OMG..! ಪತಿಯ ಸಾವಿನ ಸುದ್ದಿಯನ್ನೇ ಬ್ರೇ(ಶಾ)ಕಿಂಗ್ ಸುದ್ದಿಯಾಗಿ ಓದಿದ ನಿರೂಪಕಿ..! (Video)

Supreet-Kour

ರಾಯಪುರ. ಎ.08 : ಇದು ನಿಜಕ್ಕೂ ಊಹಿಸಲಾಗದ ಸಂಧರ್ಭ. ಕೆಲಸದ ಬದ್ಧತೆ ಟಿವಿ ನಿರೂಪಕಿ ಒಬ್ಬಳು ತನ್ನ ಪತಿಯ ಸಾವಿನ ಸುದ್ದಿಯನ್ನೇ ಬ್ರೇಕಿಂಗ್ ನ್ಯೂಸ್ ನಂತೆ ಓದುವುದು ಎಂದರೆ ನೀವೇ ಊಹಿಸಿ ಅವಳ ಮನಸ್ಥಿತಿ ಏನಾಗಿರಬಹುದು..?  ಹೌದು ಛತ್ತೀಸ್‌ಗಢದ ಐಬಿಸಿ–24 ನ ಸುದ್ದಿವಾಹಿನಿಯ ನಿರೂಪಕಿಯೊಬ್ಬಳು ಅವಳ ಪತಿಯನ್ನು ಮೃತಪಟ್ಟದ್ದನ್ನು ತಾನೇ ಬ್ರೇಕಿಂಗ್ ನ್ಯೂಸ್ ಆಗಿ ಓದಿ ಹೇಳಿದ್ದಾಳೆ..!

https://www.youtube.com/watch?v=nboXjXtAMB0

ನಡೆದಿದ್ದಿಷ್ಟೇ ಬೆಳಿಗ್ಗೆ ಸುದ್ದಿಯ ನೇರಪ್ರಸಾರ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ವರದಿಗಾರರೊಬ್ಬರು ದೂರವಾಣಿ ಕರೆ ಮಾಡಿ ಕಾರು ಅಪಘಾತದ ಬ್ರೇಕಿಂಗ್ ಸುದ್ದಿಯೊಂದನ್ನು ನೀಡುತ್ತಾರೆ. ಆ ಸುದ್ದಿಯನ್ನೂ ನಿರೂಪಕಿ ವಾಚಿಸುವಾಗ ರೆನಾಲ್ಟ್ ಡಸ್ಟರ್ ಕಾರು ಅಪಘಾತಕ್ಕೀಡಾಗಿರುವುದಾಗಿಯೂ ಅದರಲ್ಲಿದ್ದ ಐವರ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಅಪಘಾತದ ಸಮಯ, ಮಾರ್ಗ, ಕಾರು, ಅದರಲ್ಲಿದ್ದ ಜನರ ವಿವರ ಎಲ್ಲವನ್ನೂ ತಿಳಿದುಕೊಂಡಾಗ ಆಕೆಗೆ ತೋರಿಸಿಕೊಳ್ಳಲಾಗದ ಶಾಕ್ ಏಕೆಂದರೆ ಸತ್ತವರಲ್ಲಿ ತನ್ನ ಪತಿಯೂ ಕೂಡ ಒಬ್ಬರು ಎನ್ನುವುದು ಆ ಕ್ಷಣದಲ್ಲೂ ಅರಿವಾದರೂ ನಿಲ್ಲಿಸದೆ ಸುದ್ದಿ ಓದಿ ಸುದ್ದಿಯಾಗಿದ್ದಾಳೆ ಆ ನಿರೂಪಕಿ. ಸುಪ್ರೀತ್ ಕೌರ್ ಅವರೇ ಪತಿಯನ್ನು ಮೃತಪಟ್ಟದ್ದನ್ನು ತಾನೇ ಬ್ರೇಕಿಂಗ್ ನ್ಯೂಸ್ ಆಗಿ ಓದಿ ಹೇಳಿದ ನತದೃಷ್ಟ ನಿರೂಪಕಿ.

ಪತಿಯ ಸಾವಿನ ಸುದ್ದಿ ತಿಳಿದರೂ ಒಂದಿಷ್ಟೂ ವಿಚಲಿತರಾಗದೇ ಅವರು ಪತಿಯ ಮರಣವಾರ್ತೆಯನ್ನು ಓದಿ, ನಂತರ ನ್ಯೂಸ್‌ ರೂಂನಿಂದ ಹೊರ ಬಂದು ಆಘಾತದಿಂದ ಬಂಧುಗಳಿಗೆ ದೂರವಾಣಿ ಕರೆ ಮಾಡಿ ಪತಿಯ ಬಗ್ಗೆ ವಿಚಾರಿಸುತ್ತಿದ್ದರು. ಈ ದೃಶ್ಯವನ್ನು ನೋಡುತ್ತಿದ್ದ ಸಹೋದ್ಯೋಗಿಗಳಿಗೆ ಮಾತು ಬಾರದೆ ಸ್ಥಬ್ದವಾಗಿ ನಿಂತಿದ್ದರು. ಅವಳ ಕಾರ್ಯ ಬದ್ಧತೆಯ ಬಗ್ಗೆ ಮನಸಿನಲ್ಲೇ ಹೆಮ್ಮೆಪಡುತ್ತಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin