಕರ ಮಾಸಿಕ ಪೋಷಣಾ ಭತ್ಯೆ, ಹಿರಿಯ ನಾಗರಿಕರ ಗುರುತಿನ ಚೀಟಿ ಯೋಜನೆ, ಹಿರಿಯ ನಾಗರಿಕರ ಸಹಾಯವಾಣಿ, ಹಗಲು ಯೋಗಕ್ಷೇಮ ಕೇಂದ್ರಗಳು, ಜೀರಿಯಾಟ್ರಿಕ್ ಕೇಂದ್ರಗಳು, ರೈಲ್ವೆ ಮತ್ತು ಸಾರಿಗೆ ಬಸ್ಗಳ ಸಂಚಾರದಲ್ಲಿ ರಿಯಾಯಿತಿ ನೀಡಲಾಗಿದೆ ಎಂದರು.

ಪೋಷಕರನ್ನು ನೋಡಿಕೊಳ್ಳದ ಮಕ್ಕಳ ವಿರುದ್ಧ ಹಿರಿಯ ನಾಗರೀಕರು ನೀಡುವ ದೂರನ್ನು ವಿಚಾರಣೆ ನಡೆಸಲು ಉಪವಿಭಾಗಾಕಾರಿಗಳ ಸಮಿತಿ ರಚನೆಯಾಗಿದೆ. ಅಲ್ಲಿ ನ್ಯಾಯ ಸಿಗದಿದ್ದಾಗ ಜಿಲ್ಲಾಕಾರಿಗಳಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಇಲ್ಲಿ ವಿಳಂಬವಾಗುತ್ತಿದೆ ಎಂಬ ಆಕ್ಷೇಪವಿದ್ದು, ವಿಚಾರಣೆಗೆ ನಿಯಮಗಳನ್ನು ಸರಳೀಕರಣ ಮಾಡಿ, ವಿಚಾರಣಾ ಅವಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವವುದು ಎಂದು ಹೇಳಿದರು.

#oldagehome, #divisionallevel, #KotaSrinivsPoojary,

Articles You Might Like

Share This Article