ಬೆಂಗಳೂರು, ಸೆ.19- ಆಪರೇಷನ ಹಸ್ತ ಮುಂದುವರೆದಿದೆ. ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಯಿಂದಲೂ ವಿವಿಧ ಪಕ್ಷಗಳ ನಾಯಕರನ್ನು ಕಾಂಗ್ರೆಸ್‍ಗೆ ಸೆಳೆಯುವ ಕಾರ್ಯಾಚರಣೆಗಳು ತೀವ್ರಗೊಂಡಿವೆ. ಮಧ್ಯ ಕರ್ನಾಟಕ ಭಾಗದ ಮೂವರ ಮಾಜಿ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ಮಾತುಕತೆಗಳು ಮುಂದುವರೆದಿವೆ.
ಮಧ್ಯ ಕರ್ನಾಟಕ ಭಾಗದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಹಠಕ್ಕೆ ಬಿದ್ದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ, ಚೆನ್ನಗಿರಿ ಮಾಡಾಳ್ ವಿರುಪಾಕ್ಷಪ್ಪ, ಜಗಳೂರು ಕ್ಷೇತ್ರದ ಗುರುಸಿದ್ದನಗೌಡರೊಂದಿಗೆ ಮಾತುಕತೆ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪ್ರಬಲ್ಯವಿದ್ದರೂ ಹಲವಾರು ಬಾರಿ ಬಿಜೆಪಿಗೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಫಲಿತಾಂಶ ಬದಲಾವಣೆ ಮಾಡಲೇಬೇಕು ಎಂದು ಕಾಂಗ್ರೆಸಿಗರು ನಿರ್ಧರಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯಿತ ಸಮುದಾಯ ಕಾಂಗ್ರೆಸ್ ಕೈ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯಿತ ಸಮುದಾಯದ ಪ್ರಮುಖ ನಾಯಕರನ್ನು ಸೆಳೆಯುವ ಮೂಲಕ ಲೋಕಸಭೆ ಚುನಾವಣೆಯಲ್ಲೂ ಗೆಲುವಿನ ಯಾತ್ರೆ ಮುಂದುವರೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಮಹಿಳಾ ಮೀಸಲಾತಿ ಮಸೂದೆ ಮಂಡನೆ : ವಿಧಾನಸೌದದಲ್ಲೂ ನಾರಿ ಶಕ್ತಿ ಹೆಚ್ಚಳ
ಅದಕ್ಕೆ ಪೂರಕವಾಗಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಈಗಾಗಲೇ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಚೆನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ, ರೇಣುಕಾಚಾರ್ಯ ಸಾಮಾಜಿಕ ಜಾಲತಾಣದ ಸ್ಟಾರ್. ಅವರಿಗೆ ಕಾಂಗ್ರೆಸ್ ಸೇರುವ ಬಯಕೆ ಇದ್ದರೆ ಸೇರಿಕೊಂಡು ಬಿಡಲಿ. ದಿನಕ್ಕೊಬ್ಬ ನಾಯಕರನ್ನು ಭೇಟಿ ಮಾಡಿ ನಮ್ಮ ಪಕ್ಷದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುವುದು ಬೇಡ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್‍ಗೆ ರೇಣುಕಾಚಾರ್ಯಯ ಅಗತ್ಯ ಇಲ್ಲ. ಈಗಾಗಲೇ ಆ ಕ್ಷೇತ್ರದಲ್ಲಿ ನಮ್ಮಲ್ಲಿ ಇಬ್ಬರು ಪ್ರಬಲ ನಾಯಕರಿದ್ದಾರೆ. ಡಿ.ಜಿ.ಶಾಂತನಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆಗೂ ಕಳೆದ ಬಾರಿಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಚ್.ಪಿ.ಮಂಜುಪ್ಪ ಇದ್ದಾರೆ. ಇವರ ನಡುವೆ ರೇಣುಕಾಚಾರ್ಯ ಅವರ ಅವಶ್ಯಕತೆ ಕಾಂಗ್ರೆಸ್‍ಗೆ ಬರುವುದಿಲ್ಲ. ಆದರೂ ಅವರು ಸೇರಬೇಕಾದರೆ ಅಧಿಕೃತವಾಗಿ ಸೇರಿಕೊಂಡು ಬಿಡಲಿ ಎಂದು ಸಲಹೆ ನೀಡಿದರು.
ಇನ್ನೂ ಬಿಜೆಪಿಯಲ್ಲಿ ಗುರುಸಿದ್ದನಗೌಡರನ್ನು ಪಕ್ಷದ ಚಟುವಟಿಕೆಗಳಿಂದ ದೂರ ಇರಿಸಲಾಗಿದೆ. ಮಾಡಾಳ್ ವಿರುಪಾಕ್ಷಪ್ಪ ಲೋಕಾಯುಕ್ತ ದಾಳಿಯ ಬಳಿಕ ಕಳೆಗುಂದಿದ್ದಾರೆ. ಆದರೂ ಅವರಿಗೆ ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಇರುವುದು ಕಂಡು ಬಂದಿದೆ.
ಖಾವಿ ಕಳಚಿ ಟೀ-ಶರ್ಟ್ ಧರಿಸಿದ್ದ ಹಾಲಶ್ರೀ ಸ್ವಾಮೀಜಿ
ಈ ಹಿನ್ನೆಲೆಯಲ್ಲಿ ಮೂವರು ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಾಡಾಳ್ ವಿರುಕ್ಷಾಪ್ಪ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿದಾಗ ಕಾಂಗ್ರೆಸ್ ವ್ಯಾಪಕ ಟೀಕೆ ಮತ್ತು ಹೋರಾಟ ನಡೆಸಿತ್ತು. ಈಗ ಅವರನ್ನು ಪಕ್ಷಕೆ ಸೇರಿಸಿಕೊಂಡರೆ ನೈತಿಕತೆಯ ಪ್ರಶ್ನೆ ಕಾಡುತ್ತದೆ ಎಂಬ ಚರ್ಚೆಗಳಿವೆ. ಅದನ್ನೆಲ್ಲಾ ಬದಿಗಿರಿಸಿ ಆಪರೆಷನ್ ಹಸ್ತಕ್ಕೆ ಕಾಂಗ್ರೆಸ್ ನಾಯಕರು ಚಾಲನೆ ನೀಡಿದ್ದಾರೆ ಎಂದು ಹೇಳಲಾಗಿದೆ.
OperationHasta, #Continued, #formerMLAs, #join, #Congress,