ಬೆಂಗಳೂರು,ಮಾ.9- ಮನೆಗೆ ನುಗ್ಗಿ ಒಂಟಿ ವೃದ್ಧೆ ಬಾಯಿಗೆ ಬಟ್ಟೆ ತುರುಕಿ, ಕಿವಿಗಳನ್ನು ಹರಿದು ಹಾಕಿ ಓಲೆಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ ಖದೀಮನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ಅದರಂಗಿ ಗ್ರಾಮದ ನಿವಾಸಿ ಮೋಹನ್‍ಕುಮಾರ್ (24) ಬಂಧಿತ ಆರೋಪಿ. ವಿಜಯನಗರದ ಸುಬ್ಬಣ್ಣಗಾರ್ಡ್‍ನ ಒಂದನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ 70 ವರ್ಷದ ವೃದ್ಧೆಯೊಬ್ಬರು ಒಂಟಿಯಾಗಿ ವಾಸವಿದ್ದಾರೆ.
ಸೋಮಣ್ಣ ಮುನಿಸು ತಣಿಸಿದ ಸಿಎಂ ಬೊಮ್ಮಾಯಿ
ಕಳೆದ ಒಂದು ವಾರದ ಹಿಂದೆ ವೃದ್ಧೆ ವಾಸವಿದ್ದ ಕಟ್ಟಡದಲ್ಲೇ ಬಾಡಿಗೆ ಮನೆಯಲ್ಲಿದ್ದ ಆರೋಪಿ ಇವರ ಮನೆಗೆ ನುಗ್ಗಿ ವೃದ್ಧೆಯನ್ನು ಅಡುಗೆ ಮನೆಗೆ ತಳ್ಳಿಕೊಂಡು ಹೋಗಿ ಅವರ ಬಾಯಿಗೆ ಬಟ್ಟೆ ತುರುಕಿ ಕಿವಿಗಳನ್ನುಹರಿದು ಹಾಕಿ ರಕ್ತಗಾಯಗೊಳಿಸಿ ಚಿನ್ನದ ಓಲೆಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದನು.
ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಮಹೂರ್ತ ಫಿಕ್ಸ್..?
ಈ ಬಗ್ಗೆ ವೃದ್ಧೆ ಗೋವಿಂದರಾಜನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಾದ 72 ಗಂಟೆಗಳಲ್ಲಿ ಆರೋಪಿ ಮೋಹನ್‍ಕುಮಾರ್‍ನನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳವಲ್ಲಿ ಯಶಸ್ವಿ ಯಾಗಿದ್ದಾರೆ.
Old woman, gold, robbery, man, arrested,