“ಅದಾನಿ ಹಗರಣ ಮರೆ ಮಾಚಲು ಆಡಳಿತ ಪಕ್ಷದಿಂದ ಸಂಸತ್‍ನಲ್ಲಿ ಗದ್ದಲ”

Social Share

ನವದೆಹಲಿ,ಮಾ.14- ಅದಾನಿ ಷೇರು ಬೆಲೆ ಏರಿಕೆಯಲ್ಲಿ ನಡೆದಿರುವ ಹಗರಣ ಹಾಗೂ ಸರ್ಕಾರದ ಪ್ರಮುಖರೊಂದಿಗೆ ಖಾಸಗಿ ಸಂಸ್ಥೆಯ ಆಪ್ತ ಸಂಬಂಧಗಳ ಕುರಿತು ಚರ್ಚೆಯಾಗಿ ಸಾರ್ವಜನಿಕರಿಗೆ ಮಾಹಿತಿ ತಿಳಿಯಬಾರದು ಎಂಬ ಕಾರಣಕ್ಕೆ ಬಿಜೆಪಿ ರಾಹುಲ್‍ಗಾಂಧಿ ಹೇಳಿಕೆಯನ್ನು ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಗದ್ದಲ ಎಬ್ಬಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇಂದು ಬೆಳಗ್ಗೆ ಸಂಸತ್ ಕಲಾಪಕ್ಕೂ ಮುನ್ನಾ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆ ಅವರ ಮನೆಯಲ್ಲಿ ಸಭೆ ನಡೆಸಿದ 16 ವಿರೋಧ ಪಕ್ಷಗಳ ನಾಯಕರು, ಸಂಸತ್‍ನಲ್ಲಿ ಅದಾನಿ ಗುಂಪಿನ ಕುರಿತು ಚರ್ಚೆಗೆ ಅವಕಾಶ ಕೇಳುವ ಬೇಡಿಕೆಯನ್ನು ಮತ್ತಷ್ಟು ಪ್ರಬಲವಾಗಿ ಮಂಡಿಸಲು ನಿರ್ಧರಿಸಿವೆ.

ಕಾಂಗ್ರೆಸ್, ಡಿಎಂಕೆ, ಸಿಪಿಐ-ಎಂ, ಜೆಡಿಯು, ಆರ್‍ಜೆಡಿ, ಎನ್‍ಸಿಪಿ, ಎಸ್‍ಪಿ, ಶಿವಸೇನೆ (ಉದ್ಧವ್), ಎಎಪಿ, ಸಿಪಿಐ, ಜೆಎಂಎಂ, ಐಯುಎಂಎಲ್, ಎಂಡಿಎಂಕೆ, ಎನ್‍ಸಿ, ವಿಸಿಕೆ ಮತ್ತು ಕೇರಳ ಕಾಂಗ್ರೆಸ್ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಮಹಿಳಾ ಸಿಬ್ಬಂದಿಯೊಂದಿಗೆ ಸಿಕ್ಕಿ ಬಿದ್ದ ಐಪಿಎಸ್ ಅಧಿಕಾರಿ

ಇದಕ್ಕೂ ಮುನ್ನ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರನ್ನು ಸಂಸತ್ ಭವನದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು.

ಇಂಗ್ಲೆಂಡ್‍ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡುವ ವೇಳೆ ಭಾರತದಲ್ಲಿ ಪ್ರಜಾಪ್ರಭುತ್ವದ ಅಪಾಯದಲ್ಲಿದೆ, ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶ ಪಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ಇದನ್ನು ಪ್ರಮುಖವಾಗಿಟ್ಟುಕೊಂಡಿರುವ ಕಾಂಗ್ರೆಸ್ ಸಂಸತ್‍ನಲ್ಲಿ ನಿನ್ನೆಯಿಂದ ಭಾರೀ ಗದ್ದಲ ನಡೆಸುತ್ತಿದೆ. ರಾಹುಲ್‍ಗಾಂಧಿ ಸದನಕ್ಕೆ ಬರಬೇಕು ಮತ್ತು ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ.

ಬಿಜೆಪಿಗರನ್ನು ಕೆರಳಿಸಿದ ಮೋದಿ ವಿರುದ್ಧದ ರಾಂಧವಾ ಹೇಳಿಕೆ

ಅದರಲ್ಲೂ ಪ್ರಮುಖವಾಗಿ ಮುಂದಿನ ಸಾಲಿನಲ್ಲಿ ಕುಳಿತಿರುವ ಸಚಿವರಾದಿಯಾಗಿ ಪ್ರಮುಖ ನಾಯಕರೇ ರಾಹುಲ್‍ಗಾಂಧಿ ವಿರುದ್ದ ಮುಗಿ ಬಿದ್ದಿದ್ದಾರೆ. ಇದರಿಂದಾಗಿ ನಿನ್ನೆ ಫಲಪ್ರದವಾದ ಕಲಾಪ ನಡೆಯದೇ ಬೆಳಗ್ಗೆ ಸದನ ಸಮಾವೇಶಗೊಂಡು ಮಧ್ಯಾಹ್ನ 2 ಗಂಟೆಗೆ, ನಂತರ ಮಧ್ಯಾಹ್ನ ಕಲಾಪ ಸಮಾವೇಶಗೊಂಡು ಇಂದಿಗೆ ಮುಂದೂಡಲ್ಪಟ್ಟಿತ್ತು.

ಈ ನಡುವೆ ಆಡಳಿತ ಪಕ್ಷದ ಸಂಸದರಿಗೆ ಮಾತ್ರ ಮಾತನಾಡಲು ಅವಕಾಶ ಸಿಕ್ಕಿತ್ತು, ವಿರೋಧ ಪಕ್ಷಗಳ ನಾಯಕರು ಮಾತನಾಡುವ ವೇಳೆಗೆ ಕಲಾಪ ಮುಂದೂಡಿಕೆಯಾಗುತ್ತಿತ್ತು ಎಂಬ ಆರೋಪಗಳನ್ನು ಮಾಡಲಾಗಿತ್ತು.

ಕಾಂಗ್ರೆಸ್‍ನ ಪ್ರಮೋದ್ ತಿವಾರಿ, ನಾಸೀರ್ ಹುಸೇನ್, ಅಮೀ ಯಾಜ್ನಿಕ್, ಕುಮಾರ್ ಕೇತ್ಕರ್, ಜೆ.ಬಿ.ಮಾಥರ್, ನೀರಜ್ ಡಾಂಗಿ ಸೇರಿದ್ದಂತೆ ಅನೇಕ ನಾಯಕರು ಅದಾನಿ ವಿಷಯದ ಬಗ್ಗೆ ಚರ್ಚಿಸಲು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನೋಟಿಸ್ ನೀಡಿದ್ದರು, ಉಭಯ ಸದನಗಳ ಅಧ್ಯಕ್ಷರು ಈ ನೋಟಿಸ್‍ಗಳನ್ನು ತಳ್ಳಿ ಹಾಕಿದ್ದರು.

Opposition, set, corner, govt, Adani issue, Parliament,

Articles You Might Like

Share This Article