ಒನ್ ಪ್ಲಸ್ 10ಆರ್ ಬಿಡುಗಡೆ

ಮೈಸೂರು, ಮೇ17- ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್ ಒನ್‍ಪ್ಲಸ್ ಭಾರತದಲ್ಲಿ ಇತ್ತೀಚಿಗೆ ಒನ್ ಪ್ಲಸ್ 10ಆರ್‍ನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಒನ್‍ಪ್ಲಸ್ 10ಆರ್ 150ಡಬ್ಲಯೂ ಎಂಡ್ಯೂರೆನ್ಸ್ ಆವೃತ್ತಿಯೊಂದಿಗೆ ತಯಾರಾಗಿದೆ. ಮೆಡಿಟ ಸ್ಮಾರ್ಟ್‍ಫೋನ್‍ನಲ್ಲಿ ಇದುವರೆಗೆ ಲಭ್ಯವಿರದಷ್ಟು ವೇಗವಾದ ವೈರ್ಡ್ ಚಾರ್ಜಿಂಗ್ ಮತ್ತು ಮೊಬೈಲ್ ಉದ್ಯಮದ ಹಿನ್ನೆಲೆಯಲ್ಲೇ ಅತ್ಯಂತ ವೇಗವಾದ ವೈರ್ಡ್ ಚಾರ್ಜಿಂಗ್ ಗಳಲ್ಲಿ ಒಂದಾಗಿದೆ.

ಈ ಮೊಬೈಲ್ ಕಸ್ಟಮೈಸ್ ಮಾಡಿದ ಮತ್ತು ವಿಶೇಷವಾದ ಡೈಮೆನ್ಸಿಟಿ 8100-ಮ್ಯಾಕ್ಸ್ ಚಿಪ್‍ಸೆಟ್‍ನಿಂದ ಚಾಲಿತವಾಗಿದೆ ಮತ್ತು 120 ಫ್ಲೂಯಿಡ್ ಒನ್‍ಪ್ಲಸ್ ಡಿಸ್‍ಪ್ಲೇಯನ್ನು ಹೊಂದಿದೆ, ಜೊತೆಗೆ ಇಲ್ಲಿಯವರೆಗಿನ ಯಾವುದೇ ಸಾಧನದಲ್ಲಿರದ ಅತಿದೊಡ್ಡ ಮತ್ತು ಅತ್ಯಾಧುನಿಕ ಕೂಲಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಒನ್‍ಪ್ಲಸ್ 10ಆರ್‍ಸರಣಿಯು ಟಾಪ್-ಆಫ್-ಲೈನ್ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್‍ನ ತಡೆರಹಿತ ಗೇಮಿಂಗ್ ಅನುಭವವನ್ನು ಇಷ್ಟಪಡುವ ಪ್ರೇಕ್ಷಕರಿಗೆ ನೆರವಾಗುವಂತೆ ತಯಾರಿಸಲಾಗಿದೆ. ಒನ್‍ಪ್ಲಸ್ 10ಆರ್ ಸ್ಪರ್ಧಾತ್ಮಕ ಬೆಲೆಯಲ್ಲಿ 150ಡಬ್ಲು ಎಂಡ್ಯೂರೆನ್ಸ್ ಆವೃತ್ತಿಯಂತಹ ಉದ್ಯಮ-ಪ್ರಮುಖ ತಂತ್ರಜ್ಞಾನ.