BIG NEWS : ಚಂದ್ರಶೇಖರ್ ಸಾವಿನ ಹಿಂದೆ ಸಂಘಟನೆಯೊಂದರ ವ್ಯವಸ್ಥಿತ ಸಂಚು..!?

Social Share

ಬೆಂಗಳೂರು, ನ.4- ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಂಘಟನೆಯೊಂದು ವ್ಯವಸ್ಥಿತ ಸಂಚು ರೂಪಿಸಿ ಕೊಲೆ ಮಾಡಿರುವ ಅನುಮಾನಗಳು ದಟ್ಟವಾಗಿವೆ.

ಅಕ್ಟೋಬರ್ 30ರಿಂದ ನಾಪತ್ತೆಯಾಗಿದ್ದ ಚಂದ್ರಶೇಖರ್ ಅವರ ಕಾರು ನಿನ್ನೆ ಹೊನ್ನಾಳ್ಳಿಯ ನ್ಯಾಮತಿ ಮಧ್ಯೆ ಸೊರಟುರು ಬಳಿ ತುಂಗಾ ಮೇಲ್ದಂಡೆಯ ಕಾಲುವೆಯಲ್ಲಿ ಪತ್ತೆಯಾಗಿದೆ. ಕ್ರೈನ್ ಬಳಸಿ ಕಾರನ್ನು ಮೇಲೆತ್ತಿದ್ದಾಗ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಅವರ ಶವ ಪತ್ತೆಯಾಗಿದೆ.

ಸುಮಾರು 20 ಅಡಿ ನಾಲೆಯಲ್ಲಿ ಕಾರು ಮುಳುಗಿ ಸುಮಾರು ಐದು ದಿನಗಳಾಗಿರುವ ಸಾಧ್ಯತೆಗಳಿದ್ದರಿಂದ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾಸಕ ರೇಣುಕಾಚಾರ್ಯ ಅವರ ಹೇಳಿಕೆಯ ಪ್ರಕಾರ ಚಂದ್ರ ಶೇಖರ್ ಅವರ ಕತ್ತು ಮತ್ತು ಬೆನ್ನಿಗೆ ಮಚ್ಚಿನಿಂದ ಹಲ್ಲೆ ಮಾಡಿ, ಬಿಳಿ ಬಟ್ಟೆಯಲ್ಲಿ ಕೈ ಕಾಲು ಕಟ್ಟಿ ಹಾಕಿ ಹತ್ಯೆ ಮಾಡಿ ಕಾರಿನಲ್ಲಿ ಹಾಕಲಾಗಿದೆ.

ಕಾರನ್ನು ಮೇಲೆತ್ತಿದಾಗ ಕಂಡು ಬಂದ ದೃಶ್ಯಗಳು ಹಲವು ಅನುಮಾನಗಳನ್ನು ಮೂಡಿಸಿವೆ. ಕಾರಿನ ಮುಂಬಾಗ ಜಕ್ಕಂ ಆಗಿತ್ತು. ಮೇಲ್ನೋಟಕ್ಕೆ ಇದು ಅಪಘಾತ ಎಂಬಂತೆ ಬಿಂಬಿತವಾಗಿತ್ತು. ಡೈವರ್ ಬದಿಯ ಸೀಟಿನ ಏರ್ ಬ್ಯಾಗ್ ಒಪನ್ ಆಗಿರಲಿಲ್ಲ.

ಬದಲಾಗಿ ಎಡಬದಿಯ ಸೀಟಿನ ಏರ್‍ಬ್ಯಾಗ್ ತೆಗೆದುಕೊಂಡಿದೆ. ಡ್ರೈವರ್ ಸೀಟಿನ ಬೆಲ್ಟ್ ಲಾಕ್ ಆಗಿದೆ, ಆದರೂ ಚಂದ್ರ ಶೇಖರ್ ಅವರ ಶವ ಹಿಂಬದಿಯ ಸೀಟಿನಲ್ಲಿ ಪತ್ತೆಯಾಗಿದೆ. ಚಂದ್ರ ಶೇಖರ್ ಅವರ ಮೊಬೈಲ್ ಪತ್ತೆಯಾಗಿದ್ದು, ಅದನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.

ರಾಜಕೀಯ ದ್ವೇಷಕ್ಕೆ ಮಗನನ್ನು ಬಲಿ ಪಡೆದಿದ್ದಾರೆ : ರೇಣುಕಾಚಾರ್ಯ

ಚಂದ್ರಶೇಖರ್ ಅವರು ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಯಲ್ಲಿ ವಿನಯ್ ಗುರೂಜಿ ಅವರನ್ನು ಭೇಟಿ ಮಾಡುವುದಾಗಿ ಹೇಳಿ ಹೋಗಿದ್ದರು. ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಅವರ ಮೊಬೈಲ್ ಸ್ವೀಚ್ ಆಫ್ ಆಗಿತ್ತು. ಮೂರ್ನಾಲ್ಕು ದಿನಗಳಿಂದ ಚಂದ್ರ ಶೇಖರ್ ಪತ್ತೆಯಾಗದೆ ಇದ್ದಾಗ, ಬಹುಶಃ ದುಷ್ಕರ್ಮಿಗಳು ಅಪಹರಣ ಮಾಡಿರಬಹುದು ಎಂದು ಶಾಸಕ ರೇಣುಕಾಚಾರ್ಯ ಅವರು ಅನುಮಾನ ವ್ಯಕ್ತ ಪಡಿಸಿದರು.

