ಸಂಸತ್ ಉಭಯ ಸದನಗಳಲ್ಲಿ ತಾರಕಕ್ಕೇರಿದ ಗಡಿ ಸಂಘರ್ಷ

Social Share

ನವದೆಹಲಿ,ಡಿ.22- ಭಾರತದ ಗಡಿಯಲ್ಲಿ ಚೀನಾ ಸೈನಿಕರ ಆಕ್ರಮಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಸಂಸತ್‍ನ ಉಭಯ ಸದನಗಳಲ್ಲೂ ಭಾರೀ ಪ್ರತಿಭಟನೆಗಳು ವ್ಯಕ್ತವಾದವು. ಲೋಕಸಭೆಯಲ್ಲಿ ಪದೇ ಪದೇ ಕಲಾಪ ಮುಂದೂಡಿಕೆಯಾದರೆ, ರಾಜ್ಯಸಭೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಿದ್ದನ್ನು ವಿರೋಧಿಸಿ ವಿಪಕ್ಷಗಳು ದಿನದ ಮಟ್ಟಿಗೆ ಕಲಾಪವನ್ನು ಬಹಿಷ್ಕರಿಸಿವೆ.

ಲೋಕಸಭೆ ಇಂದು ಬೆಳಗ್ಗೆ ಕಲಾಪ ಸೇರುತ್ತಿದ್ದಂತೆ ಪ್ರತಿಪಕ್ಷಗಳು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿವೆ. ಧರಣಿ ಗದ್ದಲದಿಂದಾಗಿ ಕಲಾಪ 12 ಗಂಟೆವರೆಗೂ ಮುಂದೂಡಿಕೆಯಾಯಿತು. ಗಲಾಟೆಯ ನಡುವೆ ಕಾಗದ ಪತ್ರಗಳ ಮಂಡನೆ ಹಾಗೂ ಇತರ ಕಲಾಪಗಳು ನಡೆದವು.

ಕೆಲ ಕಾಲ ವಿರಾಮದ ಬಳಿಕ ಮತ್ತೆ ಕಲಾಪ ಸಮಾವೇಶಗೊಂಡಾಗಲೂ ಗಲಾಟೆ ಮುಂದುವರೆಯಿತು.
ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದವು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಬಹುಮುಖ್ಯ ಶಾಸನ ರಚನಾ ಕಲಾಪ ನಡೆದಿಲ್ಲ. ಸದಸ್ಯರು ಸುಗಮ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಯುಪಿಎ ಆಡಳಿತ ಅವಧಿಯಲ್ಲೂ ಗಡಿಯಂತಹ ಸೂಕ್ಷ್ಮ ವಿಚಾಗಳ ಚರ್ಚೆಗೆ ಅವಕಾಶ ನೀಡಿಲ್ಲ ಎಂಬುದನ್ನು ವಿರೋಧ ಪಕ್ಷಗಳು ಒಪ್ಪಿಕೊಳ್ಳುತ್ತವೆ ಎಂದರು. ಆದರೂ ಪ್ರತಿಪಕ್ಷಗಳು ಗದ್ದಲ ಮುಂದುವರೆಸಿದವು.
ಸಭಾಧ್ಯಕ್ಷ ಪೀಠದಲ್ಲಿದ್ದ ರಾಜೇಂದ್ರ ಅಗರ್‍ವಾಲ್, ಶಾಸನ ರಚನಾ ಕಲಾಪ ನಿನ್ನೆಯಿಂದ ಆರಂಭವಾಗಿದೆ. ಅರು ಮುಂದುವರೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಆದರೆ ಅದಕ್ಕೆ ವಿರೋಧ ಪಕ್ಷಗಳು ಸಹಕರಿಸದ ಹಿನ್ನೆಲೆಯಲ್ಲಿ ಕಲಾಪವನ್ನು ಬೋಜನ ವಿರಾಮದವರೆಗೂ ಮುಂದೂಡಿಕೆ ಮಾಡಲಾಯಿತು.

