ಕೋವಿಡ್-19 ಹಿನ್ನೆಲೆಯಲ್ಲಿ ಏ.15ರಿಂದ ಆನ್ಲೈನ್ ಕ್ಲಾಸ್ ಆರಂಭ
ಬೆಂಗಳೂರು : ಕೋಟಾದ ಅಗ್ರಗಣ್ಯ ವೈದ್ಯಕೀಯ ಹಾಗೂ ಐಐಟಿ ಪ್ರವೇಶ ಪರೀಕ್ಷಾ ಕೋಚಿಂಗ್ ಕೇಂದ್ರವಾದ ಕೆರಿಯರ್ ಪಾಯಿಂಟ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಆಕಾಂಕ್ಷಿಗಳಿಗಾಗಿ ಏಪ್ರಿಲ್ 15ರಿಂದ ಆನ್ಲೈನ್ ತರಗತಿಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.
ಕೆರಿಯರ್ ಪಾಯಿಂಟ್ ಲೈವ್ ತರಗತಿಗಳು ಜೆಇಇ ಮತ್ತು ನೀಟ್ ಆಕಾಂಕ್ಷಿಗಳಿಗೆ, ದೇಶದ ಯಾವುದೇ ಮೂಲೆಯಲ್ಲಿ ಮನೆಯಲ್ಲೇ ಕುಳಿತು ಕೋಟಾದ ಅತ್ಯುತ್ತಮ ಬೋಧನಾ ವ್ಯವಸ್ಥೆಯಲ್ಲಿ ಕಲಿಯಲು ಅವಕಾಶ ಮಾಡಿಕೊಡಲಿದೆ. ಇದಕ್ಕಾಗಿ ಸಂವಾದಾತ್ಮಕ ಲೈವ್ ಚಾಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಪ್ರಾಧ್ಯಾಪಕರ ಜತೆ ಚರ್ಚಿಸಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.
ಸಾವಿರಾರು ವಿಡಿಯೊ ಉಪನ್ಯಾಸ, ಅಣಕು ಪರೀಕ್ಷೆ ಮತ್ತು ಫಲಿತಾಂಶ ವಿಶ್ಲೇಷಣೆಗಳನ್ನು ಏಕೈಕ ಪ್ಯಾಕೇಜ್ನಲ್ಲಿ ನೀಡಲಾಗುತ್ತದೆ. ಲಾಕ್ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿಷಯದಲ್ಲಿ ತಮ್ಮ ವೇಗ ಕಾಯ್ದುಕೊಳ್ಳಲು ನೆರವಾಗುವ ವಿಶಿಷ್ಟ ವಿಧಾನ ಇದಾಗಿದೆ.
ಲಾಕ್ಡೌನ್ ಮುಗಿಯುವವರೆಗೆ ಆನ್ಲೈನ್ ತರಗತಿಗಳು ನಡೆಯಲಿದ್ದು, ಬಳಿಕ ತರಗತಿಗಳು ಕೋಟಾ ಹಾಗೂ ದೇಶದ ವಿವಿಧೆಡೆಗಳಲ್ಲಿ ಸ್ಥಾಪಿಸಲಾದ ಅಧ್ಯಯನ ಕೇಂದ್ರಗಳಲ್ಲಿ ನಡೆಯಲಿವೆ. ಲಾಕ್ಡೌನ್ ಮುಗಿದ ಬಳಿಕ ಭೌತಿಕವಾಗಿ ಸೇರಿಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳು ಆನ್ಲೈನ್ ತರಗತಿ ಮುಂದುವರಿಸಬಹುದಾಗಿದೆ ಎಂದು ಕೆರಿಯರ್ ಪಾಯಿಂಟ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಪ್ರಮೋದ್ ಮಹೇಶ್ವರಿ ಹೇಳಿದ್ದಾರೆ.