ಬೀಜಿಂಗ್, ಜ.24- ಕೊರೊನಾ ಸೋಂಕುಗಳು ಕಡಿಮೆಯಾಗುವುದರಿಂದ ಚೀನಾದ ಉತ್ತರ ಭಾಗದ ಕ್ಸಿಯಾನ್ ನಗರದ 13 ಮಿಲಿಯನ್ ನಿವಾಸಿಗಳ ಹೇರಲಾಗಿದ್ದ ಒಂದು ತಿಂಗಳ ಕಾಲದ ನಿರ್ಬಂಧಗಳನ್ನು ಚೀನಾ ಸರ್ಕಾರ ಸೋಮವಾರ ತೆಗೆದು ಹಾಕಿದೆ.
ರಾಜಧಾನಿಯಲ್ಲಿ ಸರಣಿ ಪ್ರಕರಣಗಳ ನಂತರ ಬೀಜಿಂಗ್ ಜಿಲ್ಲೆಯ 2 ಮಿಲಿಯನ್ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲು ಆದೇಶಿಸಲಾಗಿದೆ. ಫೆಂಗ್ಟಾಯ್ ಜಿಲ್ಲೆಯಲ್ಲಿ 25 ಮತ್ತು ಇತರೆಡೆ 14 ಪ್ರಕರಣಗಳು ಕಂಡು ಬಂದ ನಂತರ ಬೀಜಿಂಗ್‌ನಲ್ಲಿ ಸೋಂಕಿನ ಹೆಚ್ಚಿನ ಅಪಾಯವಿದೆ ಎಂದು ಪರಿಗಣಿಸಲಾದ ಪ್ರದೇಶಗಳ ಜನರು ನಗರವನ್ನು ತೊರೆಯದಂತೆ ಸರ್ಕಾರ ಸೂಚಿಸಿದೆ.
ಹಿಮದಿಂದ ಆವೃತ್ತವಾದ ದಾರಿಗಳ ನಡುವೆ ಪರೀಕ್ಷೆಗಾಗಿ ಫೆಂಗ್ಟಾಯ್ ನಿವಾಸಿಗಳು ಸಾಲುಗಟ್ಟಿ ನಿಂತಿದ್ದಾರೆ. ಫೆಬ್ರವರಿ 4 ರಿಂದ ಬೀಜಿಂಗ್‌ನಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್ ಎರಡು ವಾರ ಕಾಲಾವಧಿಯಿದೆ. ಕ್ರೀಡಾಪಟುಗಳು, ಸಿಬ್ಬಂದಿ, ವರದಿಗಾರರು ಮತ್ತು ಅಧಿಕಾರಿಗಳನ್ನು ನಿವಾಸಿಗಳಿಂದ ಪ್ರತ್ಯೇಕಿಸಲು ಉದ್ದೇಶಿಸಲಾಗಿದೆ. ಅಥ್ಲೀಟ್‌ಗಳು ಚೀನಾಕ್ಕೆ ಬಂದ ನಂತರ ಲಸಿಕೆ ಅಥವಾ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ಕ್ರೀಡಾಕೂಟ ಆಯೋಜಕರು ತಿಳಿಸಿದ್ದಾರೆ.
ಲಾಕ್ಡೌೇನ್ತೆಡರವಾದ ಬಳಿಕ ವಾಣಿಜ್ಯ ವಿಮಾನಗಳ ಸೇವೆ ಪುನರಾರಂಭವಾಗಿದೆ. ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆಗಳು ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿವೆ. ಆಡಳಿತಾರೂಢ ಕಮ್ಯುನಿಸ್ಟ್ ಸರ್ಕಾರ ಕೋವಿಡ್ಶೂಗನ್ಯತೆ ಸಾಧಿಸಲು ಕಾರ್ಯತಂತ್ರ ರೂಪಿಸಿದೆ.
ಕರೋನಾ ರೂಪಾಂತರ ಡೆಲ್ಟಾ ಸೋಂಕು ಹರಡಲಾರಂಭಿಸಿದ್ದರಿಂದ ಕ್ಸಿಯಾನ್ ನಗರ ಪ್ರವೇಶವನ್ನು ಡಿಸೆಂಬರ್ 22 ರಿಂದ ಸ್ಥಗಿತಗೊಳಿಸಲಾಯಿತು.