ಅಪಹರಣಾಕಾರರ ಬೇಡಿಕೆಗಳೇನೆ ಇದ್ದರೂ ಪರಿಗಣಿಸಲು ಸಿದ್ಧನಿದ್ದೇನೆ, ದಯವಿಟ್ಟು ನಮ್ಮ ಮನೆ ಮಗನನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದರು. ಅದಾದ ಎರಡು ದಿನಗಳ ನಂತರ ಕಾಲುವೆಯಲ್ಲಿ ಕಾರಿನೊಂದಿಗೆ ಚಂದ್ರಶೇಖರ್ ಶವ ಪತ್ತೆಯಾಗಿದೆ.ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದ್ದು, ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

ಚಂದ್ರಶೇಖರ್ ಅವರ ಕಾರನ್ನು ಬಿಳಿ ಬಣ್ಣದ ಸ್ವಿಪ್ಟ್ ಕಾರೊಂದು ವಾರದಿಂದ ಹಿಂಬಾಲಿಸುತ್ತಿತ್ತು ಎಂಬ ಮಾಹಿತಿಗಳಿವೆ. ಸ್ನೇಹಿತ ಕಿರಣ್ ಜೊತೆ ಗೌರಿಗದ್ದೆಗೆ ತೆರಳಿದ್ದ ಚಂದ್ರಶೇಖರ್ ಗುರೂಜಿ ಭೇಟಿಯ ಬಳಿಕ ಕಿರಣ್‍ರನ್ನು ಶಿವಮೊಗ್ಗದಲ್ಲಿ ಬಿಟ್ಟು ಹೊನ್ನಾಳಿಯತ್ತ ಪ್ರಯಾಣಿಸಿದ್ದರು ಎಂದು ಹೇಳಲಾಗಿದೆ.

ಪ್ರಕರಣಕ್ಕೆ ಸಂಬಂಸಿದಂತೆ ಕಿರಣ್ ಮತ್ತು ಗುರೂಜಿ ಅವರ ಹೇಳಿಕೆಯನ್ನು ಪಡೆಯಲಾಗಿದೆ. ಕಿರಣ್ ಜೊತೆ ನೀಲಿ ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿ ಬಂದಿದ್ದರು ಎಂದು ಗುರೂಜಿ ಸ್ಪಷ್ಟ ಪಡಿಸಿದ್ದಾರೆ. ಆದರೆ ಚಂದ್ರಶೇಖರ್ ಶವ ಬಿಳಿ ಬಣ್ಣದ ಹುಂಡೈಕ್ರೆಟಾ ಕಾರಿನಲ್ಲಿ ಪತ್ತೆಯಾಗಿದೆ.

ಹಲವು ಸಾಂದರ್ಭಿಕ ಸಾಕ್ಷ್ಯಗಳು, ಮೇಲ್ನೋಟದ ಸನ್ನಿವೇಶಗಳು, ದೂರು, ಕುಟುಂಬದ ಸದಸ್ಯರ ಹೇಳಿಕೆಗಳಿಂದ ಕೊಲೆಯ ಶಂಕೆ ದೃಢವಾಗುತ್ತಿದೆ. ಕಳೆದ ಎಂಟು ತಿಂಗಳ ಹಿಂದೆ ಇಂಟರ್‍ನೆಟ್ ಮೂಲಕ ಶಾಸಕ ರೇಣುಕಾಚಾರ್ಯ ಅವರಿಗೆ ಕರೆಯೊಂದು ಬಂದಿತ್ತು.

ಭೂಮಂಡಲಕ್ಕೆ ಕಾದಿದೆ ಅಪಾಯ, ಆತಂಕ ವ್ಯಕ್ತಪಡಿಸಿದ ಗುಟೆರೆಸ್

ಹಿಜಾಬ್, ಆಜಾನ್‍ನಂತಹ ವಿಷಯಗಳ ಬಗ್ಗೆ ಮಾತನಾಡುತ್ತಿರುವ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಮುಗಿಸಿತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು. ಈ ಕುರಿತು ರೇಣುಕಾಚಾರ್ಯ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಎಲ್ಲಾ ಘಟನೆಗಳನ್ನು ಆಧರಿಸಿ ಚಂದ್ರ ಶೇಖರ್ ಸಾವಿನ ಹಿಂದೆ ಸಂಘಟನೆಯೊಂದರ ಸಂಚಿರುವ ಅನುಮಾನಗಳು ಕಂಡು ಬರುತ್ತಿವೆ. ವ್ಯವಸ್ಥಿತವಾಗಿ ಸಂಚು ರೂಪಿಸಿ ಹತ್ಯೆ ಮಾಡಿ, ಅಪಘಾತದ ಮಾದರಿಯಲ್ಲಿ ಪ್ರಕರಣವನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಜಿಲ್ಲಾ ಪೊಲೀಸರು ವಿವಿಧ ದೃಷ್ಟಿಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದ ಬಳಿಕೆ ತನಿಖೆಗೆ ಸ್ಪಷ್ಟ ದಿಕ್ಕು ದೊರೆಯಲಿದೆ.

Articles You Might Like

Share This Article