ಪ್ರಾಣಿಗಳಲ್ಲಿ ರೂಪಾಂತರಗೊಂಡು ಓಮಿಕ್ರಾನ್ ಮನುಷ್ಯರಿಗೆ ಹರಡಿದೆ

Social Share

ವಾಷಿಂಗ್ಟನ್, ಅ.20- ಸಾರ್ಸ್ ಕೋ-2 ವೈರಸ್‍ನ ಓಮಿಕ್ರಾನ್ ರೂಪಾಂತರ ಪ್ರಾಣಿ ಪ್ರಭೇದದಿಂದ ಮನುಷ್ಯರಿಗೆ ಹರಡಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಇತ್ತೀಚೆಗೆ ಜರ್ನಲ್ ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಓಮಿಕ್ರಾನ್ ಮೂಲದ ಬಗ್ಗೆ ಹೊಸ ಒಳನೋಟಗಳನ್ನು ಹುಟ್ಟು ಹಾಕಿದೆ.

ನಾಳೆ ರಾಹುಲ್ ಭಾರತ್ ಜೋಡೋ ಯಾತ್ರೆ ರಾಯಚೂರಿಗೆ : ಪ್ರಿಯಾಂಕ ಭಾಗಿ..?

ರೂಪಾಂತರದ ವಿವರವಾದ ರಚನಾತ್ಮಕ ಜೀವಶಾಸ್ತ್ರದ ವಿಶ್ಲೇಷಣೆಯನ್ನು ಸಂಶೋಧಕರು ನಡೆಸಿದ್ದಾರೆ. ಒಮಿಕ್ರಾನ್ ಸ್ಪೈಕ್ ಪ್ರೊಟೀನ್‍ನಲ್ಲಿ ಹಲವಾರು ರೂಪಾಂತರಗಳನ್ನು ಗುರುತಿಸಿದೆ. ಓಮಿಕ್ರಾನ್ ರೂಪಾಂತರ ನೇರವಾಗಿ ಮನುಷ್ಯರಿಂದ ಹುಟ್ಟಿಕೊಂಡಿಲ್ಲ. ಇತರ ಪ್ರಾಣಿ ಪ್ರಭೇದಗಳಿಂದ ಮನುಷ್ಯರಿಗೆ ಹರಡಿರಬಹುದು ಎಂದು ಸಂಶೋಧನೆ ಸ್ಪಷ್ಟ ಪಡಿಸಿದೆ.

ಓಮಿಕ್ರಾನ್ ರೂಪಾಂತರ ಒಂದು ಪ್ರಾಣಿ ಪ್ರಭೇದದಿಂದ ಇನ್ನೊಂದಕ್ಕೆ ಹರಡುವ ಸಮಯದಲ್ಲಿ ವಿಕಸನೀಯ ಕುರುಹುಗಳನ್ನು ಹೆಚ್ಚಿಸಿಕೊಂಡಿದೆ ಎಂದು ಅಮೆರಿಕಾದ ಮಿನ್ನೇಸೋಟ ವಿಶ್ವವಿದ್ಯಾಲಯದ ಅಧ್ಯಯನದ ಪ್ರಮುಖ ಲೇಖಕ ಫಾಂಗ್ ಲಿ ಶಂಕಿಸಿದ್ದಾರೆ.

ಬೆಂಗಳೂರಲ್ಲಿ ಮಳೆ, ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯಕ್ಕೆ CM ಸೂಚನೆ

ಕೋವಿಡ್-19 ವೈರಸ್ ಅನೇಕ ಪ್ರಾಣಿ ಪ್ರಭೇದಗಳಿಗೆ ತಗುಲುವ ಸಾಮಥ್ರ್ಯ ಹೊಂದಿದೆ. ಇದು ರೂಪಾಂತರಗೊಳ್ಳಲು ಮುಖ್ಯ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಅದರ ಮೇಲೆ ನಿಗಾವಹಿಸಿ ಮತ್ತಷ್ಟು ರೂಪಾಂತರಗೊಳ್ಳುವುದನ್ನು ಅಂದಾಜಿಸಲು ಅವಕಾಶವಿದೆ.

ಹಾಸನಂಬ ದರ್ಶನಕ್ಕೆ ಸರತಿ ಸಾಲಿಲ್ಲಿ ನಿಂತಿದ್ದ ಯುವಕ ಹೃದಯಘಾತದಿಂದ ಸಾವು

ಮಾನವ ಕರೋನವೈರಸ್ ಮತ್ತು ಪ್ರಾಣಿಗಳ ಕರೋನವೈರಸ್ ಎರಡನ್ನೂ ಗುರಿಯಾಗಿಟ್ಟುಕೊಂಡು ಚಿಕಿತ್ಸಕಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಂಭಾವ್ಯ ಭವಿಷ್ಯದ ಕರೋನವೈರಸ್ ಸಾಂಕ್ರಾಮಿಕ ರೋಗಗಳನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Articles You Might Like

Share This Article