ಆನ್‍ಲೈನ್ ಡೆಲಿವರಿ ರೀತಿ ಗಾಂಜಾ ಮಾರಾಟ: ಪೆಡ್ಲರ್ ಬಂಧನ

Social Share

ಬೆಂಗಳೂರು,ನ.8-ಆನ್‍ಲೈನ್ ಡೆಲಿವರಿ ರೀತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಪೆಡ್ಲರ್‍ನನ್ನು ಡಿಜೆಹಳ್ಳಿ ಠಾಣೆ ಪೊಲೀಸರು ಬಂಧಿಸಿ 5.50 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೇರಳದ ಕೋಚಿಕೊಡ್ ಮೂಲದ ಆಸೀಫ್ ಬಂಧಿತ ಡ್ರಗ್ ಪೆಡ್ಲರ್.

ಟ್ಯಾನರಿ ಮುಖ್ಯರಸ್ತೆಯ ಪಾಟರಿ ಸರ್ಕಲ್ ಬಳಿ ಡಿಜೆಹಳ್ಳಿ ಠಾಣೆ ಪಿಎಸ್‍ಐ ನಾಗದೇವ ಬಿ.ತೊರ್ಕೆ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಸಿದ್ದಾರೆ. ಆಂಧ್ರಪ್ರದೇಶದ ವೈಜಾಕ್‍ನಿಂದ ಗಾಂಜಾ ಖರೀದಿಸಿ ಬೆಂಗಳೂರಿನ ಎಜಾಜ್ ಪಾಷ, ಶರವಣ್ ಮತ್ತು ಮೊಹಮ್ಮದ್ ಸಾಲಿ ಎಂಬುವರಿಗೆ ಹೆಚ್ಚಿನ ಬೆಲೆಗೆ ಗಾಂಜಾ ಮಾರಾಟ ಮಾಡಿ ಸುಲಭವಾಗಿ ಹಣ ಗಳಿಸುತ್ತಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಮುರುಘಾ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು: ಯಡಿಯೂರಪ್ಪ

ಆರೋಪಿಯಿಂದ 5.5 ಲಕ್ಷ ರೂ. ಮೌಲ್ಯದ 9 ಕೆಜಿ 400 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಎಜಾಜ್ ಪಾಷ ತಿಳಿಸಿದಂತೆ ಗಾಂಜಾವನ್ನು ಒಂದು ಸ್ಥಳದಲ್ಲಿ ಸಂಗ್ರಹಿಸಿಟ್ಟು ಅಲ್ಲಿನ ಲೊಕೇಶನ್ ಕಳುಹಿಸಿ ಹಣವನ್ನು ಅಕೌಂಟ್‍ಗೆ ಪಡೆದು ಸುಲಭವಾಗಿ ಮಾದಕವಸ್ತುವನ್ನು ಮಾರಾಟ ಮಾಡುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

ಭಾರತದ 6 ನಗರಗಳಲ್ಲಿ ವಿಧ್ವಂಸಕ ಕೃತ್ಯ ದಾವೋದ್ ಸಂಚು

ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತ ಡಾ.ಭೀಮಾ ಶಂಕರ್ ಎಸ್.ಗುಳೇದ್ ಮತ್ತು ಕೆಜಿಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಗದೀಶ್ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಪ್ರಕಾಶ್ ಅವರ ನೇತೃತ್ವದ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿತ್ತು.

Articles You Might Like

Share This Article