BIG NEWS: ಆಸ್ಕರ್ ಗೆದ್ದ ಆರ್‌ಆರ್‌ಆರ್‌ ಚಿತ್ರದ ‘ನಾಟು ನಾಟು’ ಹಾಡು

Social Share

ನವದೆಹಲಿ, ಮಾ. 13- ಬಹು ನಿರೀಕ್ಷೆಯಂತೆಯೇ ರಾಜಮೌಳಿ ನಿರ್ದೇಶನದ ಮಹೋನ್ನತ ಚಿತ್ರವಾದ ಆರ್‍ಆರ್‍ಆರ್ ಸಿನಿಮಾದ ಜನಪ್ರಿಯ ಗೀತೆಯಾದ ನಾಟು ನಾಟು ಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗರಿಮೆ ಲಭಿಸಿದೆ. ಹಾಲಿವುಡ್ ಗೀತೆಗಳನ್ನು ಹಿಂದಿಕ್ಕುವ ಮೂಲಕ ಇತಿಹಾಸ ಸೃಷ್ಟಿಸಿದೆ.

95ನೇ ಸಾಲಿನ ಆಸ್ಕರ್ ಆಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಟು ನಾಟು ಗೀತೆಗೆ ಆಸ್ಕರ್ ಪ್ರಶಸ್ತಿ ಸಂದಿದ್ದು, ಕೋಟ್ಯಾನುಕೋಟಿ ಅಭಿಮಾನಿಗಳ ಪ್ರಾರ್ಥನೆ ಲಭಿಸಿದೆ.

ನಾಟು ನಾಟು ಗೀತೆಯು ತನ್ನ ಮೇಕಿಂಗ್‍ನಿಂದ ಸಾಕಷ್ಟು ಸದ್ದು ಮಾಡಿತ್ತಲ್ಲದೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಮುಕುಟವನ್ನು ಧರಿಸಿತ್ತು. ಈಗ ಆಸ್ಕರ್ ಪ್ರಶಸ್ತಿಯು ಲಭಿಸುವ ಮೂಲಕ ಗೀತೆಗೆ ಮತ್ತೊಂದು ವಿಶ್ವ ಕಿರೀಟ ಲಭಿಸಿದಂತಾಗಿದೆ.

ದೇಶದಲ್ಲಿ ಸಂಪರ್ಕ ಕ್ರಾಂತಿ, ರಾಜ್ಯಕ್ಕೆ 3 ಲಕ್ಷ ಕೋಟಿ : ನೀತಿನ್ ಗಡ್ಕರಿ

ವಿಶ್ವದಾದ್ಯಂತ ಜನಪ್ರಿಯತೆ ಪಡೆದಿದ್ದ ಆರ್‍ಆರ್ ಆರ್ ಗೀತೆಗೆ ಆಸ್ಕರ್ ಪ್ರಶಸ್ತಿ ಲಭಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತಾದರೂ, ಈ ಗೀತೆಗೆ ಅಮೇರಿಕಾದ ಟೆಲ್ ಇಟ್ ಲೈಕ್ ಎ ವುಮೆನ್ ಸಿನಿಮಾದ ಅಪ್ಲಾಜ್ ಗೀತೆ, ಟಾಪ್‍ಗನ್ ಮ್ಯಾವರಿಕ್ ಚಿತ್ರದಿಂದ ಹೋಲ್ಡ್ ಮೈ ಹ್ಯಾಂಡ್, ಬ್ಲಾಕ್ ಫ್ಯಾಂಥರ್ ವಕಾಂಡ ಫರೆವರ್ ಸಿನಿಮಾದ ಲಿಫ್ಟ್ ಮಿ ಅಪ್ ಮತ್ತು ಎವ್ರೀಥಿಂಗ್ ಎವ್ರೀ ವೇರ್ ಆಲ್ ಎಟ್ ವನ್ಸ್ ಸಿನಿಮಾದ ದಿಸ್ ಈಸ್ ಎ ಲೈಫ್ ಗೀತೆಗಳು ಪ್ರಬಲ ಪೈಪೋಟಿ ನೀಡಿದರೂ ಅಂತಿಮವಾಗಿ ನಾಟು ನಾಟು ಗೀತೆಗಳು ಜ್ಯೂರಿಗಳ ಮನ ಗೆದ್ದು ಆಸ್ಕರ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಕಾಂಗ್ರೆಸ್ ನನ್ನನ್ನು ಮುಗಿಸುವ ಕನಸು ಕಾಣುತ್ತಿದೆ ; ಮೋದಿ ಗುಡುಗು

ಸಮಾರಂಭದಲ್ಲಿ ಆರ್‍ಆರ್‍ಆರ್ ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಹಾಗೂ ಗೀತ ರಚನೆಕಾರ ಚಂದ್ರಬೋಸ್ ಅವರು ಪಾಲ್ಗೊಂಡು ಆಸ್ಕರ್ ಪ್ರಶಸ್ತಿಯನ್ನು ಪಡೆದರು.

NaatuNaatu, #Oscars2023, #Best, #Original, #Song, #AcademyAwards,

Articles You Might Like

Share This Article