ರಾಹುಲ್‍ ಗಾಂಧಿ ಕ್ಷಮೆಗೆ ಒತ್ತಾಯಿಸುವುದು ಪ್ರತಿಯೊಬ್ಬ ಸಂಸದರ ಕರ್ತವ್ಯ : ಕಿರಣ್‍ ರಿಜಿಜು

Social Share

ನವದೆಹಲಿ,ಮಾ.16- ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿರುವ ರಾಹುಲ್‍ಗಾಂಧಿಯವರು ಸಂಸತ್‍ನಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸುವುದು ಪ್ರತಿಯೊಬ್ಬ ಸಂಸದರ ಕರ್ತವ್ಯ ಎಂದು ಕೇಂದ್ರ ಕಾನೂನು ಸಚಿವ ಕಿರಣ್‍ರಿಜಿಜು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ವಿರೋಧಿ ಶಕ್ತಿಗಳು ವಿದೇಶದಲ್ಲಿ ಭಾರತವನ್ನು ದೂಷಿಸಲು ಸಂಚು ರೂಪಿಸಿವೆ. ರಾಹುಲ್ ಗಾಂಯವರ ಭಾಷೆಯನ್ನೇ ಅವರ ಗ್ಯಾಂಗ್ ಮಾತನಾಡುತ್ತಿದೆ. ಕಾಂಗ್ರೆಸ್ ಪಕ್ಷ ರಾಹುಲ್‍ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಾದರೆ ಅದಕ್ಕೆ ಸಂಸತ್ತಿನಲ್ಲಿ ಜನರನ್ನು ಪ್ರತಿನಿಸುವ ಅರ್ಹತೆ ಇಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ತಪ್ಪುಗಳಿಂದ ನಾಶವಾಗಿದೆ.

ಆ ಪಕ್ಷದ ಬೆಳವಣಿಗೆಗಳ ಬಗ್ಗೆ ನಮಗೆ ಯಾವುದೇ ಹಿತಾಸಕ್ತಿಗಳಿಲ್ಲ. ಆದರೆ ಅವರ ಮಾತಿನ ಮೂಲಕ ಭಾರತವನ್ನು ದೂಷಿಸುವ ಹಕ್ಕು ಅವರಿಗೆ ಇಲ್ಲ, ದನ್ನು ನಾವು ಸಹಿಸುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಯಿಂದ ಯಾರೂ ಮೌನವಾಗಿರಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಮುಂದಿನ ದಿನಗಳಲ್ಲಿ ಇದೇ ವಿಷಯವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ರಿಜಿಜು ಹೇಳಿದರು.

ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಲ್ಲರೂ ಕಾಳಜಿ ವಹಿಸುತ್ತಾರೆ. ದೇಶವನ್ನು ದೂಷಿಸುವ ಹಕ್ಕು ಯಾರಿಗೂ ಇಲ್ಲ, ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ ಎಂದರೆ, ಅದು ರಾಷ್ಟ್ರವನ್ನು ಟೀಕಿಸಲು ನೀಡಿದ ಅವಕಾಶ ಎಂದರ್ಥವಲ್ಲ ಎಂದು ಕಿಡಿಕಾರಿದರು.

KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಸಿಎಂ ಸಮ್ಮತಿ

ಲಂಡನ್‍ನಲ್ಲಿ ರಾಹುಲ್‍ಗಾಂಧಿ ಭಾರತದ ಬಗ್ಗೆ ಸುಳ್ಳು ಹೇಳಿದ್ದಾರೆ. ಸಂಸತ್ತಿನಲ್ಲಿ ಮಾತನಾಡಲು ತಮಗೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು. ಅವರು ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ಮಾತನಾಡಿದ್ದಾರೆ, ಮುಕ್ತವಾಗಿ ಮಾತನಾಡಿದ್ದಾರೆ. ಅವರು ಮಾತನಾಡಿರುವುದರಲ್ಲಿ ಯಾವುದೇ ಹುರುಳಿಲ್ಲ.

ಎರಡನೆಯದಾಗಿ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಮಾತನಾಡಲು ಅವಕಾಶವಿಲ್ಲ ಎಂದು ಗಾಂಧಿ ಹೇಳಿದ್ದಾರೆ. ಇದು ಕೂಡ ಸುಳ್ಳಾಗಿದ್ದು, ರಾಷ್ಟ್ರಕ್ಕೆ ಅಪಮಾನ ಮಾಡುವುದಾಗಿದೆ. ರಾಹುಲ್‍ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರತಿದಿನ ಸರ್ಕಾರವನ್ನು ಟೀಕಿಸುತ್ತಿದ್ದರು. ರಾಹುಲ್ ದೇಶದಲ್ಲಿ ಹೆಚ್ಚು ಮಾತನಾಡುವ ವ್ಯಕ್ತಿ ಎಂದು ಅವರು ಹೇಳಿದರು.

ಗಾಂಯವರು ಸಂಸತ್ತಿನ ಸದಸ್ಯರಾಗಿದ್ದರೂ ಅದರ ಘನತೆಗೆ ಧಕ್ಕೆ ತರುತ್ತಿದ್ದಾರೆ. ಸಂವಿಧಾನ ಮತ್ತು ನ್ಯಾಯಾಂಗವನ್ನು ಅವಮಾನಿಸಿದ್ದಾರೆ. ಭಾರತೀಯರಿಗೆ ರಾಹುಲ್‍ಗಾಂಧಿ ಏನು ಎಂದು ಗೋತ್ತು, ಆದರೆ ವಿದೇಶದಲ್ಲಿರುವವರು ಅವರು ಹೇಳಿದ್ದನ್ನು ಸತ್ಯ ಎಂದು ನಂಬುವ ಸಾಧ್ಯತೆ ಇದೆ. ಹೀಗಾಗಿ ರಾಹುಲ್‍ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನ ರಾಹುಲ್‍ಗಾಂಧಿ ಅವರನ್ನು ಪ್ರಶ್ನಿಸುತ್ತಾರೆ ಎಂದು ಹೇಳಿದರು.

#OurDuty, #lawmakers, #RahulGandhi, #apology, #Parliament, #KirenRijiju,

Articles You Might Like

Share This Article