ಬೆಂಗಳೂರು, ನ.29- ರಾಜಸ್ಥಾನದಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಂಪಂಗಿ ರಾಮನಗರ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಬಾಳುವ ಅಫೀಮು, ದ್ವಿಚಕ್ರ ವಾಹನ, ಹಣ ಹಾಗೂ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನ ಮೂಲದ ಕಿಶನ್ ದಾಸ್(45) ಮತ್ತು ಜಗದೀಶ್ ಸಿಂಗ್(52) ಬಂಧಿತ ಆರೋಪಿಗಳು. ಇವರಿಂದ 3 ಲಕ್ಷ ರೂ. ಬೆಲೆ ಬಾಳುವ 2025 ಗ್ರಾಂ ಅಫೀಮ್, 5000 ಹಣ, ಮೊಬೈಲ್ ಹಾಗೂ ಟಿವಿಎಸ್ ಹೊಸ ಪಡಿಸಿ ಕೊಳ್ಳಲಾಗಿದೆ.
BIG NEWS: ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ
ಆರ್‍ಆರ್‍ಎಂಆರ್ ರಸ್ತೆಯಲ್ಲಿನ ವುಡ್‍ಲ್ಯಾಂಡ್ ಹೊಟೇಲ್ ಬಳಿ ಐಡಿಸಿ ಹೊಟೇಲ್‍ಗೆ ಹೋಗುವ ಅಡ್ಡರಸ್ತೆಯಲ್ಲಿ ಅಫೀಮ್ ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬ ಬಂದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಕಿಶನ್‍ದಾಸ್‍ನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಸಹಚರ ಜಗದೀಶ್ ಸಿಂಗ್ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಈತನ ಮಾಹಿತಿ ಮೇರೆಗೆ ತನಿಖೆ ಕೈಗೊಂಡು ಆರೋಪಿ ಜಗದೀಶ್ ಸಿಂಗ್‍ನನ್ನು ಬಂಧಿಸಿ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಎಟಿಎಂ ದೋಚಿದ್ದ ಸೆಕ್ಯುರಿಟಿ ಗಾರ್ಡ್
ಈ ಇಬ್ಬರು ಮೂಲತಃ ರಾಜಸ್ಥಾನದವರಾಗಿದ್ದು, ಬೆಂಗಳೂರಿನ ವಿಜಯನಗರದ ಪಂಚಶೀಲ ನಗರದಲ್ಲಿ ಕಿಶನ್ ದಾಸ್ ವಾಸವಾಗಿದ್ದನು.
ಹಲಸೂರು ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಾರಾಯಣ ಸ್ವಾಮಿ, ಇನ್ಸ್‍ಪೆಕ್ಟರ್ ರಾಜೇಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿ, ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ.
Opium, selling, Bengaluru, Two, arrested,