ಆನ್‍ಲೈನ್ ಕ್ಲಾಸ್ ಎಫೆಕ್ಟ್, ಮೊಬೈಲ್ ದಾಸರಾದ ಮಕ್ಕಳು, ಪೋಷಕರು ಕಂಗಾಲು

Social Share

ಬೆಂಗಳೂರು,ನ.3- ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಾಧನವಾಗಿದ್ದ ಮೊಬೈಲ್ ಫೋನ್‍ಗಳು ಇದೀಗ ಮಕ್ಕಳಿಗೆ ಪೆಡಂಭೂತವಾಗಿ ಕಾಡುತ್ತಿದೆ.ಆನ್‍ಲೈನ್ ಕ್ಲಾಸ್ ಪರಿಣಾಮದಿಂದಾಗಿ ಇಂದಿಗೂ ಮಕ್ಕಳು ಮೊಬೈಲ್ ವ್ಯಾಮೋಹದಿಂದ ಹೊರಬರಲಾಗದಂತಹ ಪರಿಸ್ಥಿತಿಗೆ ಸಿಲುಕಿಕೊಂಡಿರುವುದರಿಂದ ಅವರ ವಿದ್ಯಾಭ್ಯಾಸ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ.

ಕೊರೊನಾ ನಿವಾರಣೆಯಾಗಿ ಶಾಲೆ ಶುರುವಾಗಿ ರೂಟೀನ್ ತರಗತಿಗಳು ಆರಂಭಗೊಂಡರೂ ಮಕ್ಕಳು ಮೊಬೈಲ್ ಮೋಡಿಯಿಂದ ಹೊರ ಬರಲಾಗುತ್ತಿಲ್ವಂತೆ. ಹೀಗಾಗಿ ಮಕ್ಕಳು ಓದು, ಆಟದಿಂದ ದೂರ ಉಳಿಯುತ್ತಿದ್ದಾರೆ.ಮೊಬೈಲ್ ಅಡಿಕ್ಷನ್ ಡ್ರಗ್ ಅಡಿಕ್ಷನ್‍ಗಿಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದು ಇತ್ತಿಚಿನ ಬೆಳವಣಿಗೆಗಳಿಂದ ಬಹಿರಂಗಗೊಂಡಿದೆ ಎನ್ನುತ್ತಾರೆ ವೈದ್ಯರು.

ಮಕ್ಕಳ ಮೊಬೈಲ್ ಅಡಿಕ್ಷನ್‍ನಿಂದ ಮಕ್ಕಳನ್ನು ಹೊರತರುವುದು ನಮಗೂ ಸವಾಲಾಗಿದೆ ಎಂದು ವೈದ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಮೊಬೈಲ್ ಬಳಕೆಯಿಂದ ಮಕ್ಕಳು ಖಿನ್ನತೆಗೆ ಜಾರುತ್ತಿದ್ದು, ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ಪ್ರತಿನಿತ್ಯ 6 ರಿಂದ 8 ಮಕ್ಕಳು ಚಿಕಿತ್ಸಗೆ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಆಸ್ಪತ್ರೆಗೆ ದಾಖಲಾಗುತ್ತಿರುವುದು 12 ರಿಂದ 18 ವರ್ಷದ ಮಕ್ಕಳೇ ಹೆಚ್ಚಾಗಿರುವುದು ಗಮನಾರ್ಹ. ಹೀಗಾಗಿ ನಿಮಾನ್ಸï ನಲ್ಲಿ ಮಕ್ಕಳ ಮೊಬೈಲ್ ಡಿ ಅಡಿಕ್ಷನ್ ಕ್ಯಾಂಪ್ ಕೂಡ ಆರಂಭಿಸಲಾಗಿದೆ.