ಕೋವಿಡ್ ನೆಪದಲ್ಲಿ ಚುನಾವಣೆ ಮುಂದೂಡುವ ಯತ್ನ ನಡೀತಿದೆ : ಡಿಕೆಶಿ

ಅತ್ತ ರಾಜ್ಯಸಭೆಯಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಯಿತು. ಕಲಾಪದ ಶೂನ್ಯವೇಳೆ ಶುರುವಾಗುತ್ತಿದ್ದಂತೆ ಪ್ರತಿಪಕ್ಷಗಳ ಸದಸ್ಯರು ಚೀನಾ ಸೇನೆಯ ಆಕ್ರಮಣ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಆದರೆ ಪ್ರತಿಪಕ್ಷಗಳು ನೀಡಿರುವ ನೋಟಿಸ್ ನಿಯಮ ಬದ್ಧವಾಗಿಲ್ಲ ಎಂದು ಸ್ಪಷ್ಟ ಪಡಿಸಿದ ಸಭಾಪತಿ ಜಗದೀಪ್ ದನ್ಕರ್, ಬೇಡಿಕೆಯನ್ನು ತಳ್ಳಿ ಹಾಕಿದರು. ನಾನು ಈಗಾಗಲೇ ರೂಲಿಂಗ್ ನೀಡಿದ್ದೇನೆ. ಎಲ್ಲರ ನೋಟಿಸ್‍ಗಳನ್ನು ಎಚ್ಚರಿಕೆಯಿಂದ ನೋಡಿದ್ದೇನೆ. ಈ ಕುರಿತು ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕರಿಗೆ ವಿವರವಾದ ಸಮಯ ನೀಡಿದ್ದೇನೆ. ನೋಟಿಸ್‍ಗಳು ಕ್ರಮಬದ್ಧವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು ಹೇಳಿದರು.

ಆದರೂ ವಿಷಯ ಕುರಿತು ಚರ್ಚೆಗೆ ಬೋಜನ ವಿರಾಮದಲ್ಲಿ ತಮ್ಮ ಕಚೇರಿಯಲ್ಲಿ ಸಭಾನಾಯಕರು ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸುವುದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ ನಿಮ್ಮ ರೂಲಿಂಗ್‍ಗೆ ಧನ್ಯವಾದ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಅವರು, ಧನ್ಯವಾದಕ್ಕೂ ಮೊದಲು ನಿಮ್ಮ ಸದಸ್ಯರಿಗೆ ಪೀಠಕ್ಕೆ ಗೌರವ ನೀಡಲು ಸೂಚಿಸಿ ಎಂದರು. ಅದಕ್ಕೆ ಉತ್ತರಿಸಿದ ಖರ್ಗೆ ಅವರು, ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತವೆ. ನಿಮಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ದೇಶದ ಭದ್ರತೆಯ ವಿಷಯ ಈ ಸದನದಲ್ಲಿ ಚರ್ಚೆ ನಡೆಯಬೇಕಿದೆ. ಒಂದೆಡೆ ನಿಯಮಗಳು ಇರುತ್ತವೇ, ಮತ್ತೊಂದೆಡೆ ಸಂಪ್ರದಾಯಗಳನ್ನು ಅನುಸರಿಸುತ್ತೇವೆ.

ಕೆಲವನ್ನು ನಿಯಮಗಳಲ್ಲಿ ಬರೆದಿಲ್ಲ. ಆದರೆ ದೇಶದ ಭದ್ರತೆ ವಿಷಯ ಬಂದಾಗ ನಾವು ನಿಯಮಗಳನ್ನು ಬದಿಗಿಟ್ಟು ನಾವು ಚರ್ಚೆ ನಡೆಸಬೇಕಿದೆ ಎಂದರು. ಈ ವಿಷಯ ನಾವು ಪ್ರಸ್ತಾಪಿಸುತ್ತಿದ್ದಂತೆ ಆಗ ನಿಮಗೆ ಸಿಟ್ಟು ಬರುತ್ತದೆ ಎಂದು ಖರ್ಗೆ ಹೇಳಿದಾಗ, ನನಗೆ ಸಿಟ್ಟು ಬರುವುದಿಲ್ಲ. ಆದರೆ ಹತಾಶನಾಗಿದ್ದೇನೆ. ಅಸಹಾಯಕನಾಗಿದ್ದೇನೆ. ಇಲ್ಲಿ ಉತ್ತಮ ಚರ್ಚೆ ನಡೆಯಬೇಕಿದೆ. ಅದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಸಭಾಪತಿ ಹೇಳಿದರು.

ಇದು ಕೊಠಡಿಯ ಒಳಗೆ ಚರ್ಚೆಯಾಗಬೇಕಿರುವ ವಿಷಯವಲ್ಲ. ಎಲ್ಲರಿಗೂ ತಿಳಿಯಬೇಕಿದೆ. ಈ ಸದನ ಮತ್ತು ದೇಶದ ಜನ ರಕ್ಷಣೆಯ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಹಾಗಾಗಿ ಇಲ್ಲಿಯೇ ಚರ್ಚೆಯಾಗಬೇಕು. ನಾವು ದೇಶದ ಗೌರವಕ್ಕಾಗಿ, ಸೈನಿಕರ ಭದ್ರತೆಗಾಗಿ ಹೋರಾಡಬೇಕಿದೆ ಎಂದರು.

