ಜಮ್ಮು-ಕಾಶ್ಮೀರ ಪಂಡಿತರ ಕಾಲೋನಿಯಲ್ಲಿ ಶೆಲ್ ಸ್ಫೋಟ

Social Share

ಶ್ರೀನಗರ, ಆ.7- ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿಂದು ಪಂಡಿತರ ಕಾಲೋನಿಯಲ್ಲಿ ಉಗ್ರರು ಶೆಲ್ ಸ್ಫೋಟಗೊಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪಂಡಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅವರು ವಾಸಿಸುವ ಶ್ರೀನಗರದ ಕ್ರಲ್‍ಪೋರಾ ಕಾಲೋನಿಯಲ್ಲಿ ಉಗ್ರರು ಶೆಲ್ ಸ್ಫೋಟಗೊಳಿಸಿದ್ದು, ಇದು ಬೆದರಿಸುವ ಸಂಚೋ ಅಥವಾ ಹತ್ಯೆ ಮಾಡುವ ಸಂಚೋ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಕೆಲವು ಮನೆಯ ಕಿಟಕಿ, ಗಾಜುಗಳು ಒಡೆದುಹೋಗಿವೆ. ಮಧ್ಯ ಕಾಶ್ಮೀರದ ಚದುರದ ಕಲ್ಪೋರಾ ಕಾಲೋನಿಯಲ್ಲಿ ಪಂಡಿತರ ಕುಟುಂಬಗಳು ವಾಸಿಸುತ್ತಿದ್ದು, ನಿನ್ನೆ ಬೆಳಗ್ಗೆ 7.45ರ ಸುಮಾರಿಗೆ ಸ್ಫೋಟ ಸಂಭವಿಸಿ ಆತಂಕ ಸೃಷ್ಟಿಸಲಾಗಿತ್ತು.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯದಳ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಹಳೆಯ ಶೆಲ್ ಸೋಟಗೊಂಡಿರಬಹುದು ಎನ್ನಲಾಗಿದೆ. ತನಿಖೆ ಮುಂದುವರೆದಿದೆ.

Articles You Might Like

Share This Article