ಒಟಿಪಿ ಪಡೆದು ಹಣ ವರ್ಗಾವಣೆ; ಇಬ್ಬರು ವಂಚಕರು ಖಾಕಿ ಬಲೆಗೆ

Social Share

ಬೆಂಗಳೂರು, ಫೆ.26- ಸಾರ್ವಜನಿಕರಿಂದ ಒಟಿಪಿ ಪಡೆದು ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಇಬ್ಬರು ವಂಚಕರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೀದರ್ ಮೂಲದ ಶಿವಪ್ರಸಾದ್ (33) ಮತ್ತು ದೆಹಲಿ ಮೂಲದ ಪಂಕಜ್ ಚೌಧರಿ (24) ಬಂಧಿತ ಆರೋಪಿಗಳು.
ಅಪರಿಚಿತ ವ್ಯಕ್ತಿ 9355116388 ನಂಬರ್‍ನಿಂದ ಪಿರ್ಯಾದುದಾರರೊಬ್ಬರಿಗೆ ದೂರವಾಣಿ ಕರೆ ಮಾಡಿ ಬಿಬಿಎಂಬಿ ವಾರ್ಡ್ ಕಚೇರಿ ಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಬೂತ್ ಲೆವೆಲ್ ಕಚೇರಿಯ ಅಲಯನ್ಸ್ ಫೀಸ್ ಪಾವತಿಸುದ್ದೇನೆ ಎಂದು ನಂಬಿಸಿ ಅವರ ಡೆಬಿಟ್ ಕಾರ್ಡ್ ನಂಬರ್, ಸಿವಿವಿ, ಎಕ್ಸಪೈರಿ ಡೇಟ್ ಮತ್ತು ಒಟಿಪಿ ಪಡೆದುಕೊಂಡು ಪಿರ್ಯಾದುದಾರರ ಬ್ಯಾಂಕ್ ಖಾತೆಯಿಂದ 17,111ರೂ. ಪಡೆದು ವಂಚಿಸಿದ್ದಾನೆ.
ಈ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ನಗರದ ಆನಂದರಾವ್ ಸರ್ಕಲ್ ಬಳಿಯ ಹೊಟೇಲ್ ವೊಂದರಲ್ಲಿ ಆರೋಪಿ ಶಿವಪ್ರಸಾದ್‍ನನ್ನು ಪತ್ತೆ ಮಾಡಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಸಾರ್ವಜನಿಕರಿಗೆ ಕರೆ ಮಾಡಿ ಒಟಿಪಿ ಪಡೆದು ವಂಚನೆ ಮಾಡುತ್ತಿದ್ದು, ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ.
ಅಲ್ಲದೆ, ಕೆಲವೊಮ್ಮೆ ಆನ್‍ಲೈನ್ ಮುಖಾಂತರ ಮೊಬೈಲ್ನ್‍ಫೋಗಳನ್ನು ಖರೀದಿಸಿ ಈ ಫೋನ್‍ಗಳನ್ನು ಒಎಲ್‍ಎಕ್ಸ್ ನಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುದಾಗಿ ಆರೊಪಿ ತಿಳಿಸಿದ್ದಾನೆ. ಈತನ ಹೇಳಿಕೆ ಮೇರೆಗೆ 6 ಸಾವಿರ ನಗದು, 8 ಮೊಬೈಲ್ ಫೋನ್ ವಶಪಡಿಸಿಕೊಂಡು ಕಾರ್ಯಾ ಚರಣೆ ಮುಂದುವರಿಸಿದ್ದರು.
ಆರೊಪಿಯು ಕೃತ್ಯಕ್ಕೆ ಬಳಸಲು ನಕಲಿ ಸಿಮ್ ಕಾರ್ಡ್‍ಗಳನ್ನು ಮತ್ತು ನಕಲಿ ಬ್ಯಾಂಕ್ ಖಾತೆಗಳನ್ನು ನೀಡುತ್ತಿದ್ದ ಮತ್ತೊಬ್ಬ
ಆರೋಪಿ ಪಂಕಜ್ ಚೌಧರಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ದೆಹಲಿಗೆ ಹೋಗಿ ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದು ವಿಚಾರಣೆಗೊಳಪಡಿಸಿ 16,000 ನಗದು, ಒಂದು ಮೊಬೈಲ್ ಫೋನ್ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಇಬ್ಬರು ಆರೋಪಿಗಳ ವಿರುದ್ಧ 2017ರಲ್ಲಿ ಅಸ್ಸಾಂ ರಾಜ್ಯದಲ್ಲಿ, 2018ರಲ್ಲಿ ಮಹಾರಾಷ್ಟ್ರ ರಾಜ್ಯದ ಪೂನಾ ನಗರದಲ್ಲಿ, 2019ರಲ್ಲಿ ಬೆಂಗಳೂರು ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ, 2021ರಲ್ಲಿ ಮೈಸೂರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ, ದಾವಣಗೆರೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಹಾಗೂ ಶಿವಮೊಗ್ಗ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿಯೂ ಸಹ ಪ್ರಕರಣ ದಾಖಲಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಆರೊಪಿ ಶಿವಪ್ರಸಾದ್ ಜನವರಿಯಲ್ಲಿ ಮೈಸೂರು ನಗರದ ಜೈಲಿನಿಂದ ಹೊರ ಬಂದ ಮೇಲೆ ಇದೇ ರೀತಿಯ ಕೃತ್ಯಗಳನ್ನು ಮುಂದುವರೆಸಿದ್ದನು.
ಈತನ ಬಂಧನದಿಂದ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ 3 ಪ ್ರಕರಣ, ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆ, ಪಶ್ಚಿಮ ವಿಭಾಗದ ಸಿಇಎನ್ ಪೊಲೀಸ್ ಠಾಣೆ, ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ಹಾಗೂ ರಾಯಚೂರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ಸೇರಿ ಒಟ್ಟಾರೆ 8 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಅನೂಪ್ ಎ.ಶೆಟ್ಟಿ, ಸಿಇಎನ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಸಂತೋಷ್ ರಾಮ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡು ಇಬ್ಬರು ವಂಚಕರನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ.

Articles You Might Like

Share This Article