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಗಾಗಿ ಅಶೋಕ್ ಆಗ್ರಹ

ಸಭಾನಾಯಕ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ನಮ್ಮ ಕಡೆಯಿಂದ ಎಲ್ಲ ಮಾಹಿತಿಯನ್ನು ಸದನದ ಮುಂದಿಟ್ಟಿದ್ದೇವೆ. ಈ ಹಿಂದೆ ಕಾಂಗ್ರೆಸ್‍ನ ಆಡಳಿತದಲ್ಲಿ ನಡೆದ ಬೆಳವಣಿಗೆಗಳೇನು ಎಂದು ಎಲ್ಲರಿಗೂ ಗೋತ್ತಿದೆ. ಆಗ ಸಾವಿರಾರು ಕಿಲೋ ಮೀಟರ್ ಭಾರತದ ಭೂಮಿಯನ್ನು ಚೀನಾ ಸ್ವಾದೀನಕ್ಕೆ ಪಡೆದುಕೊಂಡಿತ್ತು. ರಾಜೀವ್ ಗಾಂಧಿ ಪೌಂಡೇಷನ್‍ಗೆ ಹಣ ಪಡೆಯಲಾಗಿತ್ತು ಎಂದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ, ಚೀನಾ ಅಕ್ರಮಣ ಕುರಿತು ಕೊಠಡಿಯಲ್ಲಿ ಚರ್ಚೆ ಮಾಡಲು ಸಭಾಪತಿ ಆಹ್ವಾನಿಸಿದರೆ ಪ್ರತಿಪಕ್ಷದ ನಾಯಕರು ಇಲ್ಲೇ ಚರ್ಚೆಯಾಗಲಿ ಎನ್ನುತ್ತಾರೆ. ಈ ಹಿಂದೆ ಅರುಣಾಚಲ ಪ್ರದೇಶದಲ್ಲಿ ಚೀನಾ ಗಲಾಟೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ನಾಯಕರಾಗಿದ್ದ ಈಗಿನ ಕೇಂದ್ರ ಸಚಿವ ಕಿರಣ್ ರಿಜಿಜ್ಜು ನೋಟಿಸ್ ನೀಡಿದರು. ಆಗ ಪ್ರಣಬ್ ಮುಖರ್ಜಿ ರಕ್ಷಣಾ ಸಚಿವರಾಗಿದ್ದರು. ಆಗಿನ ಪ್ರಧಾನಿ ಅವರು ಕಿರಣ್ ರಿಜಿಜ್ಜು ಅವರನ್ನು ಕೊಠಡಿಗೆ ಕರೆದು ಮಾತುಕತೆ ನಡೆಸಿದರು ಎಂದು ಸ್ಮರಿಸಿಕೊಂಡರು.

ನಂತರ ಸಭಾಪತಿ ಬೇರೆ ಕಲಾಪಕ್ಕೆ ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಎಲ್ಲಾ ಸದಸ್ಯರು ಸಭಾತ್ಯಾಗ ಮಾಡಿದರು. ಚರ್ಚೆಗೆ ಅವಕಾಶ ನೀಡದ ಕಾರಣಕ್ಕೆ ದಿನದ ಕಲಾಪವನ್ನು ಬಹಿಷ್ಕರಿಸುತ್ತಿರುವುದಾಗಿ ಕಾಂಗ್ರೆಸ್ ಸದಸ್ಯ ಕೆ.ಸಿ.ವೇಣುಗೋಪಾಲ್ ತಿಳಿಸಿದರು.

ಈ ನಡುವೆ ಪಿಯೂಷ್ ಗೋಯಲ್ ಆಕ್ಷೇಪಾರ್ಹ ಹೇಳಿಕೆ ನೀಡಿ ಬಿಹಾರವನ್ನು ಅಪಮಾನಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದವು. ಯಾರನ್ನು ನೋಯಿಸುವ ಉದ್ದೇಶ ನನಗಿಲ್ಲ. ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದ ಪಿಯೂಷ್ ಗೋಯಲ್ ತಮ್ಮ ಹೇಳಿಕೆಯನ್ನು ಹಿಂಪಡೆದರು.

Opposition parties, raise, border, issue, China, Parliament,

Articles You Might Like

Share This Article