ನವದೆಹಲಿ,ಮಾ.2- ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಮಾನವೀಯ ನೆರವು ಹೊತ್ತು ಮುರು ವಾಯುಪಡೆಯ ವಿಮಾನಗಳು ಯುದ್ಧಪೀಡಿತ ನೆರೆ-ಹೊರೆ ರಾಷ್ಟ್ರಗಳಿಗೆ ತೆರಳಿದ್ದು, ಅಲ್ಲಿಂದ ಸುರಕ್ಷಿತವಾಗಿ ಪ್ರಜೆಗಳನ್ನು ಕರೆತರಲಿವೆ.
ರಷ್ಯಾ ಆಕ್ರಮಣದ ಬಳಿಕ ಉಕ್ರೇನ್‍ನಲ್ಲಿ ಸಂಘರ್ಷಮಯ ವಾತಾವರಣ ಉಂಟಾಗಿದ್ದು, ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಊಟ, ತಿಂಡಿ, ನೀರು, ಹೊದಿಕೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಹೊರ ಬಂದರೆ ಬಾಂಬ್ ದಾಳಿ, ಒಳಗಿದ್ದರೆ ಹಸಿವಿನ ಸಂಕಟ ಎಂಬ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲಿನ ವಿದ್ಯಾರ್ಥಿಗಳು ವಿಡಿಯೋ ಮಾಡಿ ತಮ್ಮ ಸಂಕಟ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ತುರ್ತು ಸಭೆ ನಡೆಸಿ ಉಕ್ರೇನನಲ್ಲಿರುವ ಭಾರತಿಯರನ್ನು ರಕ್ಷಣೆ ಮಾಡಲು ಚಾಲ್ತಿಯಲ್ಲಿರುವ ಆಪರೇಷನ್ ಗಂಗಾಕ್ಕೆ ಜತೆಗೂಡುವ ವಾಯು ಸೇನೆಗೆ ಸೂಚನೆ ನೀಡಿದರು.
ಅದರ ಪ್ರಕಾರ ಇಂದು ಸಿ-17 ಮೂರು ವಿಮಾನಗಳು ಪೋಲೆಂಡ್, ಹಂಗ್ರೈ ಮತ್ತು ರೊಮಾನಿಯಾಗೆ ತೆರಳಿವೆ. ಜತೆಯಲ್ಲಿ ಟೆಂಟ್, ಬ್ಲಾಂಕ್‍ಟ್‍ಗಳು ಹಾಗೂ ಇತರ ಮಾನವೀಯ ನೆರವಿನ ಸಲಕರಣೆಗಳನ್ನು ತೆಗೆದುಕೊಂಡು ಹೋಗಿವೆ. ಇಂದು ಸಂಜೆ 4 ಗಂಟೆಗೆ ಒಂದು ಬ್ಲೋಬ್‍ಮಾಸ್ಟರ್ ವಿಮಾನ ಟೇಕಾಫ್ ಆಗಿದ್ದು, ರೊಮಾನಿಯಾ ತಲುಪಲಿದೆ.
ನಿನ್ನೆ ರಷ್ಯಾದ ಸೆಲ್ ದಾಳಿಯಿಂದ ಒಬ್ಬ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದು, ಆತಂಕ ಹೆಚ್ಚಾಗಿದೆ. ಇದರಿಂದಾಗಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಯುದ್ಧಪೀಡಿತ ಪ್ರದೇಶಗಳಿಂದ ನಾಗರಿಕರು ಮತ್ತು ವಿದ್ಯಾರ್ಥಿಗಳು ಉಕ್ರೇನ್‍ನ ಗಡಿ ಭಾಗ ಪೋಲೆಂಡ್, ಹಂಗ್ರೈ, ರೊಮಾನಿಯಾ, ಸ್ಲೊವಾಕಿಯಾ ಮತ್ತು ಮೊಲ್ಡಾವಕ್ಕೆ ಆಗಮಿಸಿದರೆ, ಅಲ್ಲಿಂದ ಸುರಕ್ಷಿತವಾಗಿ ಭಾರತಕ್ಕೆ ಕರತರಲಾಗುತ್ತದೆ ಎಂದು ಭಾರತದ ರಾಯಭಾರ ಕಚೇರಿ ತಿಳಿಸಿದೆ.
ಕೇಂದ್ರ ಸರ್ಕಾರದ ಸಚಿವರಾದ ಹರ್ದಿಪ್‍ಸಿಂಗ್ ಪೂರಿ ಹಂಗ್ರೈಗೆ, ಕಿರಣ್ ರಿಜೀಜು ಸ್ಲೊವಾಕಿಯಾಗೆ, ನಿವೃತ್ತ ಸೇನಾಕಾರಿ ವಿ.ಕೆ.ಸಿಂಗ್ ಪೋಲೆಂಡ್‍ಗೆ, ಜ್ಯೋತಿ ರಾದಿತ್ಯ ಸಿಂಧ್ಯ ರೊಮಾನಿಯಾ ಮತ್ತು ಮೊಲ್ಡಾವಾಗೆ ತೆರಳಿದ್ದಾರೆ.
ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ ಶೇ.60ರಷ್ಟು ಭಾರತೀಯರು ಉಕ್ರೇನ್ ರಾಜಧಾನಿ ಕ್ಯಿವ್‍ನಿಂದ ಹೊರಬಂದಿದ್ದಾರೆ. ಸುಮಾರು 20 ಸಾವಿರ ಮಂದಿ ಉಕ್ರೇನ್‍ನಲ್ಲಿ ವ್ಯಾಸಂಗ ಹಾಗೂ ಇತರೆ ಕಾರಣಗಳಿಂದಾಗಿ ನೆಲೆಸಿದ್ದರು. ಬಾಕಿ ಉಳಿದ 40 ಮಂದಿಯಲ್ಲಿ ಕೆಲವರು ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದಾರೆ.
ಮುಂದಿನ ಮೂರು ದಿನಗಳಲ್ಲಿ 26 ವಿಮಾನಗಳು ಕಾರ್ಯಾಚರಣೆ ನಡೆಸಲಿದ್ದು, ಪೋಲೆಂಡ್‍ನ ಬೂಚರೆಸ್ಟ್, ಬುದಪೆಸ್ಟ್ ವಿಮಾನ ನಿಲ್ದಾಣಗಳಿಂದ ಹಾಗೂ ಇತರ ದೇಶಗಳ ವಿಮಾನ ನಿಲ್ದಾಣಗಳಿಂದ ಭಾರತಕ್ಕೆ ಆಗಮಿಸಲಿದ್ದಾರೆ.
