ಬೆಂಗಳೂರು,ಜ.4- ಕೊರೊನಾ ಆತಂಕದ ನಡುವೆಯೂ ಕೋವಿಡ್ಗಿಂತ ವೇಗವಾಗಿ ಹರಡಬಲ್ಲ ಹೊಸ ರೂಪಾಂತರಿ ತಳಿ ರಾಜ್ಯಕ್ಕೂ ಕಾಲಿಟ್ಟಿರುವುದು ದೃಢಪಟ್ಟಿದೆ. ಚೀನಾ ಮತ್ತು ಅಮೆರಿಗಳನ್ನು ಇನ್ನಿಲ್ಲದಂತೆ ಕಾಡಿದ್ದ ಓಮಿಕ್ರಾನ್ನ ಹೊಸ ರೂಪಾಂತರಿ ವೈರಸ್ XBB.1.5 ತಳಿ ಭಾರತಕ್ಕೂ ವಕ್ಕರಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಅಮೆರಿಕಾದಲ್ಲಿ ಶರವೇಗದಲ್ಲಿ ಹರಡುವ ಮೂಲಕ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ತಳಿ ಭಾರತಕ್ಕೂ ಕಾಲಿಟ್ಟಿರುವುದರಿಂದ ಇಲ್ಲೂ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನ, ಗುಜರಾತ್ನ ಮೂವರಲ್ಲಿ ಕಾಣಿಸಿಕೊಂಡಿದ್ದ ಈ ಹೊಸ ರೂಪಾಂತರಿ ವೈರಸ್ ರಾಜ್ಯದಲ್ಲೋ ಒಬ್ಬರಲ್ಲಿ ಕಾಣಿಸಿಕೊಂಡಿರುವುದರಿಂದ ಆರೋಗ್ಯ ಇಲಾಖೆ ಸೋಂಕು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಸ್ರವಿಸುವ ಮೂಗು, ಜ್ವರ, ಗಂಟಲು ನೋವು, ತಲೆನೋವು, ಶೀತ, ಸೀನುವಿಕೆ ಮತ್ತು ಕೆಮ್ಮು ಹೊಸ ರೂಪಾಂತರಿಯ ಮುಖ್ಯ ಲಕ್ಷಣವಾಗಿದ್ದು, ಈ ಸೋಂಕು ವ್ಯಾಕ್ಸಿನ್ ಗೂ ಬಗ್ಗಲ್ವಂತೆ.
9 ತಿಂಗಳ ಹಿಂದೆ ಯುವಕನ ಕೊಲೆ, ಚಾರ್ಮುಡಿ ಘಾಟ್ನಲ್ಲಿ ಶವಕ್ಕಾಗಿ ಹುಡುಕಾಟ
ಕೊರೊನಾಗಿಂತ 120 ಪ್ರತಿಶತ ಆಪಾಯಕಾರಿಯಾಗಿರುವ ಈ ವೈರಸ್ ಮನುಷ್ಯನ ಜೀವಕೋಶಗಳೊಂದಿಗೆ ಉತ್ತಮ ರೀತಿಯಲ್ಲಿ ಸಂಪರ್ಕ ಸಾಸುವ ಶಕ್ತಿ ಇರುವುದರಿಂದ ಈ ಸೋಂಕು ಅತಿವೇಗವಾಗಿ ಹರಡಬಲ್ಲ ಸಾಮಥ್ರ್ಯ ಹೊಂದಿವೆಯಂತೆ.
#Omicron, #SubVariant, #explained, #Karnataka, #XBB,