ಭೌತಿಕ ಶಾಲೆ ಆರಂಭವಾಗಿದ್ದರೂ ಕೆಲವೆಡೆ ಆನ್‍ಲೈನ್ ತರಗತಿ ಮುಂದುವರಿಕೆ

Spread the love

ಬೆಂಗಳೂರು, ಆ.23- ಒಂದೆಡೆ ಶಾಲೆಗಳು ಭೌತಿಕವಾಗಿ ಆರಂಭವಾಗಿದ್ದರೂ ಮತ್ತೊಂದೆಡೆ ಕೆಲವು ಖಾಸಗಿ ಶಾಲೆಗಳು ಆನ್‍ಲೈನ್‍ನಲ್ಲೇ ತರಗತಿಗಳನ್ನು ಮುಂದುವರಿಸಲು ನಿರ್ಧರಿಸಿದೆ. ಎಲ್ಲರಿಗೂ ಭೌತಿಕ ತರಗತಿ ನಡೆಸಲು ಅನುಮತಿ ಸಿಗುವವರೆಗೂ ಆನ್‍ಲೈನ್ ತರಗತಿಗಳನ್ನೇ ಮುಂದುವರಿಸಲು ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ತೀರ್ಮಾನಿಸಿವೆ.

ಸರ್ಕಾರ ಭೌತಿಕ ತರಗತಿಗಳನ್ನು ಕಡ್ಡಾಯ ಮಾಡಿಲ್ಲ. ಆನ್‍ಲೈನ್ ಮತ್ತು ಭೌತಿಕ ತರಗತಿಗಳನ್ನು ಏಕಕಾಲದಲ್ಲಿ ನಡೆಸುವುದು ಕಷ್ಟಸಾಧ್ಯವಾಗಿರುವುದರಿಂದ ಪೋಷಕರ ಆಶಯದಂತೆ ಆನ್‍ಲೈನ್ ಅಥವಾ ಭೌತಿಕ ತರಗತಿ ನಡೆಯಲಿವೆ ಎಂದು ಕೆಲವು ಖಾಸಗಿ ಆಡಳಿತ ಮಂಡಳಿ ಶಾಲೆಯವರು ತಿಳಿಸಿದ್ದಾರೆ.

ಸಿಬಿಎಸ್‍ಸಿ, ಐಸಿಎಸ್‍ಸಿ ಸಹಿತ ಬಹುತೇಕ ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿ ಗ್ರಾಮೀಣ ಭಾಗದ ಶಾಲೆಗಳು ಇಂದಿನಿಂದ ಆರಂಭವಾಗಿವೆ. ಆದರೆ, ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗೆ ಒಗ್ಗಿಕೊಂಡಿರುವುದರಿಂದ ಕೆಲಕಾಲ ಆನ್‍ಲೈನ್‍ನಲ್ಲೇ ಶಾಲೆಗಳು ಮುಂದುವರಿಯಲಿವೆ ಎಂದು ಹಲವು ಖಾಸಗಿ ಶಾಲೆಗಳವರು ತಿಳಿಸಿದ್ದಾರೆ.

ದೂರದರ್ಶನದ ಸಂವೇದನಾ ತರಗತಿ ಯಥಾಸ್ಥಿತಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿದ್ದರೂ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಂವೇದ ತರಗತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಡಿಎಸ್‍ಇಆರ್‍ಟಿ ಸ್ಪಷ್ಟಪಡಿಸಿದೆ.

Facebook Comments