Saturday, September 23, 2023
Homeಇದೀಗ ಬಂದ ಸುದ್ದಿಸಂಸತ್ ಹಳೆಯ ಕಟ್ಟಡವನ್ನು 'ಸಂವಿಧಾನ ಸದನ' ಎಂದು ಹೆಸರಿಟ್ಟ ಪ್ರಧಾನಿ ಮೋದಿ

ಸಂಸತ್ ಹಳೆಯ ಕಟ್ಟಡವನ್ನು ‘ಸಂವಿಧಾನ ಸದನ’ ಎಂದು ಹೆಸರಿಟ್ಟ ಪ್ರಧಾನಿ ಮೋದಿ

- Advertisement -

ನವದೆಹಲಿ, ಸೆ.19- ನೂತನ ಸಂಸತ್ ಭವನಕ್ಕೆ ಉಭಯ ಶಾಸನ ಸಭೆಗಳ ಕಲಾಪವನ್ನು ಸ್ಥಳಾಂತರಿಸುವ ಹಂತದಲ್ಲಿ ಹಳೆಯ ಕಟ್ಟಡವನ್ನು ಸಂವಿಧಾನ ಸದನವನ್ನಾಗಿ ಉಳಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಸುಧಾರಣೆಗಳನ್ನು ಕೈಗೊಳ್ಳಬೇಕಾಗಿದೆ. ಅಮೃತ ಕಾಲದಲ್ಲಿ ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸಬೇಕು. ಭಾರತವು ಹೊಸ ಶಕ್ತಿಯಿಂದ ತುಂಬಿದೆ. ನಾವು ಅಭಿವೃದ್ಧಿಯಲ್ಲಿ ವೇಗವಾಗಿ ಬೆಳೆಯುತ್ತಿದ್ದೇವೆ. ಸಂಸತ್ತಿನ ಸೆಂಟ್ರಲ್ ಹಾಲ್ ನಮ್ಮ ಕರ್ತವ್ಯಗಳನ್ನು ಪೂರೈಸಲು ನಮಗೆ ಸೂರ್ತಿ ನೀಡುತ್ತದೆ ಎಂದು ಹೇಳಿದರು.

- Advertisement -

ಹೊಸ ಸಂಸತ್ತಿಗೆ ಹೋಗುವಾಗ, ಅದರ (ಹಳೆಯ ಸಂಸತ್ತಿನ) ಘನತೆ ಎಂದಿಗೂ ಕಡಿಮೆಯಾಗಬಾರದು. ಇದನ್ನು ಹಳೆಯ ಸಂಸತ್ತಿನ ಕಟ್ಟಡವಾಗಿ ಬಿಡಬಾರದು. ಹಾಗಾಗಿ ಮುಂದೆ ಇದನ್ನು ಸಂವಿಧಾನ ಸದನ ಎಂದು ಕರೆಯಬೇಕು ಎಂದು ಸಲಹೆ ನೀಡಿದರು.

ನಾವು ಭವಿಷ್ಯಕ್ಕಾಗಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೇವಲ ರಾಜಕೀಯ ಲಾಭಗಳ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಜ್ಞಾನ ಮತ್ತು ನಾವೀನ್ಯತೆಯು ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಚಂದ್ರಯಾನ-3 ರ ಯಶಸ್ಸಿನ ನಂತರ, ನಮ್ಮ ಯುವಕರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಸ್ಪೋರ್ತಿ ಪಡೆದಿದ್ದಾರೆ. ನಾವು ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದರು.

