ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಜಾರಿ ಕುರಿತು ಚರ್ಚಿಸಿ ನಿರ್ಧಾರ : ಸಿಎಂ

Social Share

ಬೆಳಗಾವಿ,ಡಿ.20- ನಿವೃತ್ತ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶೂನ್ಯವೇಳೆಯಲ್ಲಿ ಅನೇಕ ಸದಸ್ಯರು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ವಿಷಯ ಪ್ರಸ್ತಾಪಿಸಿ, ಈಗಾಗಲೇ ಸಾವಿರಾರು ನಿವೃತ್ತ ನೌಕರರು ಹಳೆ ಪಿಂಚಣಿಯನ್ನೇ ಮುಂದುವರೆಸಬೇಕೆಂದು ಬೀದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬೊಮ್ಮಾಯಿ, ನಿವೃತ್ತ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಕುರಿತು ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಾಡಬೇಕೆ? ಬೇಡವೇ ಎಂಬುದು ಎರಡನೇ ಮಾತು? ಆದರೆ ಸದನದಲ್ಲಿ ಇದರ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ. ಎಲ್ಲ ಸದಸ್ಯರ ಅಭಿಪ್ರಾಯದ ನಂತರ ಸರ್ಕಾರದ ನಿಲುವು ಏನೆಂಬುದನ್ನು ತಿಳಿಸುವುದಾಗಿ ಹೇಳಿದರು.

ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ

ಬೇರೆ ಬೇರೆ ರಾಜ್ಯಗಳಲ್ಲಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸುವ ಬಗ್ಗೆ ಸದಸ್ಯರು ಸದನದ ಗಮನಕ್ಕೆ ತಂದಿದ್ದಾರೆ, ರಾಜಸ್ಥಾನ, ಛತ್ತೀಸ್‍ಘಡ ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಹಳೆ ಪಿಂಚಣಿಯನ್ನೇ ಮುಂದುವರೆಸಿದ್ದಾರೆ ಎಂದಿದ್ದಾರೆ. ಅಂತಿಮವಾಗಿ ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ ತೀರ್ಮಾನಿಸುತ್ತೇವೆ ಎಂದರು.

ಈಗಾಗಲೇ ಸರ್ಕಾರಿ ನೌಕರರಿಗೆ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ವೇತನ ಪರಿಷ್ಕರಣೆ ಕುರಿತು 7ನೇ ವೇತನ ಆಯೋಗ ರಚನೆ ಮಾಡಲಾಗಿದೆ. ಟಿಎಡಿಎ ಪರಿಷ್ಕರಿಸಲಾಗಿದೆ. ಹಿಂದೆ ಡಿಎ ಜಾರಿಯಾಗಿದ್ದರೆ ಅದು ಅನುಷ್ಠಾನವಾಗಲು ವರ್ಷಗಳಾಗುತ್ತಿದ್ದವು. ಈಗ 24 ಗಂಟೆಯೊಳಗೆ ಜಾರಿಗೆ ಬರುತ್ತದೆ. ಹೀಗ ನೌಕರರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದರು.

ಜಪಾನ್ ವಿರುದ್ಧ ಉತ್ತರ ಕೊರಿಯಾ ಆಕ್ರೋಶ : ರಕ್ತ-ನಿರ್ಣಾಯಕ ಕ್ರಮದ ಎಚ್ಚರಿಕೆ

ಹಳೆ ಪಿಂಚಣಿ ಯೋಜನೆಯನ್ನು ಅನುಷ್ಠಾನ ಮಾಡುವುದರಿಂದ ಆಗಬಹುದಾದ ವೆಚ್ಚ, ಸರ್ಕಾರದ ಬೊಕ್ಕಸಕ್ಕೆ ಬೀಳುವ ಹೊರೆ ಇವೆಲ್ಲವನ್ನು ಲೆಕ್ಕ ಹಾಕಬೇಕು. ಇದರ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ, ಅಂತಿಮವಾಗಿ ಸದಸ್ಯರೆಲ್ಲರ ಅಭಿಪ್ರಾಯ ಪಡೆದು ನಮ್ಮ ನಿರ್ಧಾರವನ್ನು ಪ್ರಕಟಿಸುವುದಾಗಿ ಸಿಎಂ ಹೇಳಿದರು.

#OldPensionSystem #GovernmentEmployees, #CMBommai, #AssemblySession,

Articles You Might Like

Share This Article