ನವದೆಹಲಿ,ಮಾ.13- ಪ್ರತಿಷ್ಠಿತ ಆಸ್ಕರ್ ಅಕಾಡೆಮಿಯ 95ನೇ ಪ್ರಶಸ್ತಿ ಸಮಾರಂಭಕ್ಕೆ ಕೊನೆಗೂ ತೆರೆಬಿದ್ದಿದ್ದು, ಭಾರತದ ಪ್ರತಿಷ್ಠಿತ ಚಿತ್ರವಾದ ಆರ್‍ಆರ್‍ಆರ್‍ನ ನಾಟೂ ನಾಟೂ ಗೀತೆಗೆ ಹಾಗೂ ದಿ ಎಲಿಫೆಂಟ್ ವಿಸ್ಟರರ್ಸ್ ಸಾಕ್ಷ್ಯ ಚಿತ್ರವು ಮಹೋನ್ನತ ಕಿರೀಟವನ್ನು ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದೆ.
ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಸ್ಲಂ ಡಾಗ್ ಮಿಲೇನೇಯರ್ ಸಿನಿಮಾದ ಜೈಹೋ ಸಿನಿಮಾದ ನಂತರ ಭಾರತದಿಂದ ಹಲವು ಚಿತ್ರಗಳು ಆಸ್ಕರ್‍ಗೆ ಲಗ್ಗೆ ಇಟ್ಟಿದ್ದವಾದರೂ ಮುಕುಟ ಗೆಲ್ಲುವಲ್ಲಿ ಎಡವಿದವು. ಈ ಬಾರಿ ನಾಟು ನಾಟು ಗೀತೆ ಮತ್ತು ದಿ ಎಲಿಫೆಂಟ್ ವಿಸ್ಟರರ್ಸ್‍ಗೆ ಆಸ್ಕರ್ ಲಭಿಸುವ ಮೂಲಕ ಡಬ್ಬಲ್ ಖುಷಿ ತಂದುಕೊಟ್ಟಿವೆ.
BIG NEWS: ಆಸ್ಕರ್ ಗೆದ್ದ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು
ಈ ಬಾರಿಯ ಆಸ್ಕರ್ ವಿಭಾಗದಲ್ಲಿ ಹಾಲಿವುಡ್‍ನ ಖ್ಯಾತ ನಿರ್ದೇಶಕ ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್ ನಿರ್ದೇಶನದ ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್ ಸಿನಿಮಾದ ಅತ್ಯುತ್ತಮ ಪ್ರಶಸ್ತಿ ಪಡೆದರೆ, ದಿ ವೇಲ್ ಸಿನಿಮಾದ ನಟನೆಗಾಗಿ ಬ್ರೆಂಡನ್ ಫ್ರೆಸರ್ ಅತ್ಯುತ್ತಮ ನಟ, ಎವ್ರಿಥಿಂಗ್ ಎವ್ರಿವೇರ್ ಆಲ್ ಎಟ್ ಒನ್ಸ್ ನಟನೆಗಾಗಿ ಮಿಶೆಲ್ ಯೋ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಶಸ್ತಿಯ ಸಂಪೂರ್ಣ ವಿವರ ಇಲ್ಲಿದೆ:
- ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ ಅನಿಮೇಟೆಡ್ ಫೀಚರ್ ಪ್ರಶಸ್ತಿಗೆ ಪಾತ್ರವಾಗಿದೆ.
- ಪೋಷಕ ನಟ – ಕೆ ಹುಯ್ ಕ್ವಾನ್ (ಎವರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)
- ಪೋಷಕ ನಟಿ – ಜೇಮೀ ಲೀ ಕರ್ಟಿಸ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್)
- ಡಾಕ್ಯುಮೆಂಟರಿ ಫೀಚರ್ – ನವಲ್ನಿ
- ಲೈವ್-ಆಕ್ಷನ್ ಶಾರ್ಟ್ – ಆನ್ ಐರಿಶ್ ಗುಡ್ ಬೈ
- ಸಿನಿಮಾಟೋಗ್ರಫಿ – ಆಲ್ ಸೈಯಟ್ ಆನ್ ದಿ ವೆಸ್ಟರ್ನ್ ಫ್ರಂಟ್
- ಮೇಕಪ್ ಮತ್ತು ಹೇರ್ – ದಿ ವೇಲ್
- ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ – ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್.
- ದಿ ಎಲಿಫೆಂಟ್ ವಿಸ್ಪರರ್ಸ್-ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ
- ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ – ದಿ ಬಾಯ್, ದಿ ಮೋಲ್, ದಿ ಫಾP್ಸï ಮತ್ತು ಹಾರ್ಸ್ ,
- ಪ್ರೊಡಕ್ಷನ್ ಡಿಸೈನ್ – ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್.
- ಒರಿಜಿನಲ್ ಸ್ಕೋರ್- ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್.
- ವಿಷುಯಲ್ ಎಫೆಕ್ಟ್- ಅವತಾರ್: ದಿ ವೇ ಆಫ್ ವಾಟರ್.
- ಒರಿಜಿನಲ್ ಸ್ಕ್ರೀನ್‍ಪ್ಲೇ- ಎವೆರಿಥಿಂಗ್ ಎವೆರಿವೇರ್ ಆಲ್ ಎಟ್ ಒನ್ಸ್
- ಅಡಾಪ್ಟೆಡ್ ಸ್ಕ್ರೀನ್‍ಪ್ಲೇ- ವುಮೆನ್ ಟಾಕಿಂಗ್.
- ಸೌಂಡ್ – ಟಾಪ್ ಗನ್: ಮೇವರಿಕ್ ಬೆಸ್.
- ಒರಿಜಿನಲ್ ಸಾಂಗ್ – ನಾಟು ನಾಟು(ಆರ್‍ಆರ್‍ಆರ್)
- ಎಡಿಟಿಂಗ್ – ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
- ಡೈರೆಕ್ಟರ್ – ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ (ಎವೆರಿಥಿಂಗ್ ಎವೆರಿರ್ವೇ ಆಲ್ ಅಟ್ ಒನ್ಸ್ ï)
- ಅತ್ಯುತ್ತಮ ನಟ- ಬ್ರೆಂಡನ್ ಫ್ರೇರ್ಸ (ದಿ ವೇಲ್)
- ಅತ್ಯುತ್ತಮ ನಟಿ – ಮಿಚೆಲ್ ಯೋಹ್ (ಎವೆರಿಥಿಂಗ್ ಎವರಿವೇರ್ ಆಲ್ ಅಟ್ಒನ್ಸ್)
- ಅತ್ಯುತ್ತಮ ಸಿನಿಮಾ – ಎವೆರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್
Oscars 2023, RRR, The Elephant Whisperers, Oscars, win,