ಮಹಿಳಾ ಮೀಸಲಾತಿ ವಿಧೇಯಕಯನ್ನು ಸ್ವಾಗತಿಸಿದ ಮಾಜಿ ಪ್ರಧಾನಿ ದೇವೇಗೌಡರು

ಉತ್ಪಾದನಾ ವಲಯದಲ್ಲಿ ನಾವು ವಿಶ್ವದಲ್ಲೇ ಅತ್ಯುತ್ತಮವಾಗಿ ಮುನ್ನೆಡೆಯಬೇಕಾಗಿದೆ. ಶೂನ್ಯ ದೋಷ, ಶೂನ್ಯ ಪರಿಣಾಮ ಎಂದು ತಾವು ಕೆಂಪುಕೋಟೆಯ ಮೇಲೆ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಿದ ಪ್ರಧಾನಿ, ನಮ್ಮ ಉತ್ಪನ್ನಗಳಲ್ಲಿ ಯಾವುದೇ ದೋಷ ಇರಬಾರದು ಮತ್ತು ಪ್ರಕ್ರಿಯೆಯು ಇರಬೇಕು. ಪರಿಸರದ ಮೇಲೆ ಅಡ್ಡ ಪರಿಣಾಮ ಬೀರಬಾರದು. ಶೂನ್ಯ ದೋಷ, ಶೂನ್ಯ ಪರಿಣಾಮದೊಂದಿಗೆ ನಾವು ಪ್ರಪಂಚದ ಮುಂದೆ ಹೋಗಬೇಕಾಗಿದೆ.

ಅಮೃತ ಕಾಲದ 25 ವರ್ಷಗಳಲ್ಲಿ, ಭಾರತವು ದೊಡ್ಡ ಕ್ಯಾನ್ವಾಸ್‍ನಲ್ಲಿ ಕೆಲಸ ಮಾಡಬೇಕಾಗಿದೆ. ನಾವು ಸಣ್ಣ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುವ ಸಮಯ ಮುಗಿದಿದೆ. ಎಲ್ಲಕ್ಕಿಂತ ಮೊದಲು, ಆತ್ಮನಿರ್ಭರ್ ಭಾರತ್ ಆಗುವ ಗುರಿಯತ್ತ ಮುಂದೆ ಹೆಜ್ಜೆ ಇಡಬೇಕು. ಇದು ಇಂದಿನ ಅಗತ್ಯ ಕೂಡ ಆಗಿದೆ. ಇದು ಪ್ರತಿಯೊಬ್ಬರ ಕರ್ತವ್ಯ. ಪಕ್ಷಗಳು ಅದರ ದಾರಿಯಲ್ಲಿ ಅಡ್ಡ ಬರುವುದಿಲ್ಲ. ಸರ್ಫ್ ದಿಲ್ ಚಾಹಿಯೇ, ದೇಶ್ ಕೆ ಲಿಯೇ ಚಾಹಿಯೇ ಎಂದರು.

ಸಂಸತ್ತಿನಲ್ಲಿ ಮಾಡಿದ ಪ್ರತಿಯೊಂದು ಕಾನೂನು, ಸಂಸತ್ತಿನಲ್ಲಿ ನಡೆಯುವ ಪ್ರತಿಯೊಂದು ಚರ್ಚೆ ಮತ್ತು ಸಂಸತ್ತು ನೀಡುವ ಪ್ರತಿಯೊಂದು ಸಂಕೇತವು ಭಾರತೀಯ ಆಶಯವನ್ನು ಉತ್ತೇಜಿಸಬೇಕು. ಇದು ನಮ್ಮ ಜವಾಬ್ದಾರಿ ಮತ್ತು ಪ್ರತಿಯೊಬ್ಬ ಭಾರತೀಯನ ನಿರೀಕ್ಷೆಯಾಗಿದೆ. ಸುಧಾರಣೆಗಳು ಏನೇ ಇರಲಿ. ಇಲ್ಲಿ ಮಾಡಿದ್ದು, ಭಾರತೀಯ ಆಕಾಂಕ್ಷೆ ನಮ್ಮ ಆದ್ಯತೆಯಾಗಬೇಕು.