ನಟ ಶಶಿಕುಮಾರ್, ಮುದ್ದಹನುಮೇಗೌಡ ಸೇರಿ ಕಮಲ ಮುಡಿದ ಹಲವು ನಾಯಕರು

ಮಕ್ಕಳ ಮೊಬೈಲ್ ವ್ಯಾಮೋಹದಿಂದ ದೂರಗೊಳಿಸಬೇಕಾದರೆ ವಾರಕ್ಕೊಂದು ದಿನ ಮಕ್ಕಳನ್ನು ಮೊಬೈಲ್ ಮುಕ್ತಗೊಳಿಸುವಂತೆ ನೋಡಿಕೊಳ್ಳಿ ಎಂದು ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.ಮಕ್ಕಳು ಓದುವುದನ್ನು ಮರೆತು ಸದಾ ಕಾಲ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುವುದರ ಜೊತೆಗೆ ಅನ್‍ಲೈನ್ ಗೇಮ್‍ನಲ್ಲೇ ತಲ್ಲೀನರಾಗಿರುವುದು ಹೆಚ್ಚಾಗುತ್ತಿದೆ.

ಮೊಬೈಲ್ ಮೋಡಿಗೆ ಒಳಗಾಗಿರುವ ಮಕ್ಕಳ ಕೈಯಲ್ಲಿರುವ ಫೋನ್‍ಗಳನ್ನು ಪೋಷಕರು ಕಿತ್ತುಕೊಳ್ಳಲು ಹೋದರೆ ಮಕ್ಕಳು ಆತ್ಮಹತ್ಯೆಗೆ ಯತ್ನಿಸಿರುವ ಹಲವಾರು ಘಟನೆಗಳು ಪ್ರಯತ್ನಿಸಿರುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.

ಮಕ್ಕಳ ಮೊಬೈಲ್ ಅಡಿಕ್ಷನ್ ಅನ್ನು ಪೊಷಕರು ಆರಂಭದಲ್ಲೇ ಬಿಡಿಸಬೇಕು ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಗಿರೀಶ್ ಎಚ್ಚರಿಸಿದ್ದಾರೆ.
ಪ್ರತಿನಿತ್ಯ ನಮ್ಮ ಆಸ್ಪತ್ರೆಗೆ ಈ ರೀತಿಯ 6 ರಿಂದ 8 ಪ್ರಕರಣಗಳು ದಾಖಲಾಗುತ್ತಿವೆ.

ಕೆಂಪುಕೋಟೆ ಮೇಲೆ ದಾಳಿ ಪ್ರಕರಣ : ಎಲ್‍ಇಟಿ ಉಗ್ರನ ಮರಣದಂಡನೆ ಎತ್ತಿಹಿಡಿದ ಸುಪ್ರೀಂ

ಕಳೆದ 7 ತಿಂಗಳಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಕೌನ್ಸಿಲಿಂಗ್ ನಡೆಸಲಾಗಿದೆ. ಅದರಲ್ಲೂ 12 ರಿಂದ 18 ವರ್ಷದವರೇ ಹೆಚ್ಚಾಗಿದ್ದಾರೆ. ಕಳೆದ ಆಗಷ್ಟ್‍ನಲ್ಲಿ ಎರಡು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದರೂ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊಬೈಲ್‍ಗಳು ಮಕ್ಕಳನ್ನು ವಾಸ್ತವ ಬದುಕಿನಿಂದ ಭ್ರಮ ಲೋಕಕ್ಕೆ ಕರೆದೊಯ್ಯುವುದರಿಂದ ಅವರು ಮೊಬೈಲ್ ಗೀಳು ಹಚ್ಚಿಸಿಕೊಳ್ಳಲಿದ್ದಾರೆ. ಈ ರೀತಿ ಮೊಬೈಲ್ ಚಟಕ್ಕೆ ದಾಸರಾಗುವ ಮಕ್ಕಳಿಗೆ ನಾವು ಸೈಕೊ ಥೆರಫಿ, ಡಿಜಿಟಲ್ ಡಿಟಾಕ್ಸಿಫಿಕೇಷನ್ ಹಾಗೂ ಫಾರ್ಮೊಕಲಾಜಿಕಲ್ ಟ್ರೀಟ್ಮೆಂಟ್ ನೀಡಿ ಗುಣಪಡಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.


Articles You Might Like

Share This Article