ಕಾವೇರಿ ಸಂಕಷ್ಟ : ಸಂಸದರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಮಾಲೋಚನೆ

ಯಾರಾದರೂ ಚಿಕ್ಕ ಕ್ಯಾನ್ವಾಸ್‍ನಲ್ಲಿ ದೊಡ್ಡ ಚಿತ್ರವನ್ನು ಮಾಡಬಹುದೇ? ಅದೇ ರೀತಿಯಲ್ಲಿ, ನಮ್ಮ ಚಿಂತನೆಯ ಕ್ಯಾನ್ವಾಸ್ ಅನ್ನು ದೊಡ್ಡದಾಗಿಸಲು ಸಾಧ್ಯವಾಗದಿದ್ದರೆ, ಭವ್ಯ ಭಾರತದ ಚಿತ್ರವನ್ನು ಚಿತ್ರಿಸಲು ನಮಗೆ ಸಾಧ್ಯವಾಗುವುದಿಲ್ಲ. ನಾವು ಒಂದರ ನಂತರ ಒಂದರಂತೆ ಘಟನೆಗಳನ್ನು ನೋಡಿದರೆ, ಅವುಗಳಲ್ಲಿ ಪ್ರತಿಯೊಂದೂ ಇಂದು ಭಾರತವು ಹೊಸ ಪ್ರಜ್ಞೆಯೊಂದಿಗೆ ಪುನರುಜ್ಜೀವನಗೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹೊಸ ಶಕ್ತಿಯಿಂದ ತುಂಬಿದೆ. ಈ ಪ್ರಜ್ಞೆ ಮತ್ತು ಶಕ್ತಿಯು ಕೋಟ್ಯಂತರ ಜನರ ಕನಸುಗಳನ್ನು ಸಂಕಲ್ಪಗಳಾಗಿ ಬದಲಾಯಿಸಬಹುದು ಮತ್ತು ಆ ಸಂಕಲ್ಪಗಳನ್ನು ಸಾಕಾರಗೊಳಿಸಬಹುದು ಎಂದರು.

ಈ ಸಂಸತ್ತಿನಿಂದ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರಿಗೆ ನ್ಯಾಯ ಸಿಕ್ಕಿತು, ಇಲ್ಲಿಂದ ತ್ರಿವಳಿ ತಲಾಖ್ ವಿರೋಸುವ ಕಾನೂನನ್ನು ಒಗ್ಗಟ್ಟಿನಿಂದ ಅಂಗೀಕರಿಸಲಾಯಿತು. ಕಳೆದ ಕೆಲವು ವರ್ಷಗಳಲ್ಲಿ ಸಂಸತ್ತು ಕೂಡ ತೃತೀಯ ಲಿಂಗಿಗಳಿಗೆ ನ್ಯಾಯ ನೀಡುವ ಕಾನೂನುಗಳನ್ನು ಅಂಗೀಕರಿಸಿದೆ. ವಿಶೇಷಚೇತನರಿಗೆ ಉಜ್ವಲ ಭವಿಷ್ಯವನ್ನು ಖಾತರಿಪಡಿಸುವ ಕಾನೂನುಗಳನ್ನು ನಾವು ಒಗ್ಗಟ್ಟಿನಿಂದ ಅಂಗೀಕರಿಸಿದ್ದೇವೆ. ಸಂಸತ್ತಿನಲ್ಲಿ 370 ನೇ ವಿಯನ್ನು ರದ್ದುಗೊಳಿಸುವ ಅವಕಾಶವನ್ನು ನಾವು ಪಡೆದುಕೊಂಡಿದ್ದೇವೆ ಎಂದು ಸ್ಮರಿಸಿಕೊಂಡರು.

ಹೊಸ ಸಂಸತ್ತಿನ ಕಟ್ಟಡದಲ್ಲಿ ಹೊಸ ಭವಿಷ್ಯವನ್ನು ಪ್ರಾರಂಭಿಸಲಿದ್ದೇವೆ. ಇಂದು ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಪೂರೈಸುವ ಸಂಕಲ್ಪದೊಂದಿಗೆ ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರು.

#old, #Parliamentbuilding, #SamvidhanSadan, #PMModi,

- Advertisement -
RELATED ARTICLES
- Advertisment -

Most